Home Mangalorean News Kannada News ಎ.ಟಿ.ಎಂ ಯಂತ್ರಗಳಿಗೆ ಸ್ಕೀಮರ್ ಅಳವಡಿಸಿ ಹಣ ಡ್ರಾ: ಇಬ್ಬರು ವಿದೇಶಿಯರ ಬಂಧನ

ಎ.ಟಿ.ಎಂ ಯಂತ್ರಗಳಿಗೆ ಸ್ಕೀಮರ್ ಅಳವಡಿಸಿ ಹಣ ಡ್ರಾ: ಇಬ್ಬರು ವಿದೇಶಿಯರ ಬಂಧನ

Spread the love

ಎ.ಟಿ.ಎಂ ಯಂತ್ರಗಳಿಗೆ ಸ್ಕೀಮರ್ ಅಳವಡಿಸಿ ಹಣ ಡ್ರಾ: ಇಬ್ಬರು ವಿದೇಶಿಯರ ಬಂಧನ

ಬೆಂಗಳೂರು: ಎಟಿಎಂ ಯಂತ್ರಗಳಿಗೆ ಸ್ಕೀಮರ್‌ ಮಿಷನ್‌ ಅಳವಡಿಸಿ ಗ್ರಾಹಕರ ಡೇಟಾವನ್ನು ಕಳವು ಮಾಡಿ ನಕಲಿ ಎಂಟಿಗಳನ್ನು ತಯಾರು ಮಾಡಿ ಗ್ರಾಹಕರ ಹಣವನ್ನು ದುರ್ಬಳಕೆ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರು ವಿದೇಶಿ ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಉಗಾಂಡ ಮೂಲದ ಸದ್ಯ ಬೆಂಗಳೂರಿನ ಯಲಹಂಕ ಕೋಗಿಲು ಎಂಬಲ್ಲಿ ನೆಲೆಸಿರುವ ಫೆಲಿಕ್ಸ್‌ ಕಿಸಿಬೊ (25) ಹಾಗೂ ತಾಂಜೇನಿಯಾದ ಮೂಲದ ಸದ್ಯ ಯಲಹಂಕ ಕೋಗಿಲುನಲ್ಲಿ ನೆಲೆಸಿರುವ ಮಹಿಳೆ ಖೈರುನ್ ಅಬ್ದುಲ್ಲಾ (32) ಬಂಧಿತ ಆರೋಪಿಗಳು.

ತಮ್ಮ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಅಳವಡಿಸಿರುವ ಕ್ಯಾಮರಾ ಪರಿಶೀಲಿಸಿದಾಗ, ಇಬ್ಬರು ವಿದೇಶಿಯರು ತುಂಬಾಹೊತ್ತು ಎಟಿಎಂ ಕೇಂದ್ರದೊಳಗೆ ನಿಂತು ಹಲವು ಎಟಿಎಂ ಕಾರ್ಡ್‌ಗಳಿಂದ ಹಣ ಡ್ರಾ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಬ್ಯಾಂಕ್ ಸಿಬ್ಬಂದಿ ಅಲ್ಲಿಗೆ ಹೋಗಿ ವಿಚಾರಿಸಿದಾಗ ಗಾಬರಿಗೊಂಡು ಅವರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಆರ್‌.ಟಿ.ನಗರ ಗಂಗಾನಗರ ಯೂನಿಯನ್ ಬ್ಯಾಂಕ್ ಮಾನೇಜರ್ ಶ್ರೀನಿವಾಸ್ ರೆಡ್ಡಿ ಅವರು ಜೂನ್ 18ರಂದು ಆರ್‌.ಟಿ.ನಗರ ಠಾಣೆಗೆ ದೂರು ನೀಡಿದ್ದರು.

ಐಟಿ ಕಾಯ್ದೆ ಮತ್ತು ಮೋಸದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ಅವರಿಂದ 12 ವಿವಿಧ ಬ್ಯಾಂಕುಗಳ ಎಟಿಎಂ ಕಾರ್ಡ್‌ಗಳು, ಮೂರು ಮೊಬೈಲ್‌ ಫೋನ್‌ಗಳು, ಒಂದು ಲ್ಯಾಪ್‌ಟಾಪ್‌, ಸ್ಕೀಮರ್ ಮಿಷನ್, ಲೋಡರ್, ಹಿಡನ್ ಕ್ಯಾಮರಾ, ಒಂದು ಬ್ಯಾಗ್‌ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆ.ಸಿ.ನಗರ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಅವರ ಮಾರ್ಗದರ್ಶನದಲ್ಲಿ ಆರ್‌.ಟಿ.ನಗರ ಪೊಲೀಸ್ ಇನ್ಸ್‌ ಪೆಕ್ಟರ್ ವಿ.ಜೆ.ಮಿಥುನ್ ಶಿಲ್ಪಿ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಕೆ.ಎಸ್.ಪ್ರೇಮಕುಮಾರಿ, ಮಾರುತಿ, ಹನುಮಂತರಾಯಪ್ಪ, ಯಲ್ಲವ್ವ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love

Exit mobile version