Home Mangalorean News Kannada News ಎ.7: ಉದ್ಯಾವರ ನವೀಕೃತ ಸಿದ್ದೀಕ್-ಇ-ಅಕ್ಬರ್ ಜಾಮೀಯ ಮಸೀದಿ ಲೋಕಾರ್ಪಣೆ

ಎ.7: ಉದ್ಯಾವರ ನವೀಕೃತ ಸಿದ್ದೀಕ್-ಇ-ಅಕ್ಬರ್ ಜಾಮೀಯ ಮಸೀದಿ ಲೋಕಾರ್ಪಣೆ

Spread the love

ಎ.7: ಉದ್ಯಾವರ ನವೀಕೃತ ಸಿದ್ದೀಕ್-ಇ-ಅಕ್ಬರ್ ಜಾಮೀಯ ಮಸೀದಿ ಲೋಕಾರ್ಪಣೆ

ಉಡುಪಿ: ಸರ್ವಧರ್ಮಗಳ ಸೌಹಾರ್ದತೆಯ ನೆಲೆಬೀಡಾಗಿರುವ ಉದ್ಯಾವರ ಪೇಟೆಯ ಸಮೀಪದಲ್ಲಿ ನವೀಕೃತಗೊಂಡಿರುವ ಸಿದ್ದೀಕ್-ಇ-ಅಕ್ಬರ್ ಜಾಮೀಯ ಮಸೀದಿಯು ಎಪ್ರೀಲ್ 7 ರಂದು ಶುಕ್ರವಾರ ಉದ್ಘಾಟನೆಗೊಳ್ಳಲಿದೆ ಎಂದು ಮಸೀದಿಯ ಗೌರವಾಧ್ಯಕ್ಷರಾದ ಅಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ತಿಳಿಸಿದರು.

ಅವರು ಬುಧವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ 1926ರಲ್ಲಿ ಉದ್ಯಾವರ ಪರಿಸರದ ಮುಸ್ಲಿಂ ಭಾಂಧವರಿಗೆ ಪ್ರಾರ್ಥನೆಗಾಗಿ ಆ ಕಾಲದ ಹಿರಿಯ ಮುಸ್ಲಿಂ ಬಾಂಧವರು ತಮ್ಮದೇ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಮಸೀದಿಯು 1989ರಲ್ಲಿ ಈ ಭಾಗದ ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಣೆಗೊಂಡಿತು. ಪ್ರಸ್ತುತ ಸುಮಾರು 1000 ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನೂಕೂಲವಾಗಹುವ ರೀತಿಯಲ್ಲಿ ಮಸೀದಿಯನ್ನು ಪುನರ್ ನಿರ್ಮಿಸಲಾಗಿದೆ.

ಆಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ಅವರ ಗೌರವಾಧ್ಯಕ್ಷತೆಯಲ್ಲಿ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಅಝೀಜ್ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರ ಮುತುವರ್ಜಿಯಲ್ಲಿ ಹಾಗೂ ಉದ್ಯಾವರ ಮುಸ್ಲಿಂ ಯುನಿಟಿ ದುಬೈ ಯುಎಇ ಮತ್ತು ಊರ ದಾನಿಗಳ ಸಹಕಾರದೊಂದಿಗೆ ಕೇವಲ 8 ತಿಂಗಳ ಅವಧಿಯಲ್ಲಿ ವಿಸ್ತಾರವಾದ ಮಸೀದಿಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.

ಪ್ರಾರ್ಥನೆ ಸಲ್ಲಿಸುವ ಸ್ಥಳವನ್ನು ಮರದ ಕೆತ್ತನೆಯಿಂದ ವಿಶೇಷವಾಗಿ ನಿರ್ಮಿಸಲಾಗಿದ್ದು, ಮಸೀದಿಯ ಮೇಲ್ಭಾಗದಲ್ಲಿ ರಚಿಸಲಾದ ಗೋಲಗುಮ್ಮಟ ನೋಡುಗರನ್ನು ಆಕರ್ಷಿಸುಸ್ತಿದೆ.ಮಸೀದಿಯಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ನಮ್ಮ ಮಸೀದಿಯು ಬಡ ಕುಟುಂಬದ ಮದುವೆಗೆ ಸಹಕಾರ, ವಿದ್ಯಾರ್ಥಿಗಳಿಗೆ ಸಹಾಯಧನ, ಬಡರೋಗಿಗಳಿಗೆ ನಿಂತರ ವೈದ್ಯಕೀಯ ನೆರವನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಉದ್ಯಾವರ ಗ್ರಾಮದ ಅಭಿವೃದ್ಧಿಯಲ್ಲಿ ಮುಸ್ಲಿಂ ಸಮಾಜ ಭಾಂಧವರು ಜಾತಿ ಮತ ಭೇಧವಿಲ್ಲದೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ನವೀಕೃತ ಮಸೀದಿಯ ಉದ್ಘಾಟನೆಯು ಜುಮ್ಮಾ ನಮಾಝ್ ಮೊದಲು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಕುಂದಾಪುರ ಕಂಡ್ಲೂರಿನ ಝಿಯಾ ಏಜುಕೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರಾದ ಮೌಲಾನ ಉಬೇದುಲ್ಲವಾರು ನದ್ವಿ ಅವರಿಂದಿ ಜುಮ್ಮಾ ನಮಾಝ್ ಮೂಲಕ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ಆಸುಪಾಸಿನ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸುವ ನೀರಿಕ್ಷೆಯಿದೆ.

ಸಂಜೆ ನಡೆಯುವ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಾವರ ಹಲೀಮಾ ಸಾಬ್ಝು ಚಾರೀಟೇಬಲ್ ಟ್ರಸ್ಟ್ ಇದರ ಮ್ಹಾಲಕರಾದ ಮತ್ತು ಮಸೀದಿಯ ಗೌರವಾಧ್ಯಕ್ಷರಾದ ಅಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ವಹಿಸಲಿರುವರು. ಕುಂದಾಪುರ ಕಂಡ್ಲೂರಿನ ಝಿಯಾ ಏಜುಕೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರಾದ ಮೌಲಾನ ಉಬೇದುಲ್ಲವಾರು ನದ್ವಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್, ಕಾಪು ಶಾಸಕರಾದ ವಿನಯ್ ಕುಮಾರ್ ಸೊರೆಕೆ, ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ ಎಂ ಎ ಸಲೀಮ್, ಉದ್ಯಾವರ ಜಾಮೀಯ ಮಸೀದಿಯ ಇಮಾಮ್ ಅಬ್ದುಲ್ ರಶೀದ್ ರೆಹಮಾನಿ, ಉದ್ಯಾವರ ಜಾಮೀಯಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ರಶೀದ್ ರೆಹಮಾನಿ, ಉದ್ಯಾವರ ಸೈಂಟ್ ಝೇವಿಯರ್ ಚರ್ಚಿನ ಧರ್ಮಗುರುಗಳಾದ ವಂ ರೋಕ್ ಡಿಸೋಜಾ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧೀ ನಿಗಮದ ಅಧ್ಯಕ್ಷರಾದ ಎಂ ಎ ಗಫೂರ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಕಾಪು ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಮಲ್ಪೆಯ ಉದ್ಯಮಿ ಎಫ್ ಎಂ ಯಾಕುಬ್ ಖಾನ್, ಮಸೀದಿಯ ಅಧ್ಯಕ್ಷರಾದ ಅಫ್ಜಲ್ ರಶೀದ್, ಉದ್ಯಾವರ ಮುಸ್ಲಿಂ ಯಂಗ್ ಮೇನ್ಸ್ ಅಸೋಶಿಯೇಶನ್ ಅಧ್ಯಕ್ಷ ಮಹಮ್ಮದ್ ಸುಹೈಲ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷರಾದ ಅಫ್ಜಲ್ ರಶೀದ್, ಹೈದರ್,  ಸತ್ತಾರ್ ಅಜೀಜ್, ಸಮೀರ್ ಶರೀಫ್, ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.


Spread the love

Exit mobile version