ಏಕ್ಸಿಸ್ ಬ್ಯಾಂಕಿಗೆ ತಲುಪಿಸಬೇಕಾಗಿದ್ದ ರೂ. 7.5 ಕೋಟಿ ಹಣದೊಂದಿಗೆ ಹಣ ಸಾಗಾಟ ಏಜೆನ್ಸಿ ಸಿಬಂದಿ ಪರಾರಿ; ದೂರು ದಾಖಲು
ಮಂಗಳೂರು: ಬ್ಯಾಂಕಿಗೆ ಸಾಗಿಸಬೇಕಾದ ಹಣವನ್ನು ಸಾಗಿಸದೆ ಮೋಸ ಮಾಡಿ ನಾಲ್ಕು ಮಂದಿ ಪರಾರಿಯಾದ ಕುರಿತು ಕಂಕನಾಡಿ ಪೋಲಿಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಆರೋಪಿಗಳನ್ನು ಎಸ್ಐಎಸ್ ಪ್ರೋಸಿಜರ್ ಹೋಲ್ಡಿಂಗ್ಸ್ ಕಂಪೆನಿಯ ವಾಹನ ಚಾಲಕ ಕರಿಬಸವ, ಕಸ್ಟೋಡಿಯನ್ ಪರಶುರಾಮ, ಗನ್ ಮ್ಯಾನ್ ಗಳಾದ ಬಸಪ್ಪ, ಪೂವಣ್ಣ ಎಂದು ಗುರುತಿಸಲಾಗಿದೆ.
ಮೇ 11ರಂದು ಬೆಂಗಳೂರಿನ ಕೋರಮಂಗಲ ಏಕ್ಸಿಸ್ ಬ್ಯಾಂಕಿಗೆ ಮಂಗಳೂರಿನ ಯೆಯ್ಯಾಡಿಯಲ್ಲಿರುವ ಏಕ್ಸಿಸ್ ಬ್ಯಾಂಕಿನಿಂದ 7,50 ಕೋಟಿ ನಗದು ಹಣವನ್ನು ಸಾಗಾಟ ಮಾಡಲು ಎಸ್ಐಎಸ್ ಪ್ರೋಸಿಜರ್ ಹೋಲ್ಡಿಂಗ್ಸ್ ಕಂಪೆನಿಯ ಕೆಎ06ಸಿ8389 ಬೊಲೆರೋ ವಾಹನದಲ್ಲಿ ಆರೋಪಿಗಳ ಮಂಗಳೂರಿಗೆ ಬಂದು ಮೇ 11 ರಂದು ಬೆಳಿಗ್ಗೆ 8.30 ಗಂಟೆಗೆ ಯೆಯ್ಯಾಡಿ ಏಕ್ಸಿಸ್ ಬ್ಯಾಂಕ್ ಕರೆನ್ಸಿ ಚೆಸ್ಟಿಗೆ ಮೇಲೆ ತಿಳಿಸಿದ ವಾಹನದಲ್ಲಿ 7.5 ಕೋಟಿ ನಗದು ಹಣವನ್ನು ಬ್ಯಾಂಕಿನಿಂದ ಪಡೆದು ವಾಹನಕ್ಕೆ ತುಂಬಿಸಿದ್ದು, ಏಕ್ಸಿಸ್ ಬ್ಯಾಂಕ್ ಯೆಯ್ಯಾಡಿ ಶಾಖೆಯ ಮುಖ್ಯಸ್ತರಾದ ರಂಜಿತ್ ಅವರು ಕೋರಮಂಗಲದಲ್ಲಿರುವ ಎಕ್ಸಿಸ್ ಬ್ಯಾಂಕಿಗೆ ಹಣವನ್ನು ತಲುಪಿಸಲು ಆದೇಶೀಸಿದರೂ ಈ ಹಣವನ್ನು ಎಸ್ಐಎಸ್ ಪ್ರೋಸಿಜರ್ ಹೋಲ್ಡಿಂಗ್ಸ್ ಕಂಪೆನಿಯ ಸಿಬಂದಿಗಳು ಕೋರಮಂಗಲದಲ್ಲಿರುವ ಎಕ್ಸಿಸ್ ಬ್ಯಾಂಕಿಗೆ ಹಣವನ್ನು ತಲುಪಿಸದೆ ನಂಬಿಕೆ ದ್ರೋಹ ಮಾಡಿ,ಮೋಸ ಮಾಡಿ ವಂಚಿಸಿ ಪರಾರಿಯಾಗಿರುತ್ತಾರೆ.
ಈ ಕುರಿತು ಮಂಗಳೂರಿನ ಕೊಂಚಾಡಿ ಯೆಯ್ಯಾಡಿಯಲ್ಲಿರುವ ಎಸ್ ಐಎಸ್ ಪ್ರೋಸಿಜರ್ ಹೋಲ್ಡಿಂಗ್ಸ್ ಕಂಪೆನಿಯ ಇನ್ ಚಾರ್ಜ್ ಸಚಿನ್ ಕಂಕನಾಡಿ ಠಾಣೆಗೆ ದೂರು ನೀಡಿದ್ದು ಸಾರ್ವಜನಿಕರಿಗೆ ಆರೋಪಿಗಳ ಕುರಿತು ಮಾಹಿತಿ ಲಭಿಸಿದ್ದಲ್ಲಿ ಕಂಕನಾಡಿ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.