Home Mangalorean News Kannada News ಒಂದು ಪುಟ, ಒಂದು ಕುಟುಂಬ, ಒಂದು ಬೂತ್ , ಒಂದು ಪುಸ್ತಕ ಚುನಾವಣಾ ಕಾರ್ಯತಂತ್ರಕ್ಕೆ ಚಾಲನೆ

ಒಂದು ಪುಟ, ಒಂದು ಕುಟುಂಬ, ಒಂದು ಬೂತ್ , ಒಂದು ಪುಸ್ತಕ ಚುನಾವಣಾ ಕಾರ್ಯತಂತ್ರಕ್ಕೆ ಚಾಲನೆ

Spread the love

ಒಂದು ಪುಟ, ಒಂದು ಕುಟುಂಬ, ಒಂದು ಬೂತ್ , ಒಂದು ಪುಸ್ತಕ ಚುನಾವಣಾ ಕಾರ್ಯತಂತ್ರಕ್ಕೆ ಚಾಲನೆ

ಮಂಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ನಿರ್ದೇಶನದಂತೆ,ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ವಿಷ್ಣುನಾದನ್ ಮತ್ತು ರಾಜ್ಯ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಅವರ ಸಲಹೆ ಮೇರೆಗೆ ಒಂದು ಪುಟ, ಒಂದು ಕುಟುಂಬ, ಒಂದು ಬೂತ್ , ಒಂದು ಪುಸ್ತಕ ಎಂಬ ಚುನಾವಣಾ ಕಾರ್ಯತಂತ್ರಕ್ಕೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಬೋಳಿಯಾರ್‍ನಲ್ಲಿರುವ ಆಹಾರ ಸಚಿವರಾದ ಯು.ಟಿ.ಖಾದರ್ ಅವರ ಅಮ್ಮೆಂಬಳ ಅಮ್ಮುಂಜೆ ಹೌಸ್‍ನಲ್ಲಿ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್ ಪ್ರತಿಯೊಂದು ಬೂತಿನ ಸಂಪೂರ್ಣ ಮಾಹಿತಿಯನ್ನು ಇಟ್ಟು ಕೊಂಡು ಒಂದು ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ , ಅವರ ಕಾರ್ಯರೂಪ ಏನು, ಎಂಬ ಇನ್ನಿತರ ವಿವರಗಳನ್ನು ಬರೆಯುವಂತಹ ಕಾರ್ಯಕ್ರಮವಾಗಿದೆ,ಈ ನಿಟ್ಟಿನಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ 100,101,103, 104, 105ನೇ ಬೂತಿನಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಸಕ್ರೀಯವಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ, ಕ್ಷೇತ್ರದುದ್ದಕ್ಕೂ 186 ಬೂತಿನಲ್ಲಿ ಎ.ಐ.ಸಿ.ಸಿಯ ಆದೇಶದಂತೆ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಲಾಗುವುದೆಂದು ಹೇಳಿದರು.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿರ್ದೇಶಕ ರಮೇಶ್ ಶೆಟ್ಟಿ ಬೋಳಿಯಾರ್, ತಾಲೂಕು ಪಂಚಾಯತ್ ಸದಸ್ಯ ಜಬ್ಬಾರ್ ಬೋಳಿಯಾರ್, ಪಂಚಾಯತ್ ಸದಸ್ಯರಾದ ಶುಕೂರ್, ಮಾಜಿ ಸದಸ್ಯರಾದ ಶ್ರೀಮತಿ ಜಸಿಂತಾ, ಇಬ್ರಾಹಿಂ,ಮಾಜಿ ಉಪಾಧ್ಯಕ್ಷ ಅಬ್ದುರ್ರಹಮಾನ್,ಮತ್ತು ನಾಸೀರ್,ಹನೀಫ್ ಬಿ.ಐ.ಟಿ, ಮುಸ್ತಫ, ಆರೀಫ್, ಸುಲೈಮಾನ್, ಖಲಂದರ್, ಉಬೈದುಲ್ಲಾ, ಶೀನ ಪೂಜಾರಿ, ರಾಮಣ್ಣ, ಆರ್.ಎಚ್.ಮೋನು, ಶರೀಫ್ ಬಂಗ್ಲೆ, ಮೋನು ಕುಚ್ಚಿಗುಡ್ಡೆ, ಯಹ್ಯಾ ಅಮ್ಮೆಂಬಳ, ಬಶೀರ್ ಗುಂಡ್ಯ, ನಝೀರ್ ಅಹ್ಮದ್, ನೌಫಲ್ ಕರ್ಮಾರ್, ಸಿದ್ದೀಕ್ ಕುಕ್ಕೋಟ್ ಉಪಸ್ಥಿತರಿದ್ದರು.


Spread the love

Exit mobile version