Home Mangalorean News Kannada News ಒಬ್ಬಂಟಿ ಮಹಿಳೆಯ ಚಿನ್ನಾಭರಣ ದರೋಡೆ; ಆರೋಪಿಯ ಬಂಧನ

ಒಬ್ಬಂಟಿ ಮಹಿಳೆಯ ಚಿನ್ನಾಭರಣ ದರೋಡೆ; ಆರೋಪಿಯ ಬಂಧನ

Spread the love

ಒಬ್ಬಂಟಿ ಮಹಿಳೆಯ ಚಿನ್ನಾಭರಣ ದರೋಡೆ; ಆರೋಪಿಯ ಬಂಧನ

ಮಂಗಳೂರು: ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ

ಬಂಧಿತ ಆರೋಪಿಯನ್ನು ಶಕ್ತಿನಗರ ನಿವಾಸಿ ಪ್ರವೀಣ್ (40) ಎಂದು ಗುರುತಿಸಲಾಗಿದೆ.

ಜೂನ್ 7ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಒಬ್ಬಂಟಿಯಾಗಿ ವಾಸಿಸುತ್ತಿರುವ 72 ವರ್ಷದ ಹಿರಿಯ ನಾಗರಿಕೆ ಫಿಲೋಮಿನಾ ಸಲ್ದಾನ ಅವರು ಸಹಾಯ ಮಾಡುತ್ತಿದ್ದ ರಿಕ್ಷಾ ಚಾಲಕನೊಬ್ಬನಿಗೆ ಅವರ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಪ್ರವೀಣ್ ನನ್ನು ದಸ್ತಗಿರಿ ಮಾಡಿ ಬ್ಯಾಂಕ್ ಒಂದರಲ್ಲಿ ಅಡಮಾನ ಇರಿಸಿ ಹಾಗೂ ಆತನ ವಶದಲ್ಲಿ ಇದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿ ಚಿನ್ನಾಭರಣಗಳ ಮೌಲ್ಯ ರೂ: 4,32,000/- ಆಗಿರುತ್ತದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣವನ್ನು ಉರ್ವ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಶರೀಫ್, ಪಿಎಸ್ಐ ಶ್ರೀಕಲಾ, ಎ.ಎಸ್.ಐ. ಬಾಲಕೃಷ್ಣ, ಮತ್ತು ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಬಸವರಾಜ್ ಬಿರಾದರ್ ಅವರು ಯಶಸ್ವಿಯಾಗಿ ಭೇಧಿಸಿರುತ್ತಾರೆ.


Spread the love

Exit mobile version