Home Mangalorean News Kannada News ಕಂದಕ್‍ ರಸ್ತೆಗೆ ಬಿ.ಮುಹಿಯುದ್ದೀನ್ ಹಾಜಿ ಅವರ ಹೆಸರು ನಾಮಕರಣ

ಕಂದಕ್‍ ರಸ್ತೆಗೆ ಬಿ.ಮುಹಿಯುದ್ದೀನ್ ಹಾಜಿ ಅವರ ಹೆಸರು ನಾಮಕರಣ

Spread the love

ಮಂಗಳೂರಿನ ಕಂದಕ್‍ನಲ್ಲಿ ನಿರ್ಮಾಣಗೊಂಡ ಹೊಸ ರಸ್ತೆಗೆ ಬಿ.ಮುಹಿಯುದ್ದೀನ್ ಹಾಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಬಿ.ಎ. ಗ್ರೂಪ್ ಇಂಡಿಯಾದ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಮತ್ತು ದಿ. ಹಸನ್ ಅವರ ತಂದೆಯವರಾದ ಬಿ.ಮುಹಿಯುದ್ದೀನ್ ಹಾಜಿಯವರ ಹೆಸರನ್ನು ಪ್ರಮುಖ ರಸ್ತೆಗೆ ನಾಮಕಾರಣ ಮಾಡಿರುವುದಕ್ಕೆ ನಾಡಿನ ಹಿರಿಯ ಮುಖಂಡರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

image043thumbay-family-gettogether-20160501-043

ತುಂಬೆ ಗ್ರೂಪ್ ಆಫ್ ಯುಎಇ ಸಂಸ್ಥೆಯು ಹಲವು ಸಾಮಾಜಿಕ ಕೊಡುಗೆಗಳ ಮೂಲಕ ಯುಎಇಯಲ್ಲಿ ಪ್ರಸಿದ್ಧಿ ಪಡೆದಿದೆ. ಮೇ 1ರಂದು ಬಂಟ್ವಾಳದ ತುಂಬೆ ಹಿಲ್ಸ್‍ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಅಧಿಕೃತವಾಗಿ ರಸ್ತೆಗೆ ಬಿ.ಮುಹಿಯುದ್ದೀನ್ ಹಾಜಿ ರಸ್ತೆ ಎಂದು ನಾಮಕರಣ ಮಾಡಿದರು.
ಈ ವಿಶೇಷ ಸಮಾರಂಭದಲ್ಲಿ ಅರಣ್ಯ, ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ, ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಸೇರಿದಂತೆ ನಾಡಿನ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಇದೇ ವೇಳೆ ಸಮುದಾಯಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅಬ್ದುಲ್ಲಾ ಕುಂಞÂ ಬೈಕರ, ಯೆನೋಪೋಯ ಮುಹಮ್ಮದ್ ಕುಂಞÂ, ಬಿ. ಮುಹಿಯುದ್ದೀನ್ ಹಸನ್ ಹಾಜಿ, ಹಾಜಿ ಸಿ. ಮಹಮೂದ್ ಅವರಿಗೆ “ಟೋಕನ್ ಆಫ್ ಅಪ್ರಿಶಿಯೇಶನ್”ಗಳನ್ನು ಸಚಿವರಾದ ರಮಾನಾಥರೈ ಮತ್ತು ಯು.ಟಿ.ಖಾದರ್ ಅವರು ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಯೆನೋಪೋಯ ಅಬ್ದುಲ್ಲಾ ಕುಂಞÂ ಅವರಿಗೆ “ವರ್ಷದ ಹಿರಿಯ ಸಾಧಕ” ಪ್ರಶಸ್ತಿ ಹಾಗೂ ಕೆ.ಇ. ಫೈಝಲ್ ಅವರಿಗೆ “ವರ್ಷದ ಯುವ ಸಾಧಕ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಬೀಫಾತಿಮ್ಮಾ ಅಹ್ಮದ್ ಹಾಜಿ, ಅಯೀಶಾ ಅಬ್ದುಲ್ಲಾ ಕುಂಞÂ, ನಫೀಸತ್ ಬೀಬಿ ಅವರಿಗೆ ಕ್ರಮವಾಗಿ ಝಹರಾ ಮುಹಿಯುದ್ದೀನ್ ತುಂಬೆ, ನೌಶೀನ್ ಸಲ್ಮಾ ಮತ್ತು ಶಬಾನ ಫೈಝಲ್ ಅವರು “ಟೋಕನ್ ಆಫ್ ಅಪ್ರಿಶಿಯೇಷನ್” ಪ್ರದಾನ ಮಾಡಿದರು.


Spread the love

Exit mobile version