ಕಂದುಕಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿ ಪೂಜೆ
ಮಂಗಳೂರು: ಮುಂಗಾರು ಮಳೆಯಿಂದ ಹಾನಿಯಾದ ಸಾರ್ವಜನಿಕ ಆಸ್ತಿಪಾಸ್ತಿಗಳ ಅಭಿವೃದ್ಧಿ ಕಾಮಗಾರಿಯ ಅನುದಾನದ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 45 ನೇ ಪೋರ್ಟ್ ವಾರ್ಡಿನ ಜಿಲ್ಲಾಧಿಕಾರಿ ಕಚೇರಿಯ ಹಿಂಬದಿಯಯಲ್ಲಿ ಕಂದುಕಕ್ಕೆ ಹೋಗುವ ರಸ್ತೆಯನ್ನು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ಯೋಗೀಶ್ ಕಾಂಚನ್, ಜಿ ದೀಪಕ್ ಪೈ, ಅನಿಲ್ ಕುಮಾರ್, ಲಲ್ಲೇಶ್ ಕುಮಾರ್, ಲತೀಫ್, ಪ್ರಶಾಂತ್, ಸತೀಶ್ ಕಂದುಕ, ಸುಮನ್, ದೀಪಕ್, ಪ್ರದೀಪ್, ರಾಮಚಂದ್ರ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.