ಕಟಪಾಡಿ ತ್ರಿಶಾ ಕಾಲೇಜಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ: ನೀತಿ ಸಂಹಿತೆ ಪ್ರಕರಣ ದಾಖಲು

Spread the love

ಕಟಪಾಡಿ ತ್ರಿಶಾ ಕಾಲೇಜಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ: ನೀತಿ ಸಂಹಿತೆ ಪ್ರಕರಣ ದಾಖಲು

ಕಾಪು: ಕಾಲೇಜಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಮಾ.30ರಂದು ಬೆಳಗ್ಗೆ ಕಟಪಾಡಿ ತ್ರಿಶಾ ಕಾಲೇಜಿನ ಕಾಂಪೌಂಡಿನ ಒಳಗಡೆ ಕೋಟ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಲಾಲಾಜಿ ಆರ್.ಮೆಂಡನ್ ಅವರಿಗೆ ತ್ರಿಶಾ ಕಾಲೇಜಿನ ಆಡಳಿತ ಮಂಡಳಿಯವರು ಮಾತನಾಡಲು ಹ್ಯಾಂಡ್ ಮೈಕ್ ನೀಡಿದ್ದು, ಅಲ್ಲದೇ ಕಾಲೇಜಿನ ಒಳಭಾಗದಲ್ಲಿ ಮತ್ತು ಕಾಲೇಜಿನ 2 ಮಹಡಿಯ ಕಾರಿಡರ್ನಲ್ಲಿ ವಿದ್ಯಾರ್ಥಿ ಗಳಿಗೆ ನಿಲ್ಲಲು ಅನುವು ಮಾಡಿಕೊಡಲಾಗಿತ್ತು. ಇದನ್ನು ಬಳಸಿಕೊಂಡ ಕೋಟ ಶ್ರೀನಿವಾಸ ಪೂಜಾರಿ ಮೈಕ್ ಹಿಡಿದು ಕೊಂಡು ಪ್ರಚಾರ ಕಾರ್ಯ ನಡೆಸುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದಾಗಿ ಕಾಪು ಕ್ಷೇತ್ರ ಫ್ಲೈಯಿಂಗ್ ಸ್ಕ್ವಾಡ್ನ ವಿಶ್ವನಾಥ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


Spread the love