ಕಟಪಾಡಿ ರೋಟರಿಯ 2024-25 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ

Spread the love

ಕಟಪಾಡಿ ರೋಟರಿಯ 2024-25 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ

ಕಟಪಾಡಿ: ಜಾಗತಿಕ ಸೇವಾ ಸಂಸ್ಥೆ ರೋಟರಿ ಸ್ಥಳೀಯವಾಗಿ ವಿಸ್ತರಿಸಲ್ಪಟ್ಟು ಜನ ಸಮುದಾಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತದೆ. ಅಂತೆಯೇ ಕಳೆದ ಎರಡು ದಶಕಗಳಿಂದ ಸಮಾಜಮುಖಿಯಾಗಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕಟಪಾಡಿ ರೋಟರಿ ತನ್ನ ಪರಂಪರೆಯನ್ನು ಮುಂದುವರೆಸಲಿ ಎಂದು ರೋಟರಿ ಜಿಲ್ಲೆ 3182 ಇದರ ಮಾಜಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ರೋ|ಪಿಡಿಜೆ ಅಭಿನಂದನ ಎ ಶೆಟ್ಟಿ ಹೇಳಿದರು.

ಕಟಪಾಡಿ ರೋಟರಿಯ 2024-25 ನೇ ಸಾಲಿನ ನೂತನ ಅಧ್ಯಕ್ಷ ಸುನಿಲ್ ಡಿ ಬಂಗೇರ ಮತ್ತು ಅವರ ನೂತನ ಪದಾಧಿಕಾರಿಗಳ ತಂಡಕ್ಕೆ ಗುರುವಾರ ಪದಪ್ರದಾನ ನೆರವೇರಿಸಿ ಮಾತನಾಡಿದರು.

ಸಹಾಯಕ ಗವರ್ನರ್ ಪಿಎಚ್ ಎಫ್ ಜಗನ್ನಾಥ ಕೋಟೆ ವಲಯ ಸೇನಾನಿ ಹೇಮಂತ್ ಯು ಕಾಂತ್ ಅವರು ತಮ್ಮ ಅನಿಸಿಕೆಗಳೊಂದಿಗೆ ನೂತನ ತಂಡಕ್ಕೆ ಶುಭಹಾರೈಸಿದರು.

ನೂತನ ಅಧ್ಯಕ್ಷ ಸುನೀಲ್ ಡಿ ಬಂಗೇರ ಕಳೆದ ಎರಡು ದಶಕಗಳಿಂದ ಕಟಪಾಡಿ ರೋಟರಿ ನಡೆಸಿಕೊಂಡು ಬಂದ ಸೇವಾ ಪರಂಪರೆಗೆ ಚ್ಯುತಿ ಬಾರದ ರೀತಿಯಲ್ಲಿ ಎಲ್ಲರ ಸಹಕಾರದೊಂದಿಗೆ ಕ್ಲಬನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಪ್ರಾಮಾಣಿಕ ಕಾರ್ಯ ನಿರ್ವಹಿಸಲಾಗುವುದು ಎಂದರು. ಹಾಗೂ ಕ್ಲಬ್ ನ ಗೃಹಪತ್ರಿಕೆ ಸ್ಪಂದನ ಬಿಡುಗಡೆಗೊಳಿಸಿದರು.

ಅಖಿಲೇಶ್ ಕೋಟ್ಯಾನ್, ಸತೀಶ್ಚಂದ್ರ, ಇಕ್ಬಾಲ್ ಸಂಶುದ್ದೀನ್ ಅವರು ನೂತನ ಸದಸ್ಯತ್ವ ಪಡೆದುಕೊಂಡರು.

ಗಣಿತ ಶಾಸ್ತ್ರದಲ್ಲಿ ಪಿ ಹೆಚ್ ಡಿ ಪಡೆದ ವರ್ಷ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಪಡೆದ ವಿದ್ಯಾರ್ಥೀಗಳಿಗೆ ಪುರಸ್ಕಾರ ನೀಡಲಾಯಿತು. ಪೂರ್ವ ವಲಯ ಸೇನಾನಿ ಡಾ||ಕೆಂಪರಾಜ್, ರೋ. ಗಣೇಶ್ ಕಿಣಿ, ರಿತೇಶ್ ಬಿ ಕೋಟ್ಯಾನ್, ಶಕುಂಳಾ ಎ ಪೂಜಾರಿ, ಇವರನ್ನು ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ರಿತೇಶ್ ಕೋಟ್ಯಾನ್ ಸ್ವಾಗತಿಸಿ ಶಕುಂತಳಾ ಎ ಪೂಜಾರಿ ವದಿ ವಾಚಿಸಿದರು. ಸತ್ಯೇಂದ್ರ ಪೈ ಗಿರಿಧರ್ ಶೆಟ್ಟಿ, ವಿಲ್ಫ್ರೆಡ್, ಆಶಾ ಅಂಚನ್, ತುಳಸಿ ದೇವಾಡಿಗ, ಡಾ||ಉದಯ್ ಕುಮಾರ್ ಶೆಟ್ಟಿ ಶ್ರೀಕರ ಅಂಚನ್ ಪರಿಚಯಿಸಿದರು.

ಕಟಪಾಡಿ ಶಂಕರಪೂಜಾರಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶೀ ಲಕ್ಷ್ಮೀ ಬಿ ವಂದಿಸಿದರು


Spread the love