Home Mangalorean News Kannada News ಕಟೀಲು ದೇವಳ ಅರ್ಚಕ ಅಸ್ರಣ್ಣ ಮನೆ ದರೋಡೆ ಐದು ಆರೋಪಿಗಳ ಬಂಧನ

ಕಟೀಲು ದೇವಳ ಅರ್ಚಕ ಅಸ್ರಣ್ಣ ಮನೆ ದರೋಡೆ ಐದು ಆರೋಪಿಗಳ ಬಂಧನ

Spread the love

ಕಟೀಲು ದೇವಳ ಅರ್ಚಕ ಅಸ್ರಣ್ಣ ಮನೆ ದರೋಡೆ ಐದು ಆರೋಪಿಗಳ ಬಂಧನ

ಮಂಗಳೂರು: ಕಟೀಲು ಶ್ರೀ.ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀ.ವಾಸುದೇವ ಅಸ್ರಣ್ಣರವರ ಮನೆಯಲ್ಲಿ ನಡೆದ ಡಕಾಯತಿ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಿಜೈ ನಿವಾಸಿ ಸುದಿಂದ್ರರಾವ್ ಹೆಚ್ ಕೆ ಯಾನೆ ಸುಶೀಂದ್ರ ರಾವ್ (33), ತೆಂಕ ಎಕ್ಕಾರು ನಿವಾಸಿ ಚಿದಾನಂದ (33), ಸೂರಜ್ ಕುಮಾರ್ ಎಕ್ಕಾರ್ (35), ಸುರೇಶ್ ಕುಮಾರ್ (40) ಮತ್ತು ಸದಾಶಿವ ಶೆಟ್ಟಿ ಎಂದು ಗುರುತಿಸಲಾಗಿದೆ.

image001police-pressmeet-20161017-001

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರು ಅಕ್ಟೋಬರ್ 4 ರಂದು ಬೆಳಗ್ಗಿನ ಜಾವ ಕಟೀಲು ಶ್ರೀ.ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀ.ವಾಸುದೇವ ಅಸ್ರಣ್ಣರವರ ಮನೆಗೆ 7-8 ಅಪರಿಚಿತರು ಮಾರಾಕಾಯುಧ ಮತ್ತು ರಿವಾಲ್ವರ್ ಗಳೊಂದಿಗೆ ಅಕ್ರಮವಾಗಿ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಅರ್ಚಕ ವಾಸುದೇವ ಅಸ್ರಣ್ಣರವರ ಮಗ ಹಾಗೂ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಮನೆಯಿಂದ ಒಟ್ಟು ಅಂದಾಜು 80 ಪವನ್ ಚಿನ್ನಾಭರಣಗಳನ್ನು, ನಗದು ಹಣ, ಮೂರು ಮೊಬೈಲ್ ಪೋನ್ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು ಎಂಬ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಬೇರೆ ಬೇರೆ ತಂಡಗಳನ್ನು ರಚಿಸಿಲಾಗಿತ್ತು.

ಅಕ್ಟೋಬರ್ 17 ರಂದು ಪ್ರಕರಣದ ಆರೋಪಿಗಳ ಇರುವಿಕೆಯ ಬಗ್ಗೆ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಅವರಾದ ಸುನೀಲ್ ವೈ ನಾಯಕ್ ರವರಿಗೆ ಮಾಹಿತಿ ಬಂದಿದ್ದು, ಈ ಮಾಹಿತಿಯ ಆದಾರದ ಮೇರೆಗೆ ಸಿಸಿಬಿ ಸಿಬ್ಬಂದಿಯವರೊಂದಿಗೆ ಹಾಗೂ ಬಜಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿಯವರು ಸೇರಿ ಜಂಟಿ ಕಾರ್ಯಚರಣೆ ನಡೆಸಿ ಮಾಹಿತಿ ಬಂದ ಸ್ಥಳವಾದ ತೆಂಕ ಎಕ್ಕಾರು ಗ್ರಾಮದ ಹುಣ್ಸೆಕಟ್ಟೆ ಎಂಬಲ್ಲಿಗೆ ಹೋದಾಗ ಮಾಹಿತಿಯಲ್ಲಿ ತಿಳಿಸಿದಂತೆ ಒಂದು ಕೆ.ಎ.19.ಎಂ.ಇ3310 ನಂಬರ್ ನ ಐ 20 ಕಾರು ಹುಣ್ಸೆಕಟ್ಟೆ ಬಸ್ಸುನಿಲ್ದಾಣದ ಬಳಿಯಲ್ಲಿದ್ದುದನ್ನು ಖಚಿತಪಡಿಸಿಕೊಂಡು ಕಾರನ್ನು ಸುತ್ತುವರಿದು ನೊಡಲಾಗಿ ಕಾರಿನಲ್ಲಿ ಒಟ್ಟು 5 ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ.

ಆರೋಪಿಗಳಿಂದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ 4,25,000/- ರೂಪಾಯಿ ನಗದು ಹಣ ಮತ್ತು 3 ಗ್ರಾಂ 910 ಮಿಲಿ ಗ್ರಾಂ ತೂಕದ ಕಟೀಲು ಶ್ರೀ.ದುರ್ಗಾಪರಮೇಶ್ವರಿ ದೇವರ ಬಾವಚಿತ್ರ ಇರುವ ಪೆಂಡೆಂಟ್ ಒಂದು, ಆರೋಪಿಗಳು ಬಳಸಿದ ಐದು ಮೊಬೈಲ್ ಪೋನ್ಗಳು ಮತ್ತು ಕೃತ್ಯದ ಸಮಯದಲ್ಲಿ ಉಪಯೋಗಿಸಿದ ಏಂ 19 ಒಇ 3310 ನಂಬ್ರದ 20 ಕಾರನ್ನು ಸ್ವಾಧೀನಪಡಿಸಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮತ್ತು ಸೊತ್ತುಗಳ ಬಗ್ಗೆ ಶೋಧ ಕಾರ್ಯ ಮುಂದುವರಿಯುತ್ತಿದೆ.


Spread the love

Exit mobile version