ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ
ಮಂಗಳೂರು: ನಗರದ ಖಾಸಗಿ ಇಂಟರ್ ನ್ಯಾಷನಲ್ ಹೋಟೆಲಿನ ಸಿಬಂದಿಯೋರ್ವ ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ
ಮೃತನನ್ನು ಪಂಪ್ ವೆಲ್ ನಿವಾಸಿ ನಿಹಾಲ್ ಭಂಡಾರಿ (23) ಎಂದು ಗುರುತಿಸಲಾಗಿದೆ.
ಮೃತ ನಿಹಾಲ್ ಖಾಸಗಿ ಇಂಟರ್ ನ್ಯಾಷನಲ್ ಹೋಟೆಲಿನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ನಿಹಾಲ್ ಕೆಲಸ ಮಾಡುತ್ತಿದ್ದ ಹೋಟೆಲ್ ಲೆಕ್ಕಪತ್ರದಲ್ಲಿ ತಪ್ಪು ಕಂಡುಬಂದ ಕುರಿತು ಅವರನ್ನು ವಿಚಾರಣೆ ಮಾಡಲಾಗಿತ್ತು ಎನ್ನಲಾಗಿದೆ. ಇದರಿಂದ ನೊಂದ ಅವರು ಹೋಟೆಲಿನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕದ್ರಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.