ಕಟ್ಟಡ ವಿವಾದ : ನಗರಸಭಾ ಸಭೆಯಲ್ಲಿ ಪರಸ್ಪರ ತೊಡೆ ತಟ್ಟಿ ಸವಾಲೆಸೆದ ಸದಸ್ಯರು

Spread the love

ಕಟ್ಟಡ ವಿವಾದ : ನಗರಸಭಾ ಸಭೆಯಲ್ಲಿ ಪರಸ್ಪರ ತೊಡೆ ತಟ್ಟಿ ಸವಾಲೆಸೆದ ಸದಸ್ಯರು

ಉಡುಪಿ: ಉಡುಪಿ ನಗರಸಭೆಯ ಸಾಮಾನ್ಯ ಸಭೆ ಬುಧವಾರ ನಗರದ ವಿಶ್ವೇಶ್ವರಯ್ಯ ಕಟ್ಟಡದ ವಿಷಯಕ್ಕೆ ಸಂಬಂಧಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಏರ್ಪಟ್ಟ ಗದ್ದಲವು ತಾರಕಕ್ಕೇರಿ ಪರಸ್ಪರ ಕೀಳು ಭಾಷೆಯ ಪದಗಳನ್ನು ಬಳಸಿ ಹೊಯ್ ಕೈ ಹಂತಕ ತಲುಪಿದ ನಾಚಿಕೆಗೇಡಿನ ಪ್ರಸಂಗ ಜರುಗಿತು.

ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯ ಯಶ್ಪಾಲ್ ಸುವರ್ಣ ಕಳೆದ ಸಭೆಯಲ್ಲಿ ವಿಶ್ವೇಶ್ವರಯ್ಯ ಕಟ್ಟಡದ ಅಭಿವೃದ್ಧಿಗೆ ಸಂಬಂಧಿಸಿ ನಡೆದ ಟೆಂಡರ್ ಹಾಗೂ ಇತರ ಪ್ರಕ್ರಿಯೆಗಳ ದಾಖಲೆಗಳನ್ನು ಕೇಳಿದ್ದು ಅದೇ ದಿನ ಸಂಜೆ ನೀಡುವುದಾಗಿ ಹೇಳಿದ್ದು ಈ ವರೆಗೆ ನೀಡಿಲ್ಲ ಆದ್ದರಿಂದ ಸಭೆ ನಡೆಸಲು ಬಿಡುವುದಿಲ್ಲ ಎಂದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ದಾಖಲೆ ಸಿದ್ದವಾಗಿಯೇ ಇತ್ತು ಆದರೆ ನಾವು ನಿಮ್ಮ ಮನೆಗೆ ತಂದು ಕೊಡಲು ಆಗುವುದಿಲ್ಲ ಎಂದು ಹೇಳಿದ್ದನ್ನು ವಿರೋಧೀಸಿದ ವಿಪಕ್ಷ ಸದಸ್ಯರು ಸದನದ ಬಾವಿಗೆ ಬಂದು ಧರಣಿ ಆರಂಭಿಸಿದರು. ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ವಿಪಕ್ಷ ಸದಸ್ಯರು ಹೇಳೀದ್ದನ್ನು ಆಡಳಿತ ಪಕ್ಷದ ಸದಸ್ಯರು ಖಂಡಿಸಿದರು.

ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಇಡೀ ಸಭೆ ಗದ್ದಲಮಯವಾಯಿತು. ಇದಕ್ಕಾಗಿ ಅಧ್ಯಕ್ಷರು ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದರು. ಆದರೂ ವಿಪಕ್ಷ ಸದಸ್ಯರು ಸದನದ ಬಾವಿಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು, ಬಳಿಕ ಪೌರಾಯುಕ್ತ ಮಂಜುನಾಥಯ್ಯ ದಾಖಲೆಗಳನ್ನು ತರಿಸಿ ವಿಪಕ್ಷದ ಸದಸ್ಯರುಗಳಿಗೆ ನೀಡಿದರು ಇದರಿಂದ ಸಭೆಯ ಗದ್ದಲ ಕಡಿಮೆಯಾಯಿತು.

ಮತ್ತೆ ಪುನಹ ಸಭೆ ಆರಂಭಿಸಲು ಹೊರಟಾಗ ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್ ತನ್ನ ಕುರ್ಚಿಯಿಂದ ಕೆಳಗಿಳಿದು ಬಂದು ವಾಗ್ವಾದ ವೇಳೆ ವಿಪಕ್ಷ ಸದಸ್ಯ ಯಶ್ಪಾಲ್ ಸುವರ್ಣ ಅಧ್ಯಕ್ಷರು ಲಂಚ ಸ್ವೀಕರಿಸಿದ್ದಾರೆ ಎಂದು ಮಾಡಿದ ಆರೋಪವನ್ನು ಸಾಬೀತು ಪಡಿಸಬೇಕು ಇಲ್ಲದಿದ್ದರೆ ಕ್ಷಮೇಯಾಚಿಸಬೇಕು ಎಂದು ಪಟ್ಟು ಹಿಡಿದರು. ಉಪಾಧ್ಯಕ್ಷರ ಒತ್ತಾಯಕ್ಕೆ ಆಡಳಿತ ಪಕ್ಷದ ಸದಸ್ಯರು ಬೆಂಬಲಿಸಿದರು.

image001chaos-errupt-in-cmc-meeting-udupi-20161130 image002chaos-errupt-in-cmc-meeting-udupi-20161130 image003chaos-errupt-in-cmc-meeting-udupi-20161130 image004chaos-errupt-in-cmc-meeting-udupi-20161130 image005chaos-errupt-in-cmc-meeting-udupi-20161130 image006chaos-errupt-in-cmc-meeting-udupi-20161130 image007chaos-errupt-in-cmc-meeting-udupi-20161130 image008chaos-errupt-in-cmc-meeting-udupi-20161130 image009chaos-errupt-in-cmc-meeting-udupi-20161130 image010chaos-errupt-in-cmc-meeting-udupi-20161130

ಆದರೆ ಉಪಾಧ್ಯಕ್ಷರ ಆಗ್ರಹಕ್ಕೆ ಯಶ್ಪಾಲ್ ಸುವರ್ಣ ನಿರಾಕರಿಸಿ ಆಡಳಿತ ಉಪಾಧ್ಯಕ್ಷರೇ ಸದನದ ಬಾವಿಗಿಳಿದು ಧರಣಿ ಕುಳಿತಿರುವುದಕ್ಕೆ ಶೇಮ್ ಶೇಮ್ ಎಂದು ಕೂಗಿದರು ಬಳಿಕ ಅಧ್ಯಕ್ಷರೇ ಸ್ವತಃ ತಮ್ಮ ಆಸನದಿಂದ ಕೆಳಗಿಳಿದು ಬಂದು ಉಪಾಧ್ಯಕ್ಷರ ಮನವೊಲಿಸಿ ಸಭಾ ವೇದಿಕೆ ಕರೆದುಕೊಂಡು ಹೋದರು.

ಸಭೆ ನಡೆಸಲು ಅವಕಾಶ ನೀಡದ ವಿಪಕ್ಷ ಸದಸ್ಯರ ವಿರುದ್ದ ಅಧ್ಯಕ್ಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು, ವಿಪಕ್ಷ ಸದಸ್ಯರಿಗೆ ಮಹಿಳೆಯರ ಬಗ್ಗೆ ಗೌರವವೇ ಇಲ್ಲ ಹೀಗಾಗಿ ಅಧ್ಯಕ್ಷರ ಬಗ್ಗೆ ಈ ರೀತಿಯ ನಿಂದನೆ ಮಾಡುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯೆ ಸೆಲಿನಾ ಕರ್ಕಡಾ ಕಿಡಿಕಾರಿದರು.

ಇದೇ ವೇಳೆ ಇನ್ನೋರ್ವ ಸದಸ್ಯ ರಮೇಶ್ ಕಾಂಚನ್ ತಾಕತ್ತಿದ್ದರೆ ಹೊರಗಡೆ ಬನ್ನಿ ನಿಮ್ಮ ತಾಕತ್ತು ಮಹಿಳಾ ಸದಸ್ಯರ ಬಳಿ ತೋರಿಸಬೇಡಿ ನಮ್ಮ ಬಳಿ ತಾಕತ್ತು ತೋರಿಸಿ ಎಂದು ಗುಡುಗಿದರು, ಇದರಿಂದ ಕೋಪಗೊಂಡ ವಿಪಕ್ಷ ಸದಸ್ಯ ದಿನಕರ ಶೆಟ್ಟಿ ಹೆರ್ಗ ನಾವೂ ಕೂಡ ಪುರುಷರು ನಿಮ್ಮ ಸವಾಲು ಸ್ವೀಕರಿಸಲು ಸಿದ್ದ ಎಂದು ಮುಂದೆ ಬಂದರು. ಈ ವೇಳೆಯಲ್ಲಿ ಸದನದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಯಿತು ಪರಸ್ಪರ ಹೊಯ್ ಕೈ ಹಂತಕ್ಕೆ ತಲುಪುವ ಸೂಚನೆ ಪಡೆದ ಎರಡು ಪಕ್ಷದ ಸದಸ್ಯರು ಮಧ್ಯ ಪ್ರವೇಶಿಸಿ ಇಬ್ಬರಿಗೂ ಬುದ್ದಿವಾದ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು,

ಒಟ್ಟಾರೆಯಾಗಿ ಜನರ ಸಮಸ್ಯೆಗಳ ಬಗ್ಗೆ, ನಗರದ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಬೇಕಾದ ನಗರಸಭೆಯ ಆಡಳಿತ ಹಾಗೂ ವಿಪಕ್ಷದ ಸದಸ್ಯರು ಪರಸ್ಪರ ವಾಗ್ವಾದ ಹಾಗೂ ವೈಯುಕ್ತಿಕ ದ್ವೇಷ ತೀರಿಸಲು ಸಭೆಯ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದು ಮಾತ್ರ ವಿಪರ್ಯಾಸವೇ ಸರಿ.


Spread the love