ಕಣಜಾರು; ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ – ಶಿರ್ವ ಚರ್ಚಿಗೆ ಸಮಗ್ರ ಪ್ರಶಸ್ತಿಯ ಗರಿ
ಉಡುಪಿ: ಕಣಜಾರು ಲೂರ್ಡ್ಸ್ ದೇವಾಲಯದ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಹಾಗೂ ಚರ್ಚ್ ಪಾಲನಾ ಸಮಿತಿಯ ವತಿಯಿಂದ ಗುರುವಾರ ಕೌಡೂರಿನ ಕ್ರೀಡಾಂಗಣದಲ್ಲಿ ಆಯೋಜಿಸಿದ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಆರೋಗ್ಯ ಮಾತೆಯ ದೇವಾಲಯ ಶಿರ್ವ ಪಡೆದುಕೊಂಡಿತು.
ಕ್ರೀಡಾಕೂಟವನ್ನು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಉದ್ಘಾಟಿಸಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲಿ ಆರೋಗ್ಯ ಪೂರ್ಣವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಅದನ್ನು ಸಮಾನವಾಗಿ ಸ್ವೀಕರಿಸಿ ಮುಂದೆ ನಡೆಯುವುದೇ ಜೀವನ. ಪ್ರತಿಯೊಬ್ಬ ಕ್ರೀಡಾಪಟುವು ಕೂಡ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವುದರೊಂದಿಗೆ ಕ್ರೀಡೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಂಗಣದ ಮ್ಹಾಲಕರಾದ ಲಾರೆನ್ಸ್ ಸಲ್ಡಾನಾ ಕಣಜಾರು, ಉದ್ಯಮಿ ಜಾನ್ ಡಿಸಿಲ್ವಾ, ಕ್ರೀಡಾಪಟು ಜಾಕ್ಸನ್ ಡಿಸೋಜಾ ಬಸ್ರೂರು, ದೈಹಿಕ ಶಿಕ್ಷಣ ಶಿಕ್ಷಕರಾದ ಫ್ರೆಡ್ರಿಕ್ ರೆಬೆಲ್ಲೊ, ಎಡ್ವಿನ್ ಮೆಂಡೊನ್ಸಾ ಇವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾದ ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ|ಜೊಸ್ವಿ ಫೆರ್ನಾಂಡಿಸ್, ಕಣಜಾರು ಚರ್ಚಿನ ಧರ್ಮಗುರು ವಂ|ಅಲೆಗ್ಸಾಂಡರ್ ಲೂವಿಸ್ ಉದ್ಯಮಿ ಅವೆಲಿನ್ ಲೂವಿಸ್ ಜಾನ್ ಡಿಸಿಲ್ವಾ ಫೆಲಿಕ್ಸ್ ಮಥಾಯಸ್, ಜಿಲ್ಲಾ ಪಂಚಾಯತ್ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಐಸಿವೈಎಮ್ ಕೇಂದ್ರಿಯ ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ುಪಾಧ್ಯಕ್ಷರಾದ ಅಂಬ್ರೋಜ್ ಲೋಬೊ, ಕಾರ್ಯದರ್ಶಿ ರೋಬರ್ಟ್ ಮಿನೇಜಸ್ಉಪಸ್ಥಿತರಿದ್ದರು.
ಲ್ಯಾನ್ಸಿ ಮೆಂಡೊನ್ಸಾ ಸ್ವಾಗತಿಸಿ, ಎಡಿಸನ್ ಸಲ್ಡಾನಾ ಧನ್ಯವಾದವಿತ್ತರು. ಕ್ರೀಡಾಜ್ಯೋತಿಯನ್ನು ಎಡ್ಮಂಡ್ ಡಿಸೋಜಾ ಬೆಳಗಿಸಿದರೆ, ವಿವಿಯನ್ ದಾಂತಿ ಪ್ರತಿಜ್ಞಾ ವಿಧಿ ಭೋದಿಸಿದರು,
ಕ್ರೀಡಾಕೂಟದಲ್ಲಿ ಉಡುಪಿ ಧರ್ಮಪ್ರಾಂತ್ಯ 40 ಚರ್ಚುಗಳ ಒಟ್ಟು 985 ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಂಜೆ ನಡೆದ ಪ್ರಶಸ್ತಿಪ್ರದಾನ ಸಮಾರಂಭ ಹಾಗೂ ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ. ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಕ್ರೀಡೆಗಳು ಒಟ್ಟು ಎರಡು ವಿಭಾಗಳಲ್ಲಿ ಅಂದರೆ 15 ವರ್ಷ ಮತ್ತು 20 ವರ್ಷ ಎಂಬ ಎರಡು ವಿಭಾಗಳಲ್ಲಿ ನಡೆದವು. ಟ್ರ್ಯಾಕ್ ಇವೆಂಟ್ಗಳಾದ 100 ಮೀಟರ್, 200ಮೀಟರ್, 800ಮೀಟರ್ ಮತ್ತು 1500 ಮೀಟರ್ ಒಟ, ಮಾತ್ರವಲ್ಲದೆ ಫೀಲ್ಡ್ ಇವೆಂಟ್ಗಳಾದ ಶಾಟ್ ಪುಟ್, ಡಿಸ್ಕಸ್ ತ್ರೋ, ಲಾಂಗ್ ಜಂಪ್, ಹೈಜಂಪ್ ಸ್ಪರ್ಧೆಗಳಲ್ಲಿ ಕ್ರೀಡಾಳು ಉತ್ಸಾಹದಿಂದ ಭಾಗವಹಿಸಿದರು. ಇದಲ್ಲದೆ ಪುರಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೋಬಾಲ್ ಸ್ಪರ್ಧೆಗಳು ಕೂಡ ಆಯೋಜಿಸಲಾಗಿತ್ತು ವೈಯುಕ್ತಿಕ ಚಾಂಪಿಯನ್ಶಿಪ್ ಮತ್ತು ತಂಡ ಚಾಂಪಿಯನ್ಶಿಪ್ ಬಹುಮಾನ ನೀಡಲಾಯಿತು.