ಕದ್ರಿ ಪಾರ್ಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ನಳಿನ್ ಚಾಲನೆ
ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅಮೃತ್ ಯೋಜನೆ ಯಡಿ ಮಂಗಳೂರು ಕದ್ರಿ ಪಾರ್ಕ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಒಟ್ಟು ರೂ.1.16 ಕೋಟಿ ಅನುದಾನದಲ್ಲಿ ಕದ್ರಿ ಉದ್ಯಾನವನದಲ್ಲಿ ಹೊರಾಂಗಣ ಜಿಮ್ ಸಲಕರಣೆ, ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ, ದಿವ್ಯಾಂಗ ಮಕ್ಕಳ ಆಟದ ಸಲಕರಣೆ, ಅಲಂಕಾರಿಕಾ ತೋಟಗಾರಿಕಾ ಗಿಡಗಳಿಂದ ಅಲಂಕಾರ ಸೇರಿದಂತೆ ಕದ್ರಿ ಪಾರ್ಕಿನಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಮೊಯಿಲಿ, ಪ್ರತಿಪಕ್ಷ ನಾಯಕರಾದ ಪ್ರೇಮಾನಂದ ಶೆಟ್ಟಿ, , ಕಾರ್ಪೊರೇಟರ್ಗಳಾದ ರೂಪ ಡಿ. ಬಂಗೇರ, ಪ್ರವೀಣ್ಚಂದ್ರ ಆಳ್ವ, ರಾಧಾಕೃಷ್ಣ, ನವೀನ್ ಡಿಸೋಜಾ, ನಿವೇದಿತಾ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಪೂಜಾ ಪೈ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು