Home Mangalorean News Kannada News ಕದ್ರಿ ಮಲ್ಲಿಕಟ್ಟ ಮಾರುಕಟ್ಟೆಯ ಅವ್ಯವಸ್ಥೆ ವಿರೋಧೀಸಿ ತುರವೇ ಪ್ರತಿಭಟನೆ

ಕದ್ರಿ ಮಲ್ಲಿಕಟ್ಟ ಮಾರುಕಟ್ಟೆಯ ಅವ್ಯವಸ್ಥೆ ವಿರೋಧೀಸಿ ತುರವೇ ಪ್ರತಿಭಟನೆ

Spread the love

ಕದ್ರಿ ಮಲ್ಲಿಕಟ್ಟ ಮಾರುಕಟ್ಟೆಯ ಅವ್ಯವಸ್ಥೆ ವಿರೋಧೀಸಿ ತುರವೇ ಪ್ರತಿಭಟನೆ

ಮಂಗಳೂರು: ತುಳುನಾಡು ರಕ್ಷಣಾ ವೇದಿಕೆಯ ವತಿಯಿಂದ ಕದ್ರಿ ಮಲ್ಲಿಕಟ್ಟ ಮಾರುಕಟ್ಟೆಯ ಅವ್ಯವಸ್ಥೆಯನ್ನು ವಿರೋಧಿಸಿ ಪ್ರತಿಭಟನೆನಯನ್ನು ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಕದ್ರಿ ಪ್ರದೇಶವು ಇತಿಹಾಸ ಪ್ರಸಿದ್ಧ ದೇವಸ್ಥಾನ, ಚರ್ಚ್ ಸೇರಿದಂತೆ ಹೆಚ್ಚಿನ ವಸತಿ ಸಂಕೀರ್ಣ, ಆಸ್ಪತ್ರೆ, ಮದುವೆ ಸಭಾಂಗಣಗಳು ಹೊಂದಿವೆ. 2000 ನೇ ಇಸವಿಯಲ್ಲಿ ಆತುರದಲ್ಲಿ ಪ್ರಾರಂಭವಾದ ಕದ್ರಿ ಮಲ್ಲಿಕಟ್ಟೆಯ ಮಾರುಕಟ್ಟೆಯು ಸಮಸ್ಯೆಗಳ ಆಗರವಾಗಿದೆ,
ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಮತ್ತು ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲವಾಗಿದ್ದು, ವ್ಯಾಪಾರಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಮಾರ್ಕೆಟನ್ನು ಸುಮಾರು 50 ಮೀ. ಹಿಂದಕ್ಕೆ ಸರಿಸುವ ಸಂದರ್ಭ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಎದ್ದು ಕಾಣುತ್ತಿದೆ. ಮಾರುಕಟ್ಟೆಯ ಅವ್ಯವಸ್ಥೆಯಿಂದ ಅಫಘಾತದಿಂದ ಮೂರು ಸಾವುಗಳಾಗಿದೆ. ಬಸ್ಸು ತಂಗುವುದು-ಪಾರ್ಕಿಂಗ್ – ಮದುವೆ ಸಭಾಂಗಣ ಮತ್ತು ರಾಜಕೀಯ ಪಕ್ಷದ ಆಫೀಸುಗಳು ಇದ್ದು ಕದ್ರಿ ಮಾರುಕಟ್ಟೆ ಅವ್ಯವಸ್ಥೆಯಿಂದ ಜನರು ಬವಣೆ ಪಡುವಂತಾಗಿದೆ. ಮೀನು ಮಾರುವ ಶೆಡ್ ಸೋರುತ್ತಿದ್ದು, ಕಂಬಗಳು ತುಕ್ಕು ಹಿಡಿದಿದ್ದು ಮಹಿಳೆಯರು ತಮ್ಮ ಜೀವ ಭಯದಲ್ಲಿ ಮೀನು ಮಾರಾಟ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಮಹಿಳೆಯರ ಹಾಗೂ ಗಂಡಸರಿಗೆ ಒಂದೇ ಶೌಚಾಲಯ ಇದ್ದು ಆ ಶೌಚಾಲಯಕ್ಕೆ ಬಾಗಿಲೂ ಕೂಡಾ ಇಲ್ಲದ ಅವ್ಯವಸ್ಥೆ ಕಂಡುಬರುತ್ತಿದೆ. ಸರಕಾರಕ್ಕೆ ತಿಂಗಳಿಗೆ 75 ಸಾವಿರ 12ರ ತಿಂಗಳ 9 ಲಕ್ಷ ಆದಾಯ ಬರುತ್ತಿದ್ದರೂ ಮಾರುಕಟ್ಟೆಗೆ ಮಾತ್ರ ತಿಂಗಳ ನಿರ್ವಹಣೆಗೆ ಸರಿಯಾಗಿ ಖರ್ಚು ಮಾಡುವುದಿಲ್ಲ. ವ್ಯಾಪಾರದ ಸ್ಥಳದಲ್ಲಿ ಕಿರಿದಾದ ದಾರಿ / ಕೊಳಕಿನಿಂದ ಕೂಡಿದರಿಂದ ವ್ಯವಹಾರಕ್ಕೆ ಬರಲು ಅಸಹ್ಯವಾಗುವ ಪರಿಸ್ಥಿತಿ ವ್ಯಾಪಾರಿಗಳ ಸಂಕಷ್ಟವನ್ನು ಕೇಳುವವರಿಲ್ಲ. ನಂತೂರು ಕದ್ರಿ ರಸ್ತೆಯಲ್ಲಿ ಬಿ.ಎಸ್.ಎನ್.ಎಲ್ ಮತ್ತು ಡ್ರೈನೇಜ್ ಮುಚ್ಚಳಗಳು ಕೆಳಗೆ ಜಾರಿರುವುದರಿಂದ ದ್ವಿಚಕ್ರ ಸವಾರರಿಗೆ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ.ಕದ್ರಿ ಕಾಂಪ್ಲೆಕ್ಸ್ ಆಧಾಯವಿಲ್ಲದೆ ಅಂಗಡಿಗಳನ್ನು ಮುಚ್ಚಿ ನಮ್ಮ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಆದುದರಿಂದ ಮೇಲ್ಕಾಣಿಸಿದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿದರು.

image011trv-kadri-market-protest-mangalorean-com-20161124-011

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಜೆರಾಲ್ಡ್ ಟವರ್ಸ್ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಸಂಬಂಧಪಟ್ಟ ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು. ಪ್ರತಿಭಟನಾಕಾರರ ಆಗ್ರಹವಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಕ್ಕೆ ಮಂಗಳೂರಿನ ಸಾರ್ವಜನಿಕರ ಬೆಂಬಲದೊಂದಿಗೆ ನಗರಪಾಲಿಕೆ ಚಲೋ, ನಗರಪಾಲಿಕೆಯ ಮುಂದೆ ಧರಣಿ ಸತ್ಯಾಗ್ರಹದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಮುಖಂಡರುಗಳ ಎಚ್ಚರಿಸಿದರು.

ಸಭೆಯಲ್ಲಿ ಪ್ರಾಸ್ತವಿಕ ಭಾಷಣವನ್ನು ಸಿರಾಜ್ ಅಡ್ಕರೆ ಮಾಡಿದರು. ಸಭೆಯಲ್ಲಿ ಅಬ್ದುಲ್ ರಶೀದ್ ಜಪ್ಪು, ಜ್ಯೋತಿಕಾ ಜೈನ್, ಆನಂದ್ ಅಮೀನ್ ಅಡ್ಯಾರ್, ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ರಾಜೇಶ್ ಕುತ್ತಾರ್, ನವಾಜ್ ಬಜಾಲ್, ತಾರನಾಥ್ ಜತ್ತಣ್ಣ, ರಹೀಂ ಕುತ್ತಾರ್, ಜನಾರ್ಧನ ಬೆಂಗ್ರೆ, ಚಂದ್ರಶೇಖರ್ ಕಣ್ಣಗುಡ್ಡೆ, ಕಾಮಾಕ್ಷಿ ಮತ್ತು ಮೀನಿನ ವ್ಯಾಪಾರ ಮಾಡುವ ಮಹಿಳೆಯರು ಉಪಸ್ಥಿತರಿದ್ದರು.


Spread the love

Exit mobile version