ಕನಕರಬೆಟ್ಟು ನಾಗರಿಕರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ : ಶಾಸಕ ಜೆ.ಆರ್.ಲೋಬೊ

Spread the love

ಕನಕರಬೆಟ್ಟು ನಾಗರಿಕರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ರೈಲು ಬಂದಾಗ ಮಂಗಳೂರು ಮಹಾನಗರ ಪಾಲಿಕೆಯ ಕನಕರಬೆಟ್ಟು 59 ನೇ ಜಪ್ಪು ವಾರ್ಡ್ ನ ನಾಗರಿಕರ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದ್ದು ಬದಲಿ ವ್ಯವಸ್ಥೆ ಮಾಡಲು ಪರ್ಯಾಯ ರಸ್ತೆಗೆ ಜಾಗ ಪರಿಶೀಲನೆಯನ್ನು ಶಾಸಕ ಜೆ.ಆರ್.ಲೋಬೊ ಅವರು ಸೋಮವಾರ ಮಾಡಿದರು.

jr-lobo-kanakarabettu-00 jr-lobo-kanakarabettu-01 jr-lobo-kanakarabettu-02

ಈ ಸಂದರ್ಭದಲ್ಲಿ ಮಾತನಾಡಿದ ಲೋಬೊ ಅವರು ನಗರ ಪಾಲಿಕೆ ಅಧಿಕಾರಿಗಳು ಅಲ್ಲಿರುವ ಜಾಗದ ತನಿಖೆ ಮಾಡಿ ವರದಿ ಒಪ್ಪಿಸುವಂತೆಯೂ ವರದಿ ಬಂದ ನಂತರ ತಾವು ಪರಿಶೀಲಿಸುವ ಭರವಸೆ ನೀಡಿದರು. ಈ ಭಾಗದಲ್ಲಿ ರೈಲು ನಿಲುಗಡೆಯಾದರೆ ಪ್ರಯಾಣಿಕರು ರಸ್ತೆ ದಾಟಲು ಪರದಾಡಬೇಕಾಗುತ್ತದೆ. ಸುತ್ತಿಬಳಸಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಶಾಶ್ವತ ಪರಿಹರಿಸಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡುತ್ತಿದ್ದಾರೆ.

ಕನಕರ ಬೆಟ್ಟು ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಬೇಕಾಗಿದ್ದು ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಇದೆಲ್ಲವನ್ನೂ ಹಂತ ಹಂತವಾಗಿ ಮಾಡುವುದಾಗಿ  ಲೋಬೊ ತಿಳಿಸಿದರು.

ಶಾಸಕರು ಸ್ಥಳ ಪರಿಶೀಲಿಸುವ ವೇಳೆ ಮಹಾನಗರ ಪಾಲಿಕೆ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇ ಗೌಡ, ಟಿಪಿಒ ಬಾಲಕೃಷ್ಣ ಗೌಡ ಹಾಗೂ ಮಹಾನಗರ ಪಾಲಿಕೆ ಸದಸ್ಯೆ ಅಪ್ಪಿ ಮುಂತಾದವರು ಉಪಸ್ಥಿತರಿದ್ದರು


Spread the love