ಕನ್ನಡದ ಬಗ್ಗೆ ಪ್ರತಿಯೊಬ್ಬರಲ್ಲಿ ವ್ಯಾಮೋಹ ಬೆಳೆದಾಗ ಉಳಿವು ಸಾಧ್ಯ ; ಪ್ರಮೋದ್ ಮಧ್ವರಾಜ್
ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಶ್ರಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಮಟ್ಟದ ಸಮಾವೇಶದ ಅಂಗವಾಗಿ ಭಾನುವಾರ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಿದ್ದ ‘ಕನ್ನಡ ನುಡಿ ಬೆಳಕು ಸಾಂಸ್ಕೃತಿಕ ಜರುಗಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಮಾತನಾಡಿ ಕರಾವಳಿಯಲ್ಲಿ ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಮಾಧ್ಯಮದಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದರಿಂದ ಶಾಲೆಗಳು ಕಣ್ಣಿನಿಂದ ಮರೆಯಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತಿರುವ ವಿದ್ಯಾರ್ಥಿಗಳು ಉದ್ಯೋಗ ಸಂದರ್ಶನ ನೀಡುವ ಸಂದರ್ಭದಲ್ಲಿ ಇಂಗ್ಲಿಷ್ ನಲ್ಲಿ ಉತ್ತರಿಸಲು ವಿಫಲನಾದರೆ, ಎಲ್ಲಿ ತಮ್ಮ ಪ್ರತಿಭವಂತ ಒಳ್ಲೆಯ ಅವಕಾಶದಿಂದ ವಂಚಿತರಾಗುತ್ತಾರೆ ಎನ್ನುವ ಭಯದಲ್ಲಿ ಹೆತ್ತವರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸುವಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಎಂದು ಹೇಳಿದರು.
ವಿಶ್ವದಲ್ಲಿ ಮಾತೃ ಭಾಷೆಯಲ್ಲಿ ಸಂವಹನ ಮಾಡುವ ದೇಶಗಳಾದ ಜಪಾನ್, ಚೀನಾದಲ್ಲಿ ಇಂಗ್ಲಿಷ್ ಭಾಷೆ ಇಲ್ಲದೆ ಅಭಿವೃದ್ಧಿ ಹೊಂದಿಲ್ಲವೇ. ಇದು ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ. ಕನ್ನಡವನ್ನು ನಾವೇ ಅಳಿಸ ಬೇಕು ಎನ್ನುವ ಹಠ ತೊಟ್ಟರೆ ನಮ್ಮಿಂದ ಅದರ ರಕ್ಷಣೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ನಮ್ಮಲಿ ಕನ್ನಡದ ಬಗ್ಗೆ ವ್ಯಾಮೋಹ ಬೆಳೆಯ ಬೇಕು. ನಾವೆಲ್ಲಾ ಒಂದಾಗಿ ಕನ್ನಡವನ್ನು ಉಳಿಸಿ ಬೆಳೆಸವಲ್ಲಿ ಕೈಜೋಡಿಸ ಬೇಕು ಎಂದರು.
ಪರ್ಯಾಯ ಪೇಜಾವರ ಮಠ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ‘ವಾಸ್ತವದಲ್ಲಿ ಕರಾವಳಿಯ ಜನರು ತುಳುನಾಡಿನವರಾದರು ಕನ್ನಡವನ್ನು ತಮ್ಮ ಭಾಷೆಯನ್ನಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ಕೊಂಕಣಿ, ತುಳು, ಬ್ಯಾರಿ, ಊರ್ದು ಸ್ಥಳೀಯ ಭಾಷೆಗಳ ಜೊತೆಗೆ ಕನ್ನಡವನ್ನು ಉಳಿಸಿ ಬೆಳೆಸಿದರೆ ಮಾತ್ರ ಕರಾವಳಿಯಲ್ಲಿ ಕನ್ನಡ ಭಾಷೆ ಶಾಶ್ವತವಾಗಿ ಉಳಿಯುತ್ತದೆ ಎಂದರು.
ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವಾ, ಆರೋಗ್ಯಮಾತೆ ಧರ್ಮಗುರು ವಂ. ಆಲ್ಬನ್ ಡಿಸೋಜ, ಜಮಾತ್ ಇಸ್ಲಾಮಿಕ್ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಆಕ್ಬರ್ ಅಲಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಟಿ.ಎ ನಾರಾಯಣ ಗೌಡ, ಕಾರ್ಯದರ್ಶಿ ಎಲ್. ಅನಿಲ್ ದಾಸ್, ಪ್ರಧಾನ ಕಾರ್ಯದರ್ಶಿ ಹೇಮಲತಾ, ಜಿಲ್ಲಾಧ್ಯಕ್ಷ ಎಸ್.ಆರ್. ಲೋಬೋ, ಜಿಲ್ಲಾ ಉಸ್ತುವಾರಿ ತೇಗೂರು ಜಗದೀಶ್ ಅರಸ್ ಚಿಕ್ಕಮಂಗಳುರು, ಹಾಸ್ಯ ನಟ ನವೀನ್ ಡಿ.ಪಾಡಿಲ್, ಉದ್ಯಮಿ ಅಮೃತ ಶೆಣೈ ಉಪಸ್ಥಿತರಿದ್ದರು.