ಕಬ್- ಬುಲ್ಬುಲ್ ಜಿಲ್ಲಾ ದರ್ಶನ ಕಾರ್ಯಕ್ರಮ
ಉಡುಪಿ: ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಇದರ ಅನುದಾನ ಅಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯು ಉಡುಪಿ ಜಿಲ್ಲೆಯ ಕಬ್, ಬುಲ್ಬುಲ್ ಮಕ್ಕಳಿಗೆ ಜಿಲ್ಲಾ ದರ್ಶನ ಕಾರ್ಯಕ್ರಮವನ್ನು ದಿನಾಂಕ ಫೆಬ್ರವರಿ 15 ರಿಂದ 16 ರ ವರೆಗೆ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಜಿಲ್ಲಾ ಸ್ಕೌಟ್ಸ್ ಆಯುಕ್ತ ಡಾ|ವಿಜಯೇಂದ್ರ ವಸಂತ್ ಜಿಲ್ಲಾ ದರ್ಶನ ಉದ್ದೇಶಿಸಿ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ನಮ್ಮ ಸಂಸ್ಕøತಿಯ ನೈಜ ಪರಿಚಯ ಹಾಗೂ ಹೊಸ ಹೊಸ ಅನುಭವ ದೊರೆಯುವುದು ಎಂದರು.
ಕಾರ್ಯಕ್ರಮದಲ್ಲಿ ಯು ಕಮಲಾ ಬಾಯಿ ಶಾಲೆಯ ದೈಹಿಕ ಶಿಕ್ಷಕ ದರ್ಶನ್ ಪ್ರವಾಸಕ್ಕೆ ಶುಭ ಹಾರೈಸಿದರು. ಜಿಲ್ಲಾ ಕಾರ್ಯದರ್ಶಿ ಐ.ಕೆ ಜಯಚಂದ್ರ ರಾವ್ ಜಿಲ್ಲಾ ದರ್ಶನಕ್ಕೆ ಚಾಲನೆ ನೀಡಿದರು.
ಉಡುಪಿಯಿಂದ ಹೊರಟು ಮಂಗಳೂರಿನಲ್ಲಿ ಸ್ವಾಮಿ ವಿವೇಕಾನಂದ ತಾರಾಲಯ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಿಲಿಕುಳ ಪ್ರಾಣಿ ಸಂಗ್ರಹಾಲಯ, ಗುತ್ತಿಗೆಮನೆ, ಮಡಿಕೆ ತಯಾರಿ ಕೇಂದ್ರ, ಕೈಮಗ್ಗ ತಯಾರಿ ಘಟಕ, ಕದ್ರಿ ದೇವಾಲಯ, ಸಂಗೀತ ಕಾರಂಜಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರ ಪಿಲಿಕುಳ ಮಂಗಳೂರು ಇಲ್ಲಿ ವಸತಿ ವ್ಯವಸ್ಥೆ ಮಾಡಲಾಯಿತು.
ಫೆಬ್ರವರಿ 16 ರಂದು ಕ್ಯಾಂಪಕೋ ಚಾಕಲೇಟ್ ಘಟಕ ಪುತ್ತೂರು, ಹನುಮಗಿರಿ ದೇವಾಲಯ ಈಶ್ವರಮಂಗಳ, ಧರ್ಮಸ್ಥಳದಲ್ಲಿ 12 ವರ್ಷಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲದಲ್ಲಿ ಭಾಗವಹಿಸಲಾಯಿತು.
ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಿಂದ 25 ಕಬ್ಸ್, 25 ಬುಲ್ ಬುಲ್, 7 ಶಿಕ್ಷಕರು ಜಿಲ್ಲಾ ದರ್ಶನದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸಂಘಟಕರಾದ ನಿತಿನ್ ಅಮಿನ್, ಸುಮನ್ ಶೇಖರ್ ಜಿಲ್ಲಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಸಂಘಟಿಸಿದರು.