ಕರಪತ್ರದಲ್ಲಿ ಅನ್ಯ ಪಕ್ಷದ ಬಗ್ಗೆ ಟೀಕೆ; ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ಮಹಿಳಾ ಮೋರ್ಚಾ ಅಧ್ಯಕ್ಷೆ, ಮುದ್ರಣ ಸಂಸ್ಥೆ ವಿರುದ್ದ ಪ್ರಕರಣ
ಕುಂದಾಪುರ: ಕರಪತ್ರದಲ್ಲಿ ಅನ್ಯ ಪಕ್ಷದ ಬಗ್ಗೆ ಟೀಕೆ ಮಾಡಿರುವುದನ್ನು ಮತ್ತು ಸ್ವಪಕ್ಷದ ಪರವಾಗಿ ಜನರಲ್ಲಿ ಪ್ರಭಾವಕ್ಕೊಳಗಾಗುವಂತಹ ಮಾಹಿತಿಗಳನ್ನು ಮುದ್ರಿಸಿರುವುದರೊಂದಿಗೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕಾಗಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಕರಪತ್ರ ಮುದ್ರಿಸಿದ ದಿಗಂತ ಮುದ್ರಣ ಸಂಸ್ಥೆಯ ವಿರುದ್ದ ಚುನಾವಣಾ ಆಯೋಗ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಮಧುಸೂದನ್ ಪ್ರಸಾದ್, ಪ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ-2, 118 ಬೈಂದೂರು ವಿಧಾನ ಸಭಾ ಕ್ಷೇತ್ರ ಹಾಗೂ ಪಂಚಾಯತ್ ಅಭಿವೃಧ್ದಿ ಅಧಿಕಾರಿ, ಕಾಳಾವರ ಗ್ರಾಮ ಪಂಚಾಯತ್ ಇವರು 118-ಬೈಂದೂರು ವಿಧಾನ ಸಭಾ ಕ್ಷೇತ್ರ ಇದರ ಪ್ಲೈಯಿಂಗ್ ಸ್ಕ್ವಾಡ್-2 ಇದರ ಅಧಿಕಾರಿಯಾಗಿದ್ದು, ಚುನಾವಣಾ ನೀತಿ ಸಂಹಿತೆ ನೋಡಲ್ ಆಫೀಸರ್ ಆಗಿದ್ದು, ಅವರಿಗೆ ಕುತ್ಯಾರ್ ನವೀನ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಬಿಜೆಪಿ ಉಡುಪಿ ಜಿಲ್ಲೆ ಇವರ ಹೆಸರಿನಲ್ಲಿ ಪ್ರಕಟಪಡಿಸಿರುವ ಕರಪತ್ರದ ಪ್ರತಿಯನ್ನು ಹೊಸಾಡು ಗ್ರಾಮದ ಕಂಚಗೋಡು ಎಂಬಲ್ಲಿ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರು ಹಂಚುತ್ತಿರುವ ಬಗ್ಗೆ ಚುನಾವಣಾಧಿಕಾರಿಯವರು ಬೈಂದೂರು ಕ್ಷೇತ್ರರವರಿಗೆ ವ್ಯಾಟ್ಸ ಪ್ ಸಂದೇಶ ಮೂಲಕ ದೂರು ನೀಡಿದ್ದು, ದೂರಿನಲ್ಲಿ ಕಾಣಿಸಿರುವ ವ್ಯಾಟ್ಸಪ್ ಕರಪತ್ರದ ಮಾಹಿತಿಯನ್ನು ಚುನಾವಣಾಧಿಕಾರಿಯವರ ನಿರ್ಧೇಶನದಂತೆ ಮಧುಸೂದನ್ ಪ್ರಸಾದ್ರವರಿಗೆ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಬೈಂದೂರು ತಾಲೂಕು ನೀತಿ ಸಂಹಿತೆ ಅಧಿಕಾರಿಯವರು, ಅವರ ಮೊಬೈಲ್ ನಿಂದ ವ್ಯಾಟ್ಸಪ್ ಕರಪತ್ರದ ಮಾಹಿತಿಯನ್ನು ಎಪ್ರಿಲ್ 7 ರಂದು ಸಂಜೆ 6:40 ಗಂಟೆಗೆ ಕಳುಹಿಸಿದ್ದನ್ನು ಮಧುಸೂದನ್ ಪ್ರಸಾದ್ರವರು ದಾಖಲೆಗಳನ್ನು ಡೌನ್ಲೋಡ್ ಮಾಡಿ ಪರಿಶೀಲಿಸಿ. ಕರಪತ್ರದಲ್ಲಿ ಅನ್ಯ ಪಕ್ಷದ ಬಗ್ಗೆ ಟೀಕೆ ಮಾಡಿರುವುದನ್ನು ಮತ್ತು ಸ್ವಪಕ್ಷದ ಪರವಾಗಿ ಜನರಲ್ಲಿ ಪ್ರಭಾವಕ್ಕೊಳಗಾಗುವಂತಹ ಮಾಹಿತಿಗಳನ್ನು ಮುದ್ರಿಸಿರುವುದು ಕಂಡು ಬಂದಿದ್ದು. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ನೀತಿ ಸಂಹಿತ ಜ್ಯಾರಿಯಲ್ಲಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅನದೀಕೃತ ಕರಪತ್ರ ಮುದ್ರಿಸಿ ಪ್ರಚಾರ ಮಾಡುತ್ತಿರುವ ಕುರಿತು ಸದ್ರಿಯವರ ಈ ಕಾರ್ಯವು ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಚುನಾವಣಾ ನೀತಿ ಸಂಹಿತೆ ಜ್ಯಾರಿಗೆ ಬಂದ ನಂತರ ಯಾವುದೇ ರಾಜಕೀಯ ವ್ಯಕ್ತಿಗಳು ಮತದಾರರಿಗೆ ಅಮಿಷವೊಡ್ಡುವುದು ನಿಯಮ ಬಾಹೀರವಾಗಿದೆ.
ಕುತ್ಯಾರ ನವೀನ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಉಡುಪಿ ಜಿಲ್ಲೆ ಇವರ ಹೆಸರಿನಲ್ಲಿ ಪ್ರಕಟಗೊಂಡ ಅನದೀಕೃತ ಕರಪತ್ರಗಳು ಮತದಾರರಿಗೆ ಅಮಿಷವೊಡ್ಡುವಂತಹ ಸಂದೇಶಗಳನ್ನು ಹೊಂದಿರುತ್ತದೆ. ಇದು ಪ್ರಜಾಪ್ರತಿನಿದ್ಯ ಕಾಯಿದೆ ಕಲಂ 127(ಎ) ರ ಉಲ್ಲಂಘನೆಯಾಗಿದ್ದು, ಭಾ,ದಂ ಸಂ ಕಲಂ: 171 ಎಪ್ ಮತ್ತು 171 ಜೆ ರ ಪ್ರಕಾರ ಶಿಕ್ಷ್ಯಾರ್ಹ ಅಪರಾಧವಾಗಿರುತ್ತದೆ. ಆದುದರಿಂದ ಕುತ್ಯಾರ ನವೀನ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಬಿಜೆಪಿ, ಉಡುಪಿ ಜಿಲ್ಲೆ, ಕರಪತ್ರ ಹಂಚಿದ ಬಿಜೆಪಿ ಮಹಿಳಾ ಮೋರ್ಚದ ಅಧಕ್ಷ್ಯರು ಮತ್ತು ಕರಪತ್ರ ಮುದ್ರಿಸಿರುವ ಮುದ್ರಣ, ದಿಗಂತ ಮುದ್ರಣ ಇವರ ವಿರುಧ್ದ ಸೂಕ್ತ ಕಾನೂನು ಕ್ರಮ ಜ್ಯಾರಿಯಾಗುವ ಬಗ್ಗೆ ಪ್ರಕರಣ ದಾಖಲಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2018 ಕಲಂ: ಪ್ರಜಾಪ್ರತಿನಿದ್ಯ ಕಾಯಿದೆ ಕಲಂ: 127(ಎ) ಕಲಂ: 171 ಎಪ್ ಮತ್ತು 171 ಜೆ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.