ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಹಳ್ಳಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಪೂರ್ಣ ಸಹಕಾರ – ಮಟ್ಟಾರ್
ಮಂಗಳೂರು: ಬಜ್ಪೆ – ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸ್ಥಳೀಯ ಸರ್ಕಾರಗಳ ಸಹಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ವ ಸಹಕಾರ ನೀಡಲಾಗುವದೆಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ದಿನಾಂಕ 06-07-2020 ರಂದು ಬಜ್ಪೆ ಯಲ್ಲಿ ಸುಮಾರು ರೂ.40 ಲಕ್ಷ ವೆಚ್ಚದಲ್ಲಿ ಸಂಸದರಾದ ಕಾಂಕ್ರೀಟಿಕರಣ ಗೊಂಡ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ಇದು ರೂ. 40 ಲಕ್ಷ ರೂ. ಗಳನ್ನು ಸೇರಿದ್ದು ಈ ಹಿಂದೆ ಸುಮಾರು 15 ಲಕ್ಷ ರೂ.ಗಳನ್ನು ಬಜಪೆ ಬಸ್ಸು ತಂಗುದಾಣ ಕಾಂಕ್ರಿಟೀಕರಣಕ್ಕೆ ನೀಡಲಾಗಿದೆ. ಅಲ್ಲಿಯ ಶಾಸಕರುಗಳ ಸೂಚನೆಯಂತೆ ಜಿಲ್ಲೆಯಾದ್ಯಂತ ಬೇರೆ ಬೇರೆ ಕಾಮಗಾರಿಗಳಿಗೆ ಸಾಧ್ಯವಾದಷ್ಟು ಅನುದಾನ ಒದಗಿಸುವುದಾಗಿ ಮಟ್ಟಾರು ರತ್ನಾಕರ ಹೆಗ್ಡೆಯವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮುಲ್ಕಿ – ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ ಮೂಡಬಿದ್ರೆ, ಬಜ್ಪೆ ಬಸ್ ತಂಗುದಾಣಗಳು ನನ್ನ ಆಧ್ಯತೆಯಲ್ಲಿದ್ದು ಬಜ್ಪೆ ಬಸ್ಸು ತಂಗುದಾಣ ಉಪಯೋಗಿಸಲಾಗದ ಸ್ಥಿತಿಯಲ್ಲಿದ್ದು ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.15 ಲಕ್ಷ, ಶಾಸಕರ ಅನುದಾನದಲ್ಲಿ ರೂ 10 ಲಕ್ಷ ಹಾಕಿ ಭಾಗಶಃ: ಕಾಮಗಾರಿ ಮಾಡಲಾಗಿದೆ ಇದೀಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.40 ಲಕ್ಷವನ್ನು ಈ ಒಂದು ಕಾಮಗಾರಿಗೆ ನೀಡಿದ್ದು ಇದೀಗ ತಂಗುದಾಣ ಕಾಂಕ್ರೀಟಿಕರಣ ಗೊಂಡು ಜನರಿಗೆ ಉಪಯೋಗಕ್ಕೆ ಈ ದಿನ ಲೋಕಾರ್ಪಣೆ ಮಾಡಲಾಗಿದೆ.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರದೀಪ್ ಡಿಸೋಜ, ವಲಯಾಧಿಕಾರಿ ಚಂದ್ರಕಾಂತ, ಜಿಲ್ಲಾ ಪಂಚಾಯತ್ ಸದಸ್ಯರಾದ ವಸಂತಿ ಕಿಶೋರ್, ತಾಲೂಕು ಪಂಚಾಯತ್ ಸದಸ್ಯರಾದ ಉಷಾ ಸುವರ್ಣ, ಪಂಚಾಯತ್ ಅಧ್ಯಕ್ಷರಾದ ರೋಸಿ ಮಥಾಯಸ್, ದಿನೇಶ್ ಶೆಟ್ಟಿ, ಜಾಕಿನ್ ಡಿಕೋಸ್ತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೌಟ ಮುಂತಾದವರು ಉಪಸ್ಥಿತರಿದ್ದರು.