Home Mangalorean News Kannada News ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್

Spread the love

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್

ಕರ್ನಾಟಕದಕಡಲ ತೀರದ ನಾಡಾದಉಡುಪಿ ಜಿಲ್ಲೆಯಹೆಬ್ರಿತಾಲೂಕಿನ ‘ಮುದ್ರಾಡಿ’ ಗ್ರಾಮರಂಗಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಚ್ಚೆ ಪೈರು, ಹೊಲ ಗದ್ದೆಗಳು, ಗಗನವನ್ನು ಚುಂಬಿಸುತ್ತಿರುವತೆಂಗು ಕಂಗು ವೃಕ್ಷರಾಶಿ, ಕಲುಷಿತ ವಾತಾವರಣದ ನಗರ ಮಾಲಿನ್ಯದ ಸೊಂಕೇ ತಗಲದಿರುವ ಸುಂದರ ಸೊಬಗಿನ ಸೃಷ್ಠಿಯ ನಾಡು’ನಾಟ್ಕದೂರು’ “ಮುದ್ರಾಡಿಗ್ರಾಮದಲ್ಲಿದೆ‘ನಮ ತುಳುವೆರ್’ ಕಲಾಸಂಘಟನೆ.

“ನಮ ತುಳುವೆರ್” ಸಂಘಟನೆಯ ಸ್ಥಾಪಕರುಅಧ್ಯಕ್ಷರು, ರಂಗನಟರು, ನಿರ್ದೇಶಕರು, ನಾಟಕರಚನೆಕಾರರು, ‘ನಾಟ್ಕದೂರು’ “ಮುದ್ರಾಡಿಗ್ರಾಮವನ್ನು” ವಿಶ್ವ ಭೂಪಟದಲ್ಲಿ ಮೂಡಿಸಿ ವಿಶ್ವದಾದ್ಯಂತರಂಗಭೂಮಿಆಸಕ್ತರು ನೋಡುವಂತಹ ಸಾಧನೆ ಮಾಡಿರುವ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್‍ರವರ ಹೆಜ್ಜೆಗುರುತನ್ನುದಾಖಲಿಸುವ ವಿಶೇಷ ಲೇಖನ…

34ನೇ ವರ್ಷಚಾರಣೆಯ ಸಂಭ್ರಮದಲ್ಲಿರುವ “ನಮ ತುಳುವೆರ್ ಕಲಾ ಸಂಘಟನೆ (ರಿ.)- ಮುದ್ರಾಡಿಗ್ರಾಮದಲ್ಲಿಶ್ರೀ ಆದಿಶಕ್ತಿ ದೇವಸ್ಥಾನದಆಶ್ರಯದಲ್ಲಿ 1985ರಲ್ಲಿ ನವರಾತ್ರಿಯ ಶುಭ ದಿನದಂದು ಆದಿಶಕ್ತಿ ದೇವಿಯಆರಾಧಕರಾಗಿಜನಮಾನಸದಲ್ಲಿ ಪೂಜ್ಯ ಸ್ಥಾನವನ್ನು ಪಡೆದಿರುವಧರ್ಮಯೋಗಿ ಪೂಜ್ಯ ಮೋಹನ ಸ್ವಾಮಿಜಿಯವರ ಆಶಿರ್ವಾದದೊಂದಿಗೆ ಪ್ರಾರಂಭಗೊಂಡಿರುವಕಲಾರಂಗ ಸಂಸ್ಥೆ ” ನಮ ತುಳುವೆರ್ ಕಲಾ ಸಂಘಟನೆ” ಕನ್ನಡ,ಹಳೆಗನ್ನಡ, ತುಳು ನಾಟಕಗಳನ್ನು ಗ್ರಾಮೀಣ ಮಟ್ಟದಿಂದರಾಜ್ಯ ಮಟ್ಟ, ರಾಷ್ಟ್ರ ಮಟ್ಟದವರೆಗೆ ನೂರಾರು ಪ್ರದರ್ಶನ, ಸ್ಪರ್ಧೆಗಳ ಮೂಲಕ ಪ್ರಸಿದ್ಧಿಯನ್ನು ಪಡೆದುರಾಷ್ಟ್ರ ಮಟ್ಟದ ಪ್ರಶಸ್ತಿಗಳ ಸರಮಾಲೆಯನ್ನು ಧರಿಸಿಕೊಂಡಿರುವ ಕಲಾ ಸಂಸ್ಥೆ. ಹಳ್ಳಿಗಳಲ್ಲಿ ರಂಗ ಭೂಮಿ ಬೇರು ಬಿಟ್ಟಾಗ ಹೊಸ ನೈಜ್ಯ ಶಕ್ತಿಯನ್ನು ನೀಡುತ್ತದೆ. ಇದುಗ್ರಾಮವನ್ನು ಸಬಲಿಕರಣ ಮಾಡುವಒಂದುಕ್ರಮಎಂಬುದನ್ನು ಮನಗಂಡಿರುವ ಈ ಕಲಾ ಸಂಸ್ಥೆ ದಿನೇ ದಿನೇ ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎತ್ತರೆತ್ತರಕ್ಕೆ ಬೆಳೆದು ನಿಂತಿದೆ.

ನಮಗಾಗಿ ನಮ್ಮವರುಚಿಂತಿಸುವುದು ಸ್ವಾಭಾವಿಕ, ಸಮಾಜಕ್ಕೆ ಸಂದೇಶಗಳನ್ನು ನಾಟಕಗಳ ಮೂಲಕ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನುಮೂವತ್ತನಾಲ್ಕುವರ್ಷಗಳಿಂದ ಸುಮಾರುತೊಂಬತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ, ಸಾವಿರದಐನೂರಕಿಂತಲೂ ಹೆಚ್ಚು ನಾಟಕಗಳ ಮೂಲಕ ಜನಜಾಗೃತಿಯನ್ನು ಮೂಡಿಸಿ ಹಳ್ಳಿಯಲ್ಲಿ ಮಿಂಚಿದಕಲಾತಂಡ.ಗಿನ್ನೆಸ್ ಬುಕ್ಕಿನಲ್ಲಿದಾಖಲೆ ಪಡೆಯುವ ದಿನ ತುಂಬಾದೂರವಿಲ್ಲ.

ಧರ್ಮಯೋಗಿ ಪೂಜ್ಯ ಮೋಹನ ಸ್ವಾಮಿಜಿ ಮತ್ತುಧರ್ಮ ಪತ್ನಿ ಶ್ರೀಮತಿ ಕಮಲಾ ಮೋಹನ್, ಮಕ್ಕಳಾದ ಸುಕುಮಾರ್ ಮೋಹನ್, ಮಗಳು ಸುಗಂಧಿಉಮೇಶ್, ಮೂರನೆಯ ಮಗ ಸುಧೀಂದ್ರ ಮೋಹನ್, ಕೊನೆಯ ಮಗ ಸುರೇಂಧ್ರ ಮೊಹನ್. ಮಗಳ ಕೈಹಿಡಿದ ಅಳಿಯ ಉಮೇಶ್‍ಕಲ್ಮಾಡಿ ಕಲಾ ದೇವಿಯಆರಾಧನೆಗೆ ಸಮರ್ಪಿಸಿ ಕೊಂಡು ಕಲಾ ಸೇವೆಯನ್ನು ಮಾಡುತಿದ್ದಾರೆ.

ನಮ ತುಳುವೆರ್ ಕಲಾ ಸಂಘಟನೆಯಅಧ್ಯಕ್ಷರಾಗಿಜವಬ್ಧಾರಿಯನ್ನು ಹೊತ್ತಿರುವ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್‍ರವರುರಂಗಭೂಮಿಒಂದು ಪ್ರಬಲ ಮಾಧ್ಯಮವನ್ನಾಗಿಸಿ, ವ್ಯಕ್ತಿಯ ಭಾವ ಸಂವೇದನೆಯನ್ನು ಉದ್ದೀಪಿಸಿ, ಚಿಂತನ ಶೀಲತೆಯನ್ನು ವೃದ್ಧಿಸುವ ಗುಣವನ್ನುಅರಿತಿದ್ದಾರೆ. ಕುಗ್ರಾಮದಲ್ಲಿಕಲಾತಂಡಕಟ್ಟಿ ಬೆಳೆಸಿ ಕೆಚ್ಚೆದೆಯೊಂದಿಗೆಗ್ರಾಮೀಣ ಪ್ರದೇಶದಲ್ಲೇರಂಗ ಪ್ರಯೋಗಗಳನ್ನು ಮಾಡುತ್ತಾ, ರಾಜ್ಯ ಅಕಾಡೆಮಿಗಳಿಗೆ ಸರಿ ಸಾಟಿಯಾಗಿ, ಮುದ್ರಾಡಿಯ ನಮ ತುಳುವೆರು ಕಲಾ ಸಂಘಟನೆಕಾರ್ಯ ನಿರ್ವಹಿಸುತ್ತಿದೆ.

ಸೃಜನ ಶೀಲಾ ವ್ಯಕ್ತಿಯಾಗಿರುವ ಸುಕುಮಾರ್ ಮೋಹನ್ ನಾಟಕರಂಗಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿ ಸುಕುಮಾರ್ ಮೋಹನ್‍ರವರು2010-2011 ರಲ್ಲಿಕರ್ನಾಟಕ ನಾಟಕಅಕಾಡೆಮಿಯಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ “ನಮ ತುಳುವೆರ್ ಸಂಘಟನೆಗೆಇನ್ನಷ್ಟು ಬಲ ತುಂಬಿಸಿದ್ದಾರೆ. ನಮ ತುಳುವೆರು ಕಲಾ ಸಂಘಟನೆಯ ಹೆಜ್ಜೆಗುರುತು…

ಸುಕುಮಾರ್ ಮೋಹನ್ ಮುದ್ರಾಡಿ ಆದಿಶಕ್ತಿ ದೇವಾಸ್ಥಾನದಆಶ್ರಯದಲ್ಲಿ ‘ನಮ ತುಳುವೆರ್ ಕಲಾ ಸಂಘಟನೆ’ ಪ್ರಾರಂಭವಾದಾಗದೈವಚಿತ್ತ, ಛಲ, ಗುರಿ, ತಾಳ್ಮೆ, ಹಟ. ಪರಿಶ್ರಮವನ್ನೇ ಮೂಲ ಬಂಡವಾಳವನ್ನಾಗಿರಿಸಿ ಕೊಂಡು ನಾಟಕತಂಡವನ್ನುಕಟ್ಟಿದವರು. ನಾಟಕವನ್ನುರಂಗ ವೇದಿಕೆಯ ಮೇಲೆ ತರುವಲ್ಲಿ ಹಗಲು ಕನಸು ಕಂಡು, ರಾತಿಯಲ್ಲಾ ಕನವರಿಸಿದರು., ಟೊಂಕಕಟ್ಟಿ ನಿಂತರು, ವಿಚಾರ ವಿನಿಮಯ ಮಾಡಿಕೊಂಡರು. ನಾಟಕರಚನೆಯಾಯಿತು. ನಟನಾ ವರ್ಗ, ತಾಂತ್ರಿಕ ವರ್ಗ ನಾಟಕವನ್ನು ಪಂಚಮವೇದ, ತಪಸ್ಸುಎಂದೇ ಭಾವಿಸಿದರು. ಕಲಾವಿದನುತನ್ನನ್ನು ತೊಡಗಿಸಿ ಕೊಂಡರೆಕಲಾದೇವಿಯು ಸಿದ್ದಿಸುವುದು ಖಂಡಿತಎನ್ನುವುದನ್ನು ಮನಗಂಡರು. ಹಳ್ಳಿಯೊಂದರಲ್ಲಿ ಕಲಾತಂಡಜಾಗೃತವಾಯಿತು. ಎಲ್ಲಾ ವರ್ಗದವರನ್ನು ಬರುವಂತೆ ಪ್ರೇರಣೆ ನೀಡಿ ನಾಟಕದ ಮಹತ್ವ ಮನದಟ್ಟು ಮಾಡಿಅಪಾರ ಪರಿಶ್ರಮ ಪಟ್ಟರು. ಬಾಯಿಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹಳ್ಳಿ, ಹಳ್ಳಿಯುದ್ದಕ್ಕೂ, ಮುದ್ರಾಡಿಯ ನಾಟಕತಂಡ, ಕಥೆ ಅಲೆ ಅಲೆಯಾಗಿ ಹರಡಿಇಂದು ಭದ್ರ ಬುನಾಧಿಯನ್ನು ಪಡೆದಿದೆ.

ಸುಕುಮಾರ್ ಮೋಹನ್‍ರವರಅಧುನಿಕರಂಗ ಪ್ರಯೋಗಗಳ ಚೈತ್ರಯಾತ್ರೆ….

ಸುಕುಮಾರ್ ಮೋಹನ್‍ರವರು ನಮ ತುಳುವೆರ್ ಕಲಾ ಸಂಘಟನೆ ಪ್ರಾರಂಭದ ವರ್ಷಗಳಲ್ಲಿ ಸಾಂಪ್ರದಾಯರಂಗ ಪ್ರಯೋಗಗಳನ್ನು ಮಾಡಿಕೊಂಡು, ನಂತರದ ವರ್ಷಗಳಲ್ಲಿ ಅಧುನಿಕರಂಗ ಪ್ರಯೋಗಗಳ ಚೈತ್ರಯಾತ್ರೆಯನ್ನುರಾಜ್ಯದ್ಯಾದಂತ ಮಾಡಿ ನಾಟಕಾಸಕ್ತರನ್ನು ಮುಟ್ಟಿಜನಮನಗೆದ್ದಿದ್ದಾರೆ. ಪ್ರಯೋಗಗಳಲ್ಲಿ ಹೆಚ್ಚಿನವುರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನವರಂಗೋತ್ಸವ…

1990 ರಿಂದ 10 ವರ್ಷಗಳ ಕಾಲ ರಾಜ್ಯಮಟ್ಟದ ನಾಟಕ ಸ್ಪರ್ಧೆ, 2000 ದಲ್ಲಿ 9 ದಿನಗಳ ನಾಟಕ ನವರಂಗೋತ್ಸವ, 2007 ರಲ್ಲಿ 20 ದಿನಗಳ ನಾಟಕೋತ್ಸವ, 25 ನೇ ವರ್ಷಾಚರಣೆಯಲ್ಲಿಮುದ್ರಾಡಿರಾಷ್ಟ್ರೀಯರಂಗೋತ್ಸವ25 ಊರುಗಳಲ್ಲಿ 25 ನಾಟಕೋತ್ಸವ ನಡೆಸಿದ ಸಾಧನೆ. ಮುದ್ರಾಡಿಯಲ್ಲಿ ನಡೆದ ನವರಂಗೋತ್ಸವದಲ್ಲಿಅಮೆರಿಕಾದ ಫ್ಲೋರಿಡಾ ನಿವಾಸಿ ಗೇಲ್ ವಿಶೇಷ ಅತಿಥಿಯಾಗಿ ಭಾಗವಹಿಸಿ ಶ್ಲಾಘಿಸಿದ್ದು ನಮ ತುಳುವೆರು ಸಂಘಟನೆಗೆ ವಿದೇಶಿಯರಿಂದ ಸುಕುಮಾರ್ ಮೋಹನ್‍ತಂಡದವರಿಗೆ ಸಂದಗೌರವವಾಗಿದೆ.

ರಾಷ್ಟ್ರ ಪ್ರಶಸ್ತಿ ಪಡೆದ487 ಪ್ರಯೋಗಗಳನ್ನು ದಾಟಿದ “ಪಿಲಿಪತ್ತಿಗಡಸ್”

ಬಹುಭಾಷಾರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿಉತ್ತಮ ಪ್ರಯೋಗ, ಉತ್ತಮ ನಟ, ನಟಿ, ಸಂಗೀತ, ನಿರ್ದೇಶನ, ರಂಗ ವಿನ್ಯಾಸ, ಬೆಳಕು ಎಲ್ಲಾ ವಿಭಾಗದಲ್ಲಿ ಪ್ರಥಮ ಸಾಲಿನಲ್ಲಿಆಯ್ಕೆಯಾಗಿರಾಷ್ಟ್ರ ಪ್ರಶಸ್ತಿ ಪಡೆದ “ಪಿಲಿ ಪತ್ತಿಗಡಸ್” ಶ್ರೀ ಡಿ. ಕೆ. ಚೌಟರರಚನೆಯಲ್ಲಿ, ಜೀವನ್‍ರಾಂ ಸುಳ್ಯ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮನೋಜ್ಞ ನಾಟಕ. ಪ್ರೇಕ್ಷಕರ ಉಸಿರು ಬಿಗಿಹಿಡಿದು ಸಂದೇಶದೊಂದಿಗೆಅಂತ್ಯಕಾಣುವ ತುಳು ನಾಟಕ ಪ್ರತಿ ಪ್ರದರ್ಶನದಲ್ಲಿಯೂಯಶಸ್ಸುಕಾಣುತ್ತಿರುವ ಮುದ್ರಾಡಿ ನಮ ತುಳುವೆರ್ ಸಂಘಟನೆಯ “ನಾಟ್ಕ” ತಂಡದ ಪರಿಪಕ್ವವಾದಅಭಿನಯದಲ್ಲಿ ಮೂಡಿ ಬರುತ್ತಿರುವ ಪ್ರಯೋಗವಾಗಿದೆ. “ನಮ ತುಳುವೆರ್ ಕಲಾ ಸಂಘಟನೆ” ಪಿಲಿಪತ್ತಿಗಡಸ್ ನಾಟಕಕರ್ತೃ ಡಿ. ಕೆ. ಚೌಟರಿಗೆ ತೌಳನ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಸುಕುಮಾರ್ ಮೋಹನ್‍ರವರು ಮಧ್ಯಪಾನ ವಿರುದ್ಧಜಾಗೃತಿ – ಬೀದಿ ನಾಟಕಗಳ ಮೂಲಕ ನಮ ತುಳುವೆರ್ ಕಲಾ ಸಂಘಟನೆಎಂಟು ಮಂದಿ ಕಲಾವಿದರತಂಡದೊಂಡಿಗೆ150 ಕಡೆಗಳಲ್ಲಿ “ಮಧ್ಯಾಸುರ ವಧೆ” ಮಧ್ಯಪಾನದ ವಿರುದ್ಧಜಾಗೃತಿ ಬೀದಿ ನಾಟಕಗಳ ಮೂಲಕ ನಡೆಸಿದೆ. ನೈರ್ಮಲ್ಯದಜಾಗೃತಿಯಾಗಿ ” ಕಸಾಸುರ ವಧೆ” ಬಾಲಕಾರ್ಮಿಕ, ಇತ್ಯಾದಿ ನಾಟಕಗಳ ಮೂಲಕ ಸಾಮಾಜಿಕ ಬದುಕಿನಲ್ಲಿಜಾಗೃತಿ ಮೂಡಿಸುತ್ತಿರುವುದು ಹೆಗ್ಗಳಿಕೆಯಾಗಿದೆ ಮಕ್ಕಳಿಗಾಗಿ ‘ಚಿಣ್ಣರರಂಗ”ಬಾಲ್ಯಅತಿಅಮೂಲ್ಯ’ ಸಾರುವ ಮಕ್ಕಳ ಮಾಯಲೋಕಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಮಕ್ಕಳು ನೀಡಿದರೆ, ಕರ್ನಾಟಕಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಕ್ಕಳ ನಾಟಕ ಹಬ್ಬ, ಉಡುಪಿಯಎಂ.ಜಿ.ಎಂ.ಕಾಲೇಜಿನಲ್ಲಿ 350 ಅಡಿ ಉದ್ದದ ಬಿಳಿ ಬಟ್ಟೆಯ ಮೇಲೆ ಚಿಣ್ಣರುಚಿತ್ರ ರಚಿಸಿ, ಚಿಣ್ಣರ ಬಿತ್ತಿಪತ್ರಕಾರ್ಯಗಾರದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. 250 ವಿದ್ಯಾರ್ಥಿಗಳು ಮಲ್ಪೆಯಕಡಲ ತೀರದಲ್ಲಿ ಮರಳ ಶಿಲ್ಪ ರಚಿಸಿ ತಮ್ಮ ಹಸ್ತ ಕೌಶಲ್ಯವನ್ನು ತೋರಿಸಿಕೊಟ್ಟಿದ್ದಾರೆ. 2009 ರಿಂದಯುವ ಪ್ರತಿಭೆಗಳನ್ನು ಗುರುತ್ತಿಸುವ ಸಲುವಾಗಿ ಬಿ.ವಿ.ಕಾರಂತಯುವ ಪ್ರಶಸ್ತಿ ಪ್ರಾರಂಭಿಸಿ ರಾಜು ಮಣಿಪಾಲ್‍ರವರಿಗೆ ನೀಡಿ ಗೌರವಿಸಿದೆ.

ಸುಕುಮಾರ್ ಮೋಹನ್‍ರವರು ಪ್ರಾರಂಭಿಸಿರುವ “ಕರ್ನಾಟ ನಾಡ ಪೋಷಕ ಪ್ರಶಸ್ತಿ” ನಮ ತುಳುವೆರ್ ಕಲಾ ಸಂಘಟನೆ ಕಳೆದ 30 ವರ್ಷಗಳಿಂದ ನಾಡು ನುಡಿ, ಸೇವೆ ಸಲ್ಲಿಸಿದ ಗಣ್ಯರಿಗೆ “ಕರ್ನಾಟ ನಾಡ ಪೋಷಕ ಪ್ರಶಸ್ತಿ” ನೀಡಿ ಗೌರವಿಸಿದೆ. ಪ್ರಶಸ್ತಿ ನೀಡಿ ಗೌರವಿಸಿದ ಮಹನಿಯರುಡಾ. ಶಾಂತರಾಂ, ಶ್ರೀ ಪ್ರಮೋದ್ ಮಧ್ವರಾಜ್, ಡಾ. ಮೋಹನ್ ಆಳ್ವ, ಶ್ರೀ ದಿವಾಕರಎನ್.ಶೆಟ್ಟಿ, ಶ್ರೀ ಆಸ್ಕರ್ ಫೆರ್ನಾಂಡಿಸ್ ಹಾಗೂ ಹಲವಾರುಕಲಾಪೋಷಕರಿಗೆ ನೀಡಿ ಗೌರವಿಸಿದ್ದಾರೆ.

ನಾಟಕೋತ್ಸವದಲ್ಲಿ ಹಲವಾರು ಅಭಿಮಾನಿಗಳು ಧಾನಿಗಳು ಸಹಾಯ ಹಸ್ತ ನೀಡಿದ್ದು, ಧರ್ಮಸ್ಥಳದ ಧರ್ಮಧಿಕಾರಿಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕರ್ನಾಟಕಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕಅಕಾಡೆಮೆ, ರಾಷ್ಟ್ರೀಯ ಸಾಂಸ್ಕೃತಿಕ ಮಂತ್ರಾಲಯ-ದೆಹಲಿ ಇವರುಗಳನ್ನು ಸುಕುಮಾರ್ ಮೋಹನ್ ಹಾಗೂ ನಮ ತುಳುವೆರ್ ಕಲಾ ಸಂಘಟನೆಯ ಸರ್ವ ಸದಸ್ಯರು ಸದಾ ಸ್ಮರಿಸಿಕೊಳ್ಳುತ್ತಾರೆ. ಕಲಾ ಸೇವೆಯಲ್ಲಿಧನ್ಯತೆಯನ್ನು ಪಡೆದ “ನಾಟ್ಕ” ತಂಡ.

ನಮ ತುಳುವೆರ್ ಕಲಾ ತಂಡದಲ್ಲಿ ಹವ್ಯಾಸಿ ಕಲಾವಿದರು ಸೇರಿ ನಲ್ವತೈದು ಮಂದಿ ಇದ್ದಾರೆ. ತಾಂತ್ರಿಕ ವರ್ಗದಲ್ಲಿ ಹನ್ನೆರಡು ಮಂದಿ ಇದ್ದುತಂಡವು “ನಾಟ್ಕ” ಎಂಬ ಹೆಸರಿನಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಕಛೇರಿಗೆ ‘ನಾಟಕಚಾವಡಿ’ ವರ್ಣಲಂಕಾರಕೊಠಡಿಗೆ ‘ಮೇಕಪ್ ನಾಣಿ -ರಂಗ ಮನೆ’ ಎಂದುಕರೆಯಲ್ಪಡುತ್ತದೆ.

ಅಭಿನಯಿಸಿದ ಪ್ರಸಿದ್ದ ನಾಟಕಗಳು

ಸಿರಿ ಸಂಪಿಗೆ, ಸಾಹೇಬರು ಬರುತ್ತಾರೆ, ಪಿಲಿಪತ್ತಿಗಡಸ್, ದರ್ಮೆತಿ ಮಾಯೇ, ದೊಂಬರಚೆನ್ನಿ, ಕಾಳಪುರದ ಕಿಲೆಸಿ, ಪಂಪನಿಗೆ ಬಿದ್ದ ಕನಸು, ಹುಲಿಯ ನೆರಳು, ಆಸುದ್ಧ, ಒಂದುಚೂರಿಯಕಥೆ, ಮೀಡಿಯ, ದಂಗೆಯ ಮುಂಚಿನ ದಿನಗಳು, ನಲ್ಪದ ನಲಿಕೆ, ನಾ ತುಕರಾಮ್‍ಅಲ್ಲಾ, ವಾಲಿ, ಹೂ, ನಾ ಬದುಕಲಿಕ್ಕೆಒಲ್ಲೆಪೆÇೀ, ಮೂರು ಹೆಜ್ಜೆ ಮೂರು ಲೋಕ, ನಾಯಿ ಕತೆ, ಹಳಿಯ ಮೇಲಿನ ಸದ್ದು, ಪಟ್ಟೆತತ್ತಂಡ, ಮಂಡೋದರಿರಾವಣಾಯಣ, ಕತ್ತಲೆಗ ಪತ್‍ತರೆ, ದಶಾನನ ಸ್ವಪ್ನಸಿದ್ಧಿ ಇನ್ನು ಹಲವು.

ನಿರ್ದೇಶಕರೊಂದಿಗೆ :-

ಕೃಷ್ಣಮೂರ್ತಿಕವತ್ತಾರ್, ಬಾಸುಮ ಕೊಡಗು, ಜಿ.ಸೀತಾರಾಮ್ ಶೆಟ್ಟಿಕುರಾಡಿ, ಜೀವನರಾಮ್ ಸುಳ್ಯ, ಪ್ರಮೋದ ಶಿಗ್ಗಾಂ, ಉದ್ಯಾವರ್ ನಾಗೇಶ್, ಗೋಪಾಲ್ ಕೃಷ್ಣ ನಾಯರಿ, ಸಿ.ಬಸವಲಿಂಗಯ್ಯ, ಶೀನಾ ನಾಡೊಳಿ, ಗುರುರಾಜ್ ಮಾರ್ಪಳ್ಳಿ, ಪ್ರಸನ್ನ ಹೆಗ್ಗೊಡ್, ಶ್ರೀಪಾದ ಭಟ್, ಏಣಗಿ ಬಾಳಪ್ಪ, ರಾಜಾರಾಮ್ , ಯಶವಂತಎನ್.ಎಸ್.ಡಿ

ನಾಟಕಕ್ಷೇತ್ರದಲ್ಲಿನ ಸಾದನೆ:

 ಬಾಲ್ಯದಿಂದಲೇ ನಾಟಕಕ್ಷೇತ್ರದಲ್ಲಿ ಆಸಕ್ತಿ, ವಿದ್ಯಾರ್ಥಿಯಾಗಿದಾಗಲೇ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು.

 1997ರಿಂದ ನಿರಂತರವಾಗಿ 25 ವರ್ಷಗಳ ಕಾಲ ಸಂಘಟನೆಅಧ್ಯಕ್ಷರಾಗಿ ಕೆಲಸ.

 1997 ರಿಂದ ನಮ ತುಳುವೆರ್ ಕಲಾ ಸಂಘಟನೆಯಅಧ್ಯಕ್ಷರಾಗಿ ಸೇವೆ, ಪ್ರತಿ ವರ್ಷ 9 ದಿನಗಳ ನಾಟಕೋತ್ಸವ, ನವರಂಗೋತ್ಸವಕಾರ್ಯಕ್ರಮ ,ಮುದ್ರಾಡಿರಾಷ್ಟ್ರೀಯರಂಗೋತ್ಸವ.

 2000ನೇ ಇಸವಿಯಿಂದರಾಜ್ಯಾದ್ಯಂತಜನಜಾಗೃತಿಗಾಗಿ ಬೀದಿ ನಾಟಕಏಡ್ಸ್‍ಎಚ್ಚರಿಕೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಬಗ್ಗೆ, ಸ್ತ್ರೀಶಕ್ತಿ ಬಲವರ್ದನೆ, ವಿದ್ಯುತ್‍ದುರುಪಯೋಗ, ಸ್ವಚ್ಛತೆಯಅರಿವು.

 2001ರಿಂದಪ್ರತಿ ವರ್ಷ 5 ದಿನದ ಮಕ್ಕಳ ನಾಟಕೋತ್ಸವ, ಯಕ್ಷೋತ್ಸವ.

 2007ಕ್ಕೆ ಸಂಘಟನೆಯ ವಿಂಶತಿಉತ್ಸವಕ್ಕೆರಾಜ್ಯದ ಬೇರೆ ಬೇರೆ ಕಡೆಗಳಿಂದ 20 ತಂಡಗಳನ್ನು ಕರೆಸಿ 20 ದಿನದ ನಾಟಕೋತ್ಸವಾ, ರಾಜ್ಯದಲ್ಲೆ ಪ್ರಥಮ ಬಾರಿಗೆಗ್ರಾಮಿಣ ಪ್ರದೇಶದಲ್ಲಿ.

 2010-11 ವರ್ಷ ಪೂರ್ತಿ 25 ವರ್ಷಾಚರಣೆಯ ಪರವಾಗಿ ಕಾರ್ಯಕ್ರಮಗಳು, ಪ್ರತಿ ತಿಂಗಳು “ತಿಂಗಳ ತಿರುಳು” ತಿಂಗಳ ನಾಟಕ.

 2010-2011 ಸಾಲಿನಲ್ಲಿನಾಟಕ ಅಕಾಡೆಮಿಯಾಸದಸ್ಯನಾಗಿ 3ವರ್ಷ ಕಾರ್ಯನಿರ್ವಾಹಣೆ.

 ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕೋತ್ಸವ.

 2011ರಿಂದಉಡುಪಿ, ಮಂಗಳೂರು ಜಿಲ್ಲೆಯಲ್ಲೆ ಪ್ರಥಮ ಬಾರಿಗೆಗ್ರಾಮೀಣ ಪ್ರದೇಶದಲ್ಲಿ 9ದಿನಗಳ ಮುದ್ರಾಡಿ ರಾಷ್ಟ್ರೀಯ ರಂಗಉತ್ಸವ ನಾಟಕೋತ್ಸವ.

 2011ರಿಂದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ “ನಾಟ್ಕ ಸಂಮಾನ” 25,000 ರೂ. ನಗದು.

 ಪ್ರತಿ ವರ್ಷ ಜನಪದಉತ್ಸವ ಜರಗುವುದು, ಎಲ್ಲಾಪ್ರಕಾರದ ಜನಪದ ಕಲೆಯನ್ನುಪ್ರದರ್ಶಿಸಲಾಗುವುದು.

 ವರ್ಷಪೂರ್ತಿಸಾಂಸ್ಕೃತಿಕಕಾರ್ಯಕ್ರಮಸಂಘಟನೆಯಲ್ಲಿನಡೆಯುತ್ತದೆ.

 ವರ್ಷಕ್ಕೆಎರಡು ನಾಟಕಗಳ ತಯಾರಿ ನಡೆಸುವುದು, ರಾಜ್ಯದ ಪ್ರಸಿದ್ದ ತಂಡಗಳಿಗೆ ಮತ್ತು ನಿರ್ದೇಶಕರಿಗೆಗ್ರಾಮೀಣ ಪ್ರದೇಶದಲ್ಲಿನರಂಗ ಚಳುವಳಿ ತೋರಿಸುವ ಕೆಲಸ.

 ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿ.

ಸುಕುಮಾರ್ ಮೋಹನ್‍ರವರಸಾಧನೆಗೆಸಂದಗೌರವ

ರಂಗಾಸಕ್ತರ ಮನಗೆದ್ದಿರುವಸುಕುಮಾರ್ ಮೋಹನ್‍ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳ ಸರಮಾಲೆಯನ್ನೇ ಧರಿಸಿದ್ದಾರೆ. ಹುಟ್ಟೂರಿನ’ನಟ ವಿಭೂಷಣ’ ಪ್ರಶಸ್ತಿ ಪಡೆದಿದ್ದು,

* 2005 ರಲ್ಲಿಕರ್ನಾಟಕ ನಾಟಕಅಕಾಡೆಮಿಯ”ಸಿ.ಜಿ.ಕೆ” ಪ್ರಶಸ್ತಿ.
* 2008 ರಂಗಚೇತನ ಬೆಂಗಳೂರು ಇವರಿಂದ”ಸಿ.ಜಿ.ಕೆ” ಪ್ರಶಸಿ.
* 2009 ಗೆಳೆಯರ ಬಳಗ ಮುದ್ರಾಡಿ “ಕಲಾ ಭೂಷಣ” ಪ್ರಶಸ್ತಿ.
* 2011 ಅರಬ್ ಸಂಯುಕ್ತ ಸಂಸ್ಥೆ ದುಬೈ “ತೌಳವ ಕಲಾ ತಿಲಕ” ಪ್ರಶಸ್ತಿ.
* 2011 ಕರ್ನಾಟಕ ನಾಟಕಅಕಾಡೆಮಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಸನ್ಮಾನ.
* 2012 ವೀರಕೇಸರಿ ಕಲಾ ವೃಂದ ಮುಂಬೈ ಸನ್ಮಾನ ಮತ್ತು ಹಲವು ಪ್ರಶಸ್ತಿ ಲಭಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಈ ನಾಟಕತಂಡವನ್ನುಕಟ್ಟಿ ನಿರಂತರರಂಗಭೂಮಿ ಚಟುವಟಿಕೆಗಳನ್ನು ಮಾಡುತ್ತ ಬಂದಿದ್ದರಿಂದ ಈ ಪ್ರದೇಶಕ್ಕೆಗ್ರಾಮ ಪಂಚಾಯಿತಿಯಿಂದ “ನಾಟ್ಕದೂರು” ಎಂಬ ಹೆಸರು.

ಪ್ರಶಸ್ತಿಗಳು :ಉತ್ತಮ ನಿರ್ದೇಶನ ಪ್ರಥಮ* ಮೀಡಿಯಾ * ನಾ ಬದುಕಲಿಕೊಲ್ಲೇಪ * ಅಶುದ್ಧ * ನಲ್ಪದ ನಲಿಕೆ * ನಾಯಿ ಕಥೆ * ಪಟ್ಟೆತ್ತಂಡ. * ಹಳಿಯ ಮೇಲಿನ ಸದ್ದು * ಕತ್ತಲೆಗ ಪತ್‍ತರೆ .

ಉತ್ತಮ ನಟ ಪ್ರಶಸ್ತಿ :-

* ಪಿಲಿಪತ್ತಿಗಡಸ್ (23 ಬಾರಿ) * ಅಶುದ್ಧ್ (7 ಬಾರಿ) * ಮೀಡಿಯಾ (3 ಬಾರಿ) * ಕಾಲಪುರದ ಕಿಲೆಸಿ (2 ಬಾರಿ)
* ದಂಗೆಯ ಮುಂಚಿನ ದಿನಗಳು ( 3 ಬಾರಿ) * ದೊಂಬರೆಚೆನ್ನಿ(2 ಬಾರಿ) * ಒಂದುಚೂರಿಯಕಥೆ (2 ಬಾರಿ) * ನಾಯಿ ಕಥೆ(2 ಬಾರಿ) * ವಾಲಿ (5 ಸಲ ಮತ್ತು ಹಲವು) * ಪಟ್ಟೆತತ್ತಂಡ.(2 ಸಲ) * ದಶಾನನ ಸ್ವಪ್ನಸಿದ್ಧಿ
* ಹಳಿಯ ಮೇಲಿನ ಸದ್ದು(2 ಸಲ )

ನಿರ್ದೇಶಿಸಿದ ನಾಟಕಗಳು :

* ಮೀಡಿಯಾ*ಆಸುದ್ದೊ * ನಾ ಬದುಕಲಿಕೊಲ್ಲೇಪ * ನಲ್ಪದ ನಲಿಕೆ * ಅಲಿಬಾಬ ಮತ್ತು 40 ಕಳ್ಳರು * ಶಿವಭೂತಿ
* ಪಾಠ ನಾಟಕ * ನಾಯಿ ಕತೆ * ಸ್ವಚ್ಛತೆಯಅರಿವು (ಬೀದಿ ನಾಟಕ) * ಸ್ತ್ರೀಶಕ್ತಿ ಬಲವರ್ದನೆ (ಬೀದಿ ನಾಟಕ) * ಏಡ್ಸ್‍ಎಚ್ಚರಿಕೆ (ಬೀದಿ ನಾಟಕ) * ಹಳಿಯ ಮೇಲಿನ ಸದ್ದು *ಪಟ್ಟೆತತ್ತಂಡ. * ಕತ್ತಲೆಗ ಪತ್‍ತರೆ.

ದುಬೈಯಲ್ಲಿ ನಡೆದ ನಾಟಕ ಪ್ರದರ್ಶನ :-

ಗಿರೀಶ್‍ಕಾರ್ನಾಡರ – ಹೂ (ಏಕವ್ಯಕ್ತಿ)5 ಪ್ರದರ್ಶನ * ಬರ್ತಡೆಗಿಫ್ಟ್- 5 ಪ್ರದರ್ಶನ * ಪಾತ್ರದಾರಿಣಿ-5 ಪ್ರದರ್ಶನ
ಕೋರ್ಟ್ ಮಾರ್ಶಲ್ – 5 ಪ್ರದರ್ಶನ.

ಮಹದ್ವಾಂಕಾಂಕ್ಷೆಯಸಾಂಸ್ಕೃತಿಕತರಬೇತಿಕೇಂದ್ರ ಮತ್ತುಕಲಾಭವನ

ಮುದ್ರಾಡಿಯ ಮಹದ್ವಾಂಕಾಂಕ್ಷೆಯಬೃಹತ್‍ಸಾಂಸ್ಕೃತಿಕತರಬೇತಿಕೇಂದ್ರ ಮತ್ತುಕಲಾಭವನನಿರ್ಮಾಣವಾಗುತ್ತಿದೆತುಳುನಾಡಿನ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಜಾನಪದ ವಸ್ತು ಸಂಗ್ರಹಾಲಯ, ಲಲಿತಕಲಾತರಭೇತಿಯಲ್ಲಿ, ತಬಲಾ, ಯಕ್ಷಗಾನ, ಸಂಗೀತ ಮತ್ತುಒಂದು ವರ್ಷದ ನಾಟಕತರಭೇತಿಕೋರ್ಸನ್ನು ಪ್ರಾರಂಭಿಸಲುಯೋಜನೆರೂಪಿಸಲಾಗಿದೆ.ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನೆರೆವೆರಿಸಲು “ಸಾಂಸ್ಕೃತಿಕತರಬೇತಿಕೇಂದ್ರ ಮತ್ತು ಕಲಾ ಭವನ” ನಿರ್ಮಾಣವಾಗುತ್ತಿದೆಇದಕ್ಕೆ ಸುಮಾರು2.5ಕೋಟಿರೂಖರ್ಚುತಗುಲಲಿದೆ. ಬೇರೆ ಬೇರೆ ಕಲಾಭಿಮಾನಿಗಳ ಹತ್ತಿರ ಸಂಗ್ರಹಿಸಿ ಸುಮಾರು20 ಲಕ್ಷದ ಕೆಲಸ ಮುಗಿಸಿದ್ದಾರೆ.

ಮಾ|ಹಿರಣಯ್ಯನವರು ನಾಟ್ಕದೂರಿಗೆ ಬಂದುಕರ್ನಾಟಕದಕಲಾವಿದರಿಗೆತವರುಮನೆಇರಲಿಲ್ಲ, ಈ ನಾಟ್ಕದೂರುಕಲಾವಿದರತವರುಮನೆಎಂದಿದ್ದಾರೆ. ನಮ್ಮಉಡೂಪಿ ಜಿಲ್ಲೆಯಲ್ಲಿ ಸುಸಜ್ಜಿತರಂಗ ಮಂದಿರಇಲ್ಲಅದ್ದರಿಂದನಾಟ್ಕದೂರಿನಲ್ಲಿಒಂದು ಸುಸಜ್ಜಿತರಂಗ ಮಂದಿರವನ್ನುಕಟ್ಟಿಕರ್ನಾಟಕದಎಲ್ಲಾ ಕಲಾ ತಂಡಗಳನ್ನು ಕರೆಸಿ ಕಾರ್ಯಕ್ರಮವನ್ನು ನೀಡಬೇಕೆಂಬುದುಇವರಯೋಜನೆಯಾಗಿದೆ.

ಉಡುಪಿಯಲ್ಲೆದೊಡ್ಡದಾದ ಬಯಲುರಂಗಮಂದಿರದಕಟ್ಟಡ ಕೆಲಸ ಪೂರ್ಣಗೊಂಡು ನವೆಂಬರ್ ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ.

ತಮ್ಮ ಬದುಕನ್ನುರಂಗಭೂಮಿಯಲ್ಲೇ ತೊಡಗಿಸಿಕೊಂಡು ರಂಗಕಲೆಯನ್ನುತನ್ನ ಉಸಿರಾಗಿರಿಸಿಕೊಂಡು ಪ್ರತಿಭಾನ್ವಿತಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟುಗ್ರಾಮೀಣ ಪ್ರದೇಶದಲ್ಲೇಅಧುನಿಕತಂತ್ರಜ್ಞಾನವನ್ನು ಬಳಸಿ ರಂಗ ಕಲೆಗೆ ಹೊಸ ಆಯಾಮ ನೀಡಿ ಮುನ್ನಡೆಯುತ್ತಿರುವ ಸುಕುಮಾರ್ ಮೋಹನ್‍ರವರ ಕಲಾಸೇವೆ ನಿತ್ಯ ನಿರಂತರವಾಗಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

 

 

 

 

 

 

 

 

ಬಿ. ಕೆ. ಗಣೇಶ್‍ರೈ
ಪೂರ್ವಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ.


Spread the love

Exit mobile version