ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು
ಉಡುಪಿ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಮನೆಯ ಕಂಪೌಂಡಿನಲ್ಲಿ ಲಕ್ಷಾಂತರ ರು. ಮೌಲ್ಯದ ಮರಳನ್ನು ಸಂಗ್ರಹ ಮಾಡಿದ್ದ 3 ಪ್ರಕರಣಗಳನ್ನು ಉಡುಪಿ ಜಿಲ್ಲಾ ಪೋಲೀಸರು ಮತ್ತು ಕಂದಾಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬೇಧಿಸಿದ್ದಾರೆ.
ಈ ದಾಳಿಯನ್ನು ಬ್ರಹ್ಮಾವರ ಪ್ರಭಾರಿ ತಹಶೀಲ್ದಾರ್ ಪೂವಿತಾ, ಬ್ರಹ್ಮಾವರ ಇನ್ಸ್ ಪೆಕ್ಟರ್ ಸಂಪತ್, ಮೀಸಲು ಪೋಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿಗಳು ನಡೆಸಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಅನ್ಸಾರ್ ಅಹ್ಮದ್ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾಗಿದ್ದು, ಜಿಲ್ಲಾಡಳಿತ ವಿರುದ್ಧ ಮರಳು ಸಮಸ್ಯೆಯೂ ಸೇರಿದಂತೆ ಹತ್ತಾರು ಬಗೆಯ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು ಆದರೆ ಅವರದ್ದೇ ಮನೆಯಲ್ಲಿ ಅಕ್ರಮ ಮರಳು ಪತ್ತೆಯಾಗಿರುವುದು ವಿಪರ್ಯಾಸವೇ ಸರಿ.