ಕುಂಬ್ರ : ದಶಕಗಳಿಂದ ಬೌಧಿಕ ಹಾಕೂ ಲೌಕಿಕ ಉಚಿತ ವಿಧ್ಯಾ ಭ್ಯಾಸವನ್ನು ನೀಡುತ್ತಾ ಬಂದಿರುವ ಬೃಹತ್ ವಿಧ್ಯಾ ಸಂಸ್ಥೆಯಾಗಿದೆ ಕೆ ಐ ಸಿ – ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್. ಭೌಧಿಕ ಹಾಗೂ ಲೌಕಿಕ (ಎಂಟನೆ ತರಗತಿ ತೇರ್ಗಡೆ ಹೊಂದಿರಬೇಕು) ವಿಧ್ಯಾಭ್ಯಾಸಕ್ಕೆ ಅಕಾಡೆಮಿ ಆಡಳಿತ ಮಂಡಳಿ ನಡೆಸುವ ಅರ್ಹತಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿಧ್ಯಾರ್ಥಿಗಳನ್ನು ಧಾರ್ಮಿಕ ವಾಗಿ ಆಲಿಂ ಫಾಝಿಲ್ ಕೌಸರಿ ವಿಧ್ಯಾಭ್ಯಾಸದೊಂದಿಗೆ ಹಾಗೂ ಲೌಕಿಕ ವಾಗಿ ಬಿ ಎ ಪದವಿ ಶಿಕ್ಷಣವನ್ನು ನೀಡಿ ಯುವ ಪೀಳಿಗೆಗಳನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುತ್ತಾ ಬಂದಿರುವ ಈ ಸಂಸ್ಥೆಯು , ಶೈಕ್ಷಣಿಕ ಕಲೆ ಗಳಾದ ಭಾಷಣ , ಪ್ರಭಾಷಣ , ಪ್ರಭಂದ , ಕಂಪ್ಯೂಟರ್ ಶಿಕ್ಷಣ , ಹಾಗೂ ವಿಧ್ಯಾರ್ಥಿಗಳ ಅಭಿರುಚಿಗೆ ಅನುಸಾರವಾಗಿ ಇನ್ನಿತರ ಶಿಕ್ಷಣವನ್ನು ಪರಿಣತ ಅಧ್ಯಾಪಕ ವೃಂದದಿಂದ ಒದಗಿಸುತ್ತಾ ಬಂದಿದೆ. ಈ ವಿಧ್ಯಾ ಸಂಸ್ಥೆಯಲ್ಲಿ ಕಲಿತ ವಿಧ್ಯಾರ್ಥಿಗಳು ಇಂದು ಸಮಾಜದಲ್ಲಿ ವಿವಿದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ವಿಧ್ಯಾ ಸಂಸ್ಥೆಯ ಶಿಸ್ತು ಬದ್ದ ಶಿಕ್ಷಣದ ಗುಣಮಟ್ಟವನ್ನು ಇತರ ಸಂಸ್ಥೆಗಳಿಗೆ ಮಾದರಿಯಾಗಿಸಿದೆ.
ಅಕಾಡೆಮಿ ಸವಲತ್ತು ಗಳು :
ಶುಲ್ಕ ರಹಿತವಾಗಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ಸುಸಜ್ಜಿತ ಹಾಸ್ಟೆಲ್ ಕಟ್ಟಡದೊಂದಿಗೆ ವಿಧ್ಯಾರ್ಥಿಗಳ ಮೂಲಭೂತ ಸೌಕರ್ಯಗಳನ್ನು ಸರಕಾರ ಸೂಚಿಸುವ ಶಿಕ್ಷಣ ಮಂಡಳಿಗಳ ನಿಯಮಾನುಸಾರ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದು ಅಕಾಡೆಮಿ ಆವರಣದಲ್ಲಿ ಮಸ್ಜಿದ್ ನೂರ್ ಎಂಬ ಬೃಹತ್ ಮಸೀದಿ , ಅಕಾಡೆಮಿ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಆಸನದೊಂದಿಗೆ ಕ್ಯಾಂಟೀನ್ ವ್ಯವಸ್ತೆ, ಅಕಾಡೆಮಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ , ದೈನಂದಿನ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿವಿದ ಭಾಷೆಗಳ ಪ್ರತಿಷ್ಟಿತ ದೈನಿಕ ಪತ್ರಿಕೆಗಳ ಸೌಲಭ್ಯ ,ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ , ನುರಿತ ಶಿಕ್ಷಣ ತಜ್ಞರಿಂದ ವ್ಯಕ್ತಿತ್ವ ವಿಕಸನ ಶಿಬಿರಗಳು, ಭಾಷಣ , ಪ್ರಭಂಧ ಲೇಖನಗಳಿಗೆ ನುರಿತ ಅದ್ಯಾಪಕರಿಂದ ತರಬೇತಿ, ಮೊದಲಾದ ವಿವಿದ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿರುವ ಈ ಸಂಸ್ಥೆಯು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪರಿಚಯಿಸಲ್ಪಟ್ಟಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿದ ಸಂಘ ಸಂಸ್ಥೆಗಳು ನಡೆಸಲ್ಪಡುವ ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸೂಕ್ತ ಮಾರ್ಗದರ್ಶನಗಳೊಂದಿಗೆ ವಿಧ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಜೂನ್ ಒಂದರಿಂದ ಶಂಸುಲ್ ಉಲಮ ತಹ್- ಫೀಲುಲ್ ಕುರ್ ಆನ್ ಸೆಂಟರ್ ಪ್ರಾರಂಭ :
ಅರ್ಹತಾ ಪರೀಕ್ಷೆಗಳ ಮೂಲಕ ಆಯ್ಕೆ ಗೊಳಿಸಿದ ವಿದ್ಯಾರ್ಥಿಗಳಿಗಾಗಿ ಅಕಾಡೆಮಿ ಆಡಳಿತ ಸಮಿತಿಯು ಜೂನ್ ಒಂದರಂದು ಶಂಸುಲ್ ಉಲಮ ತಹ್- ಫೀಲುಲ್ ಕುರ್ ಆನ್ ಸೆಂಟರ್ ನಾಮದಡಿಯಲ್ಲಿ ಹಿಫ್ಜುಲ್ ಕುರ್ ಆನ್ ತರಗತಿಗಳನ್ನು ಪ್ರಾರಂಭಿಸಲಿದ್ದು ಪ್ರಮುಖ ಪಂಡಿತ ಹಾಫಿಲ್ ಸಯ್ಯದ್ ಸಾದಿಕ್ ರವರ ನೇತೃತ್ವದಲ್ಲಿ ಹಿಫ್ಜುಲ್ ಕುರ್ ಆನ್ ತರಗತಿಗಳು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಿಧ್ವಾಂಸ , ಶೈಖುನ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ , ಸಯ್ಯದ್ ಮನೆತನದ ಅಗ್ರಗಣ್ಯ ಕುಂಬೋಳ್ ಸಯ್ಯದ್ ಅಲಿ ತಂಘಲ್ , ಪ್ರಮುಖ ವಿಧ್ವಾಂಸ ಅಬ್ದುಲ್ ಸಲಾಂ ದಾರಿಮಿ ಆಲಂಪಾಡಿ ಹಾಗೂ ಹಲವಾರು ಸಾಮಾಜಿಕ ಧಾರ್ಮಿಕ ನೇತಾರರ ಘನ್ಯ ಉಪಸ್ತಿತಿಯಲ್ಲಿ ನೂತನ ತರಗತಿಗೆ ಚಾಲನೆ ದೊರೆಯಲಿದೆ .