Home Mangalorean News Kannada News ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕ ಉದ್ಘಾಟನೆ

ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕ ಉದ್ಘಾಟನೆ

Spread the love

ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕ ಉದ್ಘಾಟನೆ

ಬಂಟ್ವಾಳ : ಬಂಟ್ವಾಳದ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕವು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿಕಟಪೂರ್ವ ಉಪಕುಲಪತಿಯವರಾದ ಡಾ. ಕೆ.ಚಿನ್ನಪ್ಪ ಗೌಡ ಅವರಿಂದ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು. ಸಾಂಸ್ಕೃತಿಕ ಸಾಮರಸ್ಯವು ನಾಡನ್ನು ಒಂದುಗೂಡಿಸುತ್ತದೆ. ಅದನ್ನು ಮಾಡುವಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಶಾಖೆಗಳ ಮೂಲಕ ಮಾಡಬೇಕಿದೆ- ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಟಿ. ತಿಮ್ಮೇಗೌಡ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಎಚ್.ಎಲ್.ನಾಗೇಗೌಡರಿಗೆ ಸಾಂಸ್ಕೃತಿಕ ವೈವಿಧ್ಯವನ್ನು ನೋಡಿ ಜಾನಪದಲೋಕವನ್ನು ಹುಟ್ಟುಹಾಕುವ ಕನಸು ಕಂಡು ಅದನ್ನು ನನಸು ಮಾಡಿದ್ದಾರೆಂದರು. ಅದನ್ನು ಮುನ್ನಡೆಸುವುದು, ಆ ಮೂಲಕ ಜನಪದ ಜ್ಞಾನವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೆಂದರು.

ಎಚ್.ಎಲ್. ನಾಗೇಗೌಡರ ಸುಪುತ್ರಿ ಶ್ರೀಮತಿ ಇಂದಿರಾ ಬಾಲಕೃಷ್ಣ, ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜೇಗೌಡ, ಹಿರಿಯ ವಿದ್ವಾಂಸ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಉಪಸ್ಥಿತರಿದ್ದರು. ಇಂದು ಘೋಷಿಸಲಾದ ಪದಾಧಿಕಾರಿಗಳ ವಿವರ ಹೀಗಿದೆ: ಡಾ. ಮೋಹನ ಆಳ್ವ (ಗೌರವಾಧ್ಯಕ್ಷರು), ಪೆÇ್ರ. ತುಕಾರಾಮ್ ಪೂಜಾರಿ (ಅಧ್ಯಕ್ಷರು), ಡಾ. ಸಾಯಿಗೀತಾ (ಕಾರ್ಯದರ್ಶಿ) ಡಾ. ಪೂವಪ್ಪ ಕಣಿಯೂರು, ಪೆÇ್ರ. ಕೃಷ್ಣಮೂರ್ತಿ, ಡಾ. ಪ್ರಕಾಶ್ಚಂದ್ರ ಶಿಶಿಲ, ಶ್ರೀ ಸುದೀಪ್, ಡಾ. ಯೋಗೀಶ್ ಕೈರೋಡಿ, ಶ್ರೀಮತಿ ಭಾರತಿ, ಶ್ರೀ ದಾಮೋದರ್.


Spread the love

Exit mobile version