ಕರ್ನಾಟಕ ಬಂದ್ ಬಿಜೆಪಿ ನಾಯಕರ ಬೇಜವಾಬ್ದಾರಿ ವರ್ತನೆ – ರವಿ ಶೆಟ್ಟಿ
ಬೈಂದೂರು: ರೈತರ ಹೆಸರಿನಲ್ಲಿ ಬಿಜೆಪಿಯವರು ನಡೆಸಲು ಯತ್ನಿಸಿದ ಬಂದ್ ಸಂಪೂರ್ಣ ವಿಫಲಗೊಂಡಿದ್ದು ಇದು 104 ಸ್ಥಾನ ಪಡೆದು ಸರ್ಕಾರ ರಚನೆ ಮಾಡಲಾಗದೆ ಅಧಿಕಾರ ಸಿಗದೇ ಹತಾಶೆಯಿಂದ ಮಾನ್ಯ ಯಡಿಯೂರಪ್ಪನವರು ರೈತರ ಹೆಸರಿನಲ್ಲಿ ಬಂದ್ ಕರೆದಿರುವುದು ವಿಷಾದನೀಯ ಎಂದು ಕಾರ್ಮಿಕ ಮುಖಂಡ ಜೆಡಿಎಸ್ ಪ್ರಮುಖರಾದ ರವಿ ಶೆಟ್ಟಿ ಹೇಳಿದ್ದಾರೆ.
ಬಂದ್ ವಿಫಲವಾಗಿದ್ದರೂ ಮನವಿ ಕೊಡುವ ನೆಪದಲ್ಲಿ ಬಿಜೆಪಿ ಕಾರ್ಯಕರ್ತರೇ ರೈತರ ಶಾಲು ಹೊದ್ದು ಮನವಿ ನೀಡಿರುವುದನ್ನು ನೋಡಿದರೆ ವಿರೋಧ ಮಾಡಬೇಕೆಂದೇ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂಬುದು ಸ್ಪಷ್ಟ .
ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಸಂಪೂರ್ಣ ಬಹುಮತದಿಂದ ಚುನಾಯಿತರಾಗಿ ಬಂದಲ್ಲಿ ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದು ನಿಜ ಆದರೆ ಪ್ರಸ್ತುತ ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಹೊಂದ ಬೇಕಾದ ಅನಿವಾರ್ಯತೆ ಬಂದಿರುವುದರಿಂದ ಈಗಲೂ ಅವರ ಮಾತಿಗೆ ತಪ್ಪದೇ ಸಾಲ ಮನ್ನಾವನ್ನು ಮಾಡಿಯೇ ಮಾಡುತ್ತಾರೆ ಸ್ವಲ್ಪ ದಿನ ಕಾಯಬೇಕಷ್ಟೇ . ಅಲ್ಲದೆ ಪ್ರಣಾಳಿಕೆಯಲ್ಲಿ ಘೋಷಿಸಿದ ಪ್ರತಿಯೊಂದು ಭರವಸೆಯನ್ನು ಒಂದೊಂದಾಗಿಯೇ ಜನರಿಗೆ ನೀಡುತ್ತಾರೆ . ಹುಟ್ಟಿದ ಮಗು ತಕ್ಷಣ ನಡೆಯಬೇಕೆಂದರೆ ಹೇಗೆ ??? ಸರಕಾರದ ವ್ಯವಸ್ಥೆ ತಿಳಿದವರು ಈ ರೀತಿಯಾಗಿ ಆರೋಪ ಮಾಡುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರು
ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಎಚ್ ಡಿ ಕುಮಾರಸ್ವಾಮಿ ನಾಟ್ ಮೈ ಸಿಎಂ ಎಂಬ ಬರಹದ ಬಗ್ಗೆ ಕಿಡಿಕಾರಿದ ರವಿಶೆಟ್ಟಿ ಒಂದೊಂದು ಪಕ್ಷಕ್ಕೆ ಒಬ್ಬೊಬ್ಬ ಮುಖ್ಯಮಂತ್ರಿ ಒಬ್ಬೊಬ್ಬ ಪ್ರಧಾನಿಯನ್ನು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು ಪ್ರತಿಯೊಬ್ಬರೂ ನಮ್ಮ ದೇಶದ ಸಂವಿಧಾನಕ್ಕೆ ತಲೆ ಬಾಗಲೇಬೇಕು ಈ ರೀತಿಯ ಕೆಟ್ಟ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಪ್ರಧಾನಿ ಅವರಿರಲಿ ಮುಖ್ಯಮಂತ್ರಿ ಇರಲಿ ಯಾರೂ ಹಗುರವಾಗಿ ಅವರ ಬಗ್ಗೆ ಮಾತನಾಡಬಾರದು ಎಂದು ಕಿವಿಮಾತನ್ನು ಹೇಳಿದ್ದಾರೆ .