Spread the love
ಕರ್ನಾಟಕ ಲಾಕ್ ಡೌನ್ ; ನಿಧಾನವಾಗಿ ಸ್ತಬ್ಧವಾಗುತ್ತಿದೆ ಉಡುಪಿ ಜಿಲ್ಲೆ
ಉಡುಪಿ: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಉಡುಪಿ ಜಿಲ್ಲೆಯೂ ಕೂಡ ಲಾಕ್ ಡೌನ್ ಆಗಿದೆ.
ಮಂಗಳವಾರ ಬೆಳಗಿನ ಜಾವ ಬೆಂಗಳೂರು ಮತ್ತು ಹೊರ ಜಿಲ್ಲೆಗಳಿಂದ ಬಸ್ಸುಗಳು ಉಡುಪಿ ನಗರಕ್ಕೆ ಆಗಮಿಸಿದ್ದು ಪ್ರಯಾಣಿಕರು ತಮ್ಮ ಮನೆಗೆ ತೆರಳಲು ಅಟೋ ಬಳಕೆ ಮಾಡುತ್ತಿರುವ ದೃಶ್ಯ ಕಂಡುಬಂತು.
ಈ ನಡುವೆ ಅಗತ್ಯ ಸೇವೆಗಳಿಗೆ ವಿನಾಯತಿ ನೀಡಿದ ಹಿನ್ನಲೆಯಲ್ಲಿ ನಗರದ ಸಂತೆ ಮಾರುಕಟ್ಟೆಯಲ್ಲಿ ತರಕಾರ ವ್ಯಾಪಾರ ಅಭಾದಿತವಾಗಿದ್ದು ವ್ಯಾಪಾರಿಗಳು ತರಕಾರಿ ಖರೀದಿಗೆ ಮುಗಿ ಬೀಳುವ ದೃಶ್ಯ ಕಂಡುಬಂತು.
ನಗರದಲ್ಲಿ ಖಾಸಗಿ ಬಸ್ ಸೇರಿದಂತೆ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ನಗರದ ಸರ್ವಿಸ್ ಮತ್ತು ಸಿಟಿ ಬಸ್ಸು ನಿಲ್ದಾಣ ಸಂಪೂರ್ಣ ಖಾಲಿಯಾಗಿದೆ.
Spread the love