Home Mangalorean News Kannada News ‘ಕಲುಷಿತ ದೆಹಲಿಯ ವಾತಾವರಣದ ದುರ್ಗಂದ ಕಲಾಕೃತಿಗಳಿಂದ ಸುಗಂಧಮಯವಾಗಲಿ’-ಡಾ. ಎಚ್.ಎಸ್. ಶಿವಪ್ರಕಾಶ್

‘ಕಲುಷಿತ ದೆಹಲಿಯ ವಾತಾವರಣದ ದುರ್ಗಂದ ಕಲಾಕೃತಿಗಳಿಂದ ಸುಗಂಧಮಯವಾಗಲಿ’-ಡಾ. ಎಚ್.ಎಸ್. ಶಿವಪ್ರಕಾಶ್

Spread the love

‘ಕಲುಷಿತ ದೆಹಲಿಯ ವಾತಾವರಣದ ದುರ್ಗಂದ ಕಲಾಕೃತಿಗಳಿಂದ ಸುಗಂಧಮಯವಾಗಲಿ’-ಡಾ. ಎಚ್.ಎಸ್. ಶಿವಪ್ರಕಾಶ್

“ದೆಹಲಿಯ ಪ್ರದೂಷಣದಿಂದ ದುರ್ಗಂಧಮಯವಾಗಿರುವ ವಾತಾವರಣವನ್ನು ನೀವುಗಳು ರಚಿಸಲಿರುವ ಕಲಾಕೃತಿಗಳು ಸುಗಂಧಮಯವಾಗಿಸಲಿ” ಎಂದು ಡಾ. ಎಚ್.ಎಸ್. ಶಿವಪ್ರಕಾಶ್, ಪ್ರಾಧ್ಯಾಪಕರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ನವದೆಹಲಿ ಅವರು ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾದ “ದೆಹಲಿಯಲ್ಲಿ ಕರ್ನಾಟಕದ ಬಯಲು ಚಿತ್ರಾಲಯ” ಕಾರ್ಯಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಕನ್ನಡಅಧ್ಯಯನ ಪೀಠದ ಪ್ರಾಧ್ಯಾಪಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಬಯಲು ಚಿತ್ರಾಲಯವು ಯಶಸ್ವಿಯಾಗಿ ನಡೆದು ಕರ್ನಾಟಕದ ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಅತ್ಯುತ್ತಮ ಕಲಾಕೃತಿಗಳು ಮೂಡಿಬರಲಿ ಎಂದು ಆಶಿಸಿದರು.

ದೆಹಲಿ ಕರ್ನಾಟಕ ಸಂಘ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಜಂಟಿಯಾಗಿ ಆಯೋಜಿಸಿರುವ ಈ ಚಿತ್ರಕಲಾ ಕಾರ್ಯಾಗಾರದಲ್ಲಿ ಕರ್ನಾಟಕದಿಂದ ಆಗಮಿಸಿದ 15 ಜನ ಪ್ರಸಿದ್ಧ ಕಲಾವಿದರು ಭಾಗವಹಿಸುತ್ತಿದ್ದು, ಈ ಕಾರ್ಯಾಗಾರವು ಅಗಸ್ಟ್ 2 ರಿಂದಅಗಸ್ಟ್ 6ರವರೆಗೆ ನಡೆಯಲಿದೆ.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಮ್.ಎಸ್. ಮೂರ್ತಿಯವರು ಈ ಕಾರ್ಯಕ್ರಮದ ರೂವಾರಿಗಳು. ದೆಹಲಿಯ ಕನ್ನಡ ಮತ್ತು ಕನ್ನಡೇತರ ಸಾಮಾನ್ಯ ಜನರು, ಸಾಂಸದರು, ಉನ್ನತ ಅಧಿಕಾರಿಗಳಿಗೆ ಕರ್ನಾಟಕದ ಕಲಾವಿದರು ಹಾಗೂ ಕಲೆಯನ್ನು ಪರಿಚಯಿಸುವುದು ಈ ಆಯೋಜನೆಯ ಮೂಲ ಉದ್ದೇಶ ಎಂದು ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನುಡಿದರು.

ಡಾ. ಎಮ್.ಎಸ್. ಮೂರ್ತಿಯವರು ದೆಹಲಿ ಕರ್ನಾಟಕ ಸಂಘವು ನೀಡುತ್ತಿರುವ ಈ ಆತಿಥ್ಯಕ್ಕೆ ನಾವು ಚಿರಋಣಿ. ಸಂಘವು ದೆಹಲಿಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕದ ಕಲಾವಿದರನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಗಿದೆ. ನಾವು ಪರಿಶ್ರಮಿಸಿ ಈ ಐದು ದಿನಗಳಲ್ಲಿ ಅತ್ಯುತ್ತಮ ಕಲಾಕೃತಿ ಸೃಷ್ಟಿಸುವ ಸರ್ವ ಪ್ರಯತ್ನ ಮಾಡೋಣ ಎಂದು ಹೇಳಿದರು.

ವೀರೇಶ್ ಎಂ. ರುದ್ರಸ್ವಾಮಿ, ಸಿದ್ದಣ್ಣ ಎಸ್. ಮರಗೋಳ, ಡಾ. ಅಶೋಕ ಎಸ್. ಶಟ್ಕಾರ್, ಜಿ.ಎಸ್. ಪಾಟೀಲ, ಮಂಜುನಾಥಎನ್. ವಾಲಿ, ನಿಹಾಲ್ ವಿಕ್ರಂರಾಜು, ಜಿ.ಎಲ್. ಬಾಬುರಾಜೇಂದ್ರ ಪ್ರಸಾದ್, ರಚಪ್ಪಾಜಿ, ಉದಯ್ ಡಿ. ಜೈನ್, ರಾಣಿರೇಖಾ, ವಿ. ಅಂಜಲಿ, ಡಾ.ಸುಶೀಲ ಹೂಗಾರ, ಅನುರಾಧಎಸ್., ಕಾವೇರಿಎಚ್.ಪೂಜಾರ, ಪೂರ್ಣಿಮಾಎನ್. ಇವರುಗಳೇ ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವ ಕಲಾವಿದರು.


Spread the love

Exit mobile version