Spread the love
ಕಲ್ಲಡ್ಕದಲ್ಲಿ ಮರುಕಳಿಸುತ್ತಿರುವ ಕೋಮು ದಳ್ಳುರಿಗೆ ಸರಕಾರವೇ ನೇರ ಹೊಣೆ: ಎಸ್ ಡಿ ಪಿ ಐ
ಮಂಗಳೂರು: ಪವಿತ್ರ ರಂಝಾನ್ ತಿಂಗಳಿನ ಆರಂಭದಿಂದಲೇ ಕಲ್ಲಡ್ಕದಲ್ಲಿ ಅಮಾಯಕ ಮುಸ್ಲಿಂ ಯುವಕನ ಮೇಲೆ ಕೊಲೆಯತ್ನ ನಡೆಸಿ ಇಡೀ ಕಲ್ಲಡ್ಕ ಪರಿಸರದಲ್ಲಿ ಅಶಾಂತಿ ಸೃಷ್ಟಿಸಿ ಕೋಮು ಗಲಭೆ ನಡೆಸಿ 20 ದಿವಸಗಳಾದರು ಇದುವರೆಗೆ ಸರಕಾರಕ್ಕೆ, ಪೊಲೀಸ್ ಇಲಾಖೆಗೆ ಸಂಘಪರಿವಾರದ ಗೂಂಡಾಗಳಾದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದೆ ಇರುವುದು ವಿಪರ್ಯಾಸವಾಗಿದೆ.
ಕಲ್ಲಡ್ಕ ಪ್ರಭಾಕರ ಭಟ್ ನ ಹಿಂಬಾಲಕರಾಗಿರುವ ಗೂಂಡಾಗಳು ಹಿಂದಿನಿಂದಲೂ ಈ ರೀತಿಯ ಕೃತ್ಯಗಳನ್ನು ನಡೆಸುತ್ತಾ ಬಂದಿದ್ದರೂ ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಸರಕಾರಕ್ಕೆ ಇವರನ್ನು ಬಂಧಿಸಲು ಸಾಧ್ಯವಾಗದೇ ಇರುವುದರಿಂದಾಗಿದೆ ಇಂತಹ ಕೋಮು ಗಲಭೆಗಳು ನಿರಂತರ ನಡೆಯುತ್ತಿರಲು ಕಾರಣ. ಉಸ್ತುವಾರಿ ಸಚಿವರ ಸ್ವ ಕ್ಷೇತ್ರದಲ್ಲಿ ಕಳೆದ 20 ದಿವಸಗಳಿಂದ ಈ ರೀತಿಯ ಹಲವು ಘಟನೆಗಳು ಸಂಭವಿಸಿದರೂ ಸಚಿವರು ಮೌನ ವಹಿಸಿರುವುದು ಘಟನೆಗೆ ಸಮ್ಮತಿಯನ್ನು ಕೊಟ್ಟಿರುವಂತಹ ಸಂಶಯಗಳು ಎದ್ದು ಕಾಣುತ್ತಿದೆ.
ಈ ರೀತಿಯ ಮೌನದಿಂದ ಮತ್ತು ಸಂಘಪರಿವಾರದ ಗೂಂಡಾಗಳನ್ನು ಬಂಧಿಸದೇ ಇದ್ದ ಕಾರಣದಿಂದಾಗಿದೆ ಜೂನ್ 13 ರಂದು ಮತ್ತೆ ಕಲ್ಲಡ್ಕದಲ್ಲಿ ಸಂಜೆ ಹೊತ್ತಿನಲ್ಲಿ ಸಂಘಪರಿವಾರದ ಗುಂಪು ಖಲೀಲ್ ಎಂಬ ಮುಸ್ಲಿಂ ಯುವಕನಿಗೆ ಚೂರಿ ಇರಿದು ಹಲ್ಲೆ ನಡೆಸಿ,ಕಲ್ಲಡ್ಕದ ರಾಮ ಮಂದಿರದ ಮೇಲ್ಭಾಗದಿಂದ ಮಸೀದಿಗೆ ಕಲ್ಲು ಮತ್ತು ಸೋಡಾ ಬಾಟಲಿಗಳನ್ನು ತೂರಾಟ ಮಾಡಿದ್ದಾರೆ.ಅದಲ್ಲದೆ ಅಂಗಡಿಗಳಿಗೆ, ವಾಹನಗಳಿಗೂ ಕೂಡ ಕಲ್ಲು ತೂರಾಟ ನಡೆಸಿ ಅಮಾನವೀಯವಾಗಿ ವರ್ತಿಸಿರುತ್ತಾರೆ.
ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಕೋಮು ದಳ್ಳುರಿಯನ್ನು ನಡೆಸಲು ಮೂಲ ಕಾರಣ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್.
ಕಳೆದ 20 ದಿನದ ಹಿಂದಿನ ಕೋಮು ಗಲಭೆಯ ಸಂದರ್ಭದಲ್ಲಿ ಅಮಾಯಕ ಮುಸ್ಲಿಂ ಯುವಕನಿಗೆ ಚೂರಿ ಇರಿದು ಕೊಲೆ ಯತ್ನ ನಡೆಸಿದ ಮರುದಿವಸ ನಾಗರಿಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದು ಮಾಡಿದಾಗ ಇದೇ ಕಲ್ಲಡ್ಕ ಪ್ರಭಾಕರ ಭಟ್ ಸ್ವತಃ ಕಲ್ಲಡ್ಕ ಪೇಟೆಗೆ ಧಾವಿಸಿ ಅಂಗಡಿಗಳನ್ನು ತೆರೆಯುವಂತೆ ಒತ್ತಡ ಹಾಕಿ ಕೋಮು ದ್ವೇಷವನ್ನು ಹರಡಿದ್ದಾರೆ,ಅದಲ್ಲದೆ ಪತ್ರಿಕಾಗೋಷ್ಟಿಯನ್ನು ಕರೆದು ಮುಸ್ಲಿಮರ ಮತ್ತು ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಕೈ ಕಚ್ಚಿಕೊಂಡಿರುತ್ತಾರೆ.
ಈ ರೀತಿಯ ಕೃತ್ಯವನ್ನು ಎಸಗುವ ಎಲ್ಲಾ ಆರೋಪಿಗಳಿಗೆ ಕಳೆದ ಹಲವು ವರ್ಷಗಳಿಂದ ಅಡಗುಸ್ಥಾನ *ಕಲ್ಲಡ್ಕ ಶ್ರೀ ರಾಮ ವಿದ್ಯಾಲಯ* ಇದರಿಂದ ಆರೋಪಿಗಳು ಅವರ ಕೃತ್ಯವನ್ನು ಬಹಳ ಧೈರ್ಯದಿಂದ ನಡೆಸಿ ಬರುತ್ತಾರೆ. ಆದರೆ ಇದುವರೆಗೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಗಳನ್ನು ಪತ್ತೆಹಚ್ಚುವ ಧೈರ್ಯ ತೋರದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ್ತವಾಗಿದೆ.
ಪೊಲೀಸ್ ಇಲಾಖೆ ಶ್ರೀ ರಾಮ ವಿದ್ಯಾಲಯಕ್ಕೆ ತೆರಳಿ ಹುಡುಕಾಡಿದರೆ ಎಲ್ಲಾ ಆರೋಪಿಗಳನ್ನು ಬಂಧಿಸಲು ಸಾಧ್ಯವಿದೆ.
ಅಹಿತಕರ ಘಟನೆಗಳು ನಡೆಯುವ ಸಂದರ್ಭದಲ್ಲಿ ಪ್ರಭಾಕರ ಭಟ್ ಮೇಲೆ ಕೈ ತೋರಿಸುವ ಸಚಿವರುಗಳಿಗೆ ಇದುವರೆಗೆ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ..ಮುಸ್ಲಿಮರ ಮತಕ್ಕೆ ಬೇಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಸರಕಾರದ ಕೀಳು ಮಟ್ಟದ ರಾಜಕೀಯವಾಗಿದೆ ಇದಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ನೀಡಲಿದ್ದಾರೆ.
ಆದುದರಿಂದ ಕೂಡಲೇ ಸರಕಾರ ಮತ್ತು ಪೊಲೀಸ್ ಇಲಾಖೆ ಹಲ್ಲೆಗೈದು,ಮಸೀದಿಗೆ ಕಲ್ಲು ಮತ್ತು ಸೋಡಾ ಬಾಟಲಿಗಳನ್ನು ಎಸೆದು ಸಾರ್ವಜನಿಕ ಆಸ್ತಿಗಳನ್ನು ನಷ್ಟಮಾಡಿರುವ ಸಂಘಪರಿವಾರದ ಗೂಂಡಾಗಳ ಮೇಲೆ ಮತ್ತು ಅವರಿಗೆ ಬೆಂಬಲ ನೀಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕು.ಇಲ್ಲದಿದ್ದರೆ ಜಿಲ್ಲಾದ್ಯಂತ ಹೋರಾಟವನ್ನು ನಡೆಸಲಾಗುವುದೆಂದು ಎಸ್ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ ತಿಳಿಸಿರುತ್ತಾರೆ.
Spread the love