Home Mangalorean News Kannada News ಕಲ್ಲಡ್ಕ ಘಟನೆ, ಅಶ್ರಫ್ ಕೊಲೆ ತನಿಖೆಗೆ ನಾಲ್ಕು ತಂಡ ರಚನೆ ; ಅಲೋಕ್ ಮೋಹನ್

ಕಲ್ಲಡ್ಕ ಘಟನೆ, ಅಶ್ರಫ್ ಕೊಲೆ ತನಿಖೆಗೆ ನಾಲ್ಕು ತಂಡ ರಚನೆ ; ಅಲೋಕ್ ಮೋಹನ್

Spread the love

ಕಲ್ಲಡ್ಕ ಘಟನೆ, ಅಶ್ರಫ್ ಕೊಲೆ ತನಿಖೆಗೆ ನಾಲ್ಕು ತಂಡ ರಚನೆ ; ಅಲೋಕ್ ಮೋಹನ್

ಮಂಗಳೂರು: ಬಂಟ್ವಾಳದ ಕಲ್ಲಡ್ಕ ಮತ್ತು ಸುತ್ತಮುತ್ತಲಿನಲ್ಲಿ ಕೆಲದಿನಗಳಿಂದ ನಡೆದಿರುವ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದಾರೆ.

ಅವರು ನಗರದ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ನಡೆದಿರುವ ಅಹಿತಕರ ಘಟನೆಗಳನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಜೊತೆಗೆ ಷಡ್ಯಂತ್ರ ರೂಪಿಸಿದ ದುಷ್ಟ ಶಕ್ತಿಗಳಿಗೆ ಉತ್ತರ ನೀಡಲಾಗುವುದು. ಕೆಲವು ಸಮಯದಿಂದ ಶಾಂತಿ ಸುವ್ಯವಸ್ಥೆಯಿಂದ ಕೂಡಿದ್ದ ದಕ ಜಿಲ್ಲೆಯಲ್ಲಿ ಇಂತಹ ಘಟನೆ ನಿಜಕ್ಕೂ ಪೋಲಿಸ್ ಇಲಾಖೆಗೆ ಆತಂಕವನ್ನು ನೀಡಿದೆ. ಐಜಿಪಿ ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳು ಬಂಟ್ವಾಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರತಿಯೊಂದು ಘಟನೆಗಳನ್ನು ಬಂಧೀಸಿದಾಕ್ಷಣ ಈ ಘಟನೆಗಳ ಷಡ್ಯಂತ್ರ ರೂಪಿಸಿದವರನ್ನೂ ಬಂಧಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ನಡೆದಿರುವ ಘಟನೆಗಳು ಉತ್ತಮ ಬೆಳವಣಿಗೆಯಲ್ಲ. ಪೋಲಿಸ್ ಇಲಾಖೆ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲಿದ್ದು, ದುಷ್ಟ ಹಾಗೂ ರೌಡಿ ಶಕ್ತಿಗಳನ್ನು ಬಗ್ಗುಬಡಿಯಲಿದೆ. ಇಲಾಖೆ ತನ್ನಲ್ಲಾ ಶ್ರಮದೊಂದಿಗೆ ಈ ಪ್ರಕರಣಗಳನ್ನು ತನಿಖೆ ನಡೆಸಲಿದೆ.

ಕರಾವಳಿಯ ಜಿಲ್ಲೆಗಳಲ್ಲಿ ಪೋಲಿಸ್ ವ್ಯವಸ್ಥೆ ಉತ್ತಮವಾಗಿದ್ದು, ದಕ್ಷ ಹಾಗೂ ಕರ್ತವ್ಯ ನಿಷ್ಟ ಪೋಲಿಸ್ ಅಧಿಕಾರಿಗಳಿದ್ದಾರೆ. ಈ ಘಟನೆಯ ಹಿನ್ನಲೆಯಲ್ಲಿ ಪೋಲಿಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವತ್ತ ಚಿಂತನೆ ನಡೆದಿದೆ ಎಂದರು.

ಜಿಲ್ಲೆಯ ಶಾಂತಿ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಮಗಳೂರು, ಉಡುಪಿ, ಕಾರವಾರದಿಂದಲೂ ಹೆಚ್ಚುವರಿ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ. ದಕ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗವಾಣೆ ಕುರಿತು ಮಾತನಾಡಿದ ಅಲೋಕ್ ಮೋಹನ್ ಇದು ಸರಕಾರದ ನಿರ್ಧಾರವಾಗಿದ್ದು, ಜಿಲ್ಲೆಯಲ್ಲಿ ತಲೆ ಎತ್ತಿರುವ ದುಷ್ಕರ್ಮಿಗಳನ್ನು ಹತ್ತಿಕ್ಕಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರಕಾರ ತನ್ನ ನೆಲೆಯಲ್ಲಿ ಕ್ರಮ ಕೈಗೊಂಡಿದೆ ಎಂದರು.


Spread the love

Exit mobile version