ಕಸ್ತೂರಿ ರಂಗನ್ ಸಮಸ್ಯೆ ಬಗ್ಗೆ ದ್ವನಿ ಎತ್ತದ ಶೋಭಾಗೆ ಮತ ಕೇಳುವ ಯಾವ ನೈತಿಕತೆ ಇದೆ :ವಿಶ್ವಾಸ ಶೆಟ್ಟಿ
ಉಡುಪಿ: ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ ಒಂದೇ ಒಂದು ದ್ವನಿ ಎತ್ತದ ಶೋಭಾ ಕರಂದ್ಲಾಜೆಯವರೇ ಯಾವ ನೈತಿಕತೆಯ ಮೇಲೆ ಅವಳಿ ಜಿಲ್ಲೆಯಲ್ಲಿ ಮತ ಕೇಳುತ್ತಿದ್ದಿರಿ ಕಸ್ತೂರಿ ರಂಗನ್ ವ್ಯಾಪಿಯಲ್ಲಿ ಬರುವ ಮುಗ್ದ ಜನರ ಜೀವನದ ಜೊತೆಗೆ ಆಟವಾಡಿದರೆ ದೇವರೂ ಕೂಡ ನಿಮ್ಮನ್ನು ಕ್ಷಮಿಸಲಾರ ಈ ಬಾರಿ ಈ ವ್ಯಾಪ್ತಿಯಲ್ಲಿ ಬರುವ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ಜಿಲ್ಲಾದ್ಯಕ್ಷರಾದ ವಿಶ್ವಾಸ ಶೆಟ್ಟಿ ಹೇಳಿದ್ದಾರೆ.
ಕಸ್ತೂರಿ ರಂಗನ್ ವ್ಯಾಪಿಯಲ್ಲಿ ಬರುವ ಪ್ರದೇಶದಲ್ಲಿ ಕಾಡು ಪ್ರಾಣೆಗಳ ಹಾವಳಿ ಅರಣ್ಯ ಇಲಾಖೆಯವರು ಹೊರಗಿನಿಂದ ತಂದು ಬಿಡುತ್ತಿರುವ ಹುಲಿ ಚಿರತೆ ಇತರ ಪ್ರಾಣಿಗಳ ಸಮಸ್ಯೆ ಅಲ್ಲಿನ ಜನತೆಗೆ ಬದುಕಬೇಕ ಸಾಯಬೇಕ ಎಂಬ ಪರಿಸ್ಥಿತಿ ಬಂದಿದೆ ಮತ್ತು ಮನುಷ್ಯ ಹಾಗೂ ದನ ಕರುಗಳ ಮೇಲೆ ಚಿರತೆ ದಾಳಿ ನೆಡೆಯುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ
ಕಾಡುಪ್ರಾಣೆಗಳಿಂದ ಬೆಳೆದ ಬೆಳೆಗಳೂ ನಾಶವಾಗುತ್ತಿದ್ದರೂ ಹೇಳುವವರು ಕೇಳುವವರು ಇಲ್ಲ ಮಾಡಿದ ಕೃಷಿ ನಾಶವಾಗತ್ತಿದ್ದರೂ ಸೂಕ್ತ ಪರಿಹಾರವಾಗಲಿ ರಕ್ಷಣೆಯಾಗಲಿ ರೈತರಿಗೆ ದೂರಕುತ್ತಿಲ್ಲ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ಜಿಲ್ಲಾದ್ಯಕ್ಷರಾದ ವಿಶ್ವಾಸ ಶೆಟ್ಟಿ ಅರೋಪಿಸಿದ್ದಾರೆ ಹಾಗೂ ಜನರ ಸಮಸ್ಯೆ ಗೆ ಪರಿಹಾರ ನೀಡದ ಜನರಿಗೆ ದ್ವನಿಯಾಗಿ ನಿಲ್ಲದ ಶೋಭ ಕರಂದ್ಲಾಜೆಯನ್ನು ಸೋಲಿಸಿ ಅಭಿವೃದ್ಧಿಯ ಪರವಾಗಿರುವ ಪ್ರಮೋದ್ ಮದ್ವರಾಜ್ ಅವರನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ