ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರಶಾಸ್ತ್ರ ತಜ್ಞರಿಂದ ಟೆನಿಸ್ ಬಾಲ್ ಗಿಂತ ದೊಡ್ಡದಾದ ಮೂತ್ರಪಿಂಡದ ಕಲ್ಲನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ
ವೈದ್ಯಕೀಯ ವಿಜ್ಞಾನದ ಇತಿಹಾಸದಲ್ಲಿ ನಾಲ್ಕನೇ ದೊಡ್ಡ ಕಲ್ಲು. ಚೇತರಿಸಿಕೊಂಡ ರೋಗಿ ಈಗ ಸಾಮಾನ್ಯ ಜೀವನದತ್ತ
ಮಣಿಪಾಲ: ಕಾರ್ಕಳದ ಒಬ್ಬ 46 ವರ್ಷ ವಯಸ್ಸಿನ ಪುರುಷರಿಗೆ ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಅಸಂಯಮ ಮೂತ್ರದ ವರ್ತನೆಗೆ ಕೇವಲ 5 ದಿನಗಳ ಹಿಂದೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವೈದ್ಯಕೀಯ ಅಧೀಕ್ಷಕರೂ ಆದ ಡಾ. ಪದ್ಮರಾಜ ಹೆಗ್ಡೆ ಅವರು ರೋಗಿಯನ್ನು ಪರೀಕ್ಷಿಸಿ, ಕೆಲವು ಪರೀಕ್ಷೆಗಳನ್ನು ಮಾಡಿದ ಬಳಿಕ ರೋಗಿಯ ಕ್ಷ-ಕಿರಣವನ್ನು ಗಮನಿಸಿದಾಗ 10ಘx8ಸೆಂಟಿಮೀಟರ್ ಗಾತ್ರದ ಕಲ್ಲನ್ನು ನೋಡಿದಾಗ ಅವರಿಗೆ ಆಶ್ಚರ್ಯವಾಗಿತ್ತು.
ಡಾ. ಪದ್ಮರಾಜ ಹೆಗ್ಡೆ ನೇತೃತ್ವದ ಮೂತ್ರಶಾಸ್ತ್ರ ವಿಭಾಗದ ಡಾ. ಜೀಶನ್ ಹಮೀದ್, ಡಾ. ಮಂಜುನಾಥ್ ಮತ್ತು ಅರಿವಳಿಕೆ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಕುಮಾರ್ ಅವರನ್ನು ಒಳಗೊಂಡ ವೈದ್ಯಕೀಯ ತಂಡ ಮೂತ್ರಕೋಶದ ಕಲ್ಲನ್ನು ತೆಗೆಯಲು ಕಸ್ತೂರ್ಬಾಆಸ್ಪತ್ರೆ ಮಣಿಪಾಲದಲ್ಲಿ ತೆರೆದ ಶಸ್ತ್ರಚಿಕಿತ್ಸೆ ನಡೆಸಿತು. ಈ ಕಲ್ಲು 530 ಗ್ರಾಂ ತೂಕ ಮತ್ತು ಗಾತ್ರದಲ್ಲಿ ಟೆನಿಸ್ ಬಾಲ್ ಗಿಂತ ದೊಡ್ಡದಾಗಿತ್ತು. ಮೂತ್ರಕೋಶದ ಕಲ್ಲುಗಳು ಸಾಮಾನ್ಯವಾಗಿ ಮೂತ್ರಕೋಶದ ನಾಳದಲ್ಲಿ ಅಡಚಣೆ, ವಿದೇಶಿ ವಸ್ತುಗಳ ಸಂಬಂಧಿತ ಮೂತ್ರಕೋಶದ ಕಾರ್ಯನಿರ್ವಹಿಸದಿರುವಿಕೆ ಮತ್ತು ಮೂತ್ರದ ಸೋಂಕು ವಯಸ್ಸಾದ ರೋಗಿಗಳಲ್ಲಿ ಕಂಡುಬರುತ್ತದೆ. ಈ ರೀತಿಯ ಒಂದು ದೈತ್ಯ ಮೂತ್ರಕೋಶ ಕಲ್ಲು ವೈದ್ಯಕೀಯ ಆಚರಣೆಯಲ್ಲಿ ಅಪರೂಪದ ಗಳಿಕೆ. ಆದರೆ ಈ ರೋಗಿಯು ಯುವಕರಾಗಿದ್ದು ಕೇವಲ 5 ದಿನಗಳಲ್ಲಿ ಅಸಾಮಾನ್ಯ ಲಕ್ಷಣಗಳನ್ನು ಅನುಭವಿಸಿದರು.
ಇತ್ತೀಚಿನ ಮೂತ್ರಕೋಶದ ವೈದ್ಯಕೀಯ ಆಚರಣಾ ಪದ್ಧತಿಯಲ್ಲಿ, ಒಂದು ದೈತ್ಯ ಮೂತ್ರಕೋಶದ ಕಲ್ಲುಗಳು ವಿಶೇಷವಾಗಿ ಹೆಚ್ಚೆಂದರೆ 100 ಗ್ರಾಂ ಅಪರೂಪ. ಈ ವಿಷಯದ ಮೇಲೆ ಕಳೆದ 30 ವರ್ಷಗಳಲ್ಲಿ ಲೇಖನಗಳು, ಪತ್ರಿಕೆಗಳನ್ನು ಶೋಧಿಸಿದರೆ 85ಕ್ಕಿಂತ ಕಡಿಮೆ ಸಂಬಂಧಿತ ಲೇಖನಗಳು ಕಂಡುಬಂದವು. ಭಾರತದಲ್ಲಿ ಲಭ್ಯವಿರುವ ಲೇಖನ, ಪುರಾವೆ ಗಮನಿಸಿದರೆ ಉಲ್ಲಸ ನಗರದಿಂದ ಒಂದು ಮೂತ್ರಕೋಶ ಕಲ್ಲು 800 ಗ್ರಾಂ ತೂಕದ ದಾಖಲೆ ಮಾಡುತ್ತದೆ. ಅಂತಾರಾಷ್ಟ್ರೀಯ ಚರಿತ್ರೆಯನ್ನು ಗಮನಿಸಿದರೆ ಕೇವಲ 3 ಮೂತ್ರಕೋಶದ ಕಲ್ಲುಗಳು ಮೇಲೆ ಹೇಳಿದ್ದಕ್ಕಿಂತ ದೊಡ್ಡದಾಗಿ ದಾಖಲಿಸಿಸಲ್ಪಡುತ್ತವೆ. ಅವುಗಳು ಕ್ರಮವಾಗಿ ಚೀನಾ, ಹಂಗೇರಿ ಮತ್ತು ಬ್ರೆಜಿಲ್ ದೇಶದ್ದಾಗಿವೆ.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿಗಳಾದ ಡಾ. (ಕರ್ನಲ್.) ಎಂ ದಯಾನಂದ ಅವರು ಡಾ. ಪದ್ಮರಾಜ ಹೆಗ್ಡೆ ನೇತೃತ್ವದ ತಂಡಕ್ಕೆ ಹಾರ್ದಿಕ ಅಭಿನಂದನೆಯನ್ನು ಸಲ್ಲಿಸುತ್ತಾ “ಆರಂಭಿಕ ಪತ್ತೆ ಉತ್ತಮ ಶಸ್ತ್ರಚಿಕಿತ್ಸೆ ಮತ್ತು ಉತ್ತಮ ಫಲಿತಾಂಶಕ್ಕೆ ಪ್ರಮುಖ ಕಾರಣ” ಎಂದು ತಿಳಿಸಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಅತ್ಯಾಧುನಿಕ ಮೂತ್ರಕೋಶದ ಶಸ್ತಚಿಕಿತ್ಸಾ ಕೊಠಡಿ ಸಂಕೀರ್ಣ, ಲೇಸರ್ ಶಕ್ತಿ ವ್ಯವಸ್ಥೆಯಂತಹ ಮುಂದುವರಿದ ಸೌಲಭ್ಯಗಳಿಂದ ಕಠಿಣ ಕಲ್ಲುಗಳನ್ನು ಮುರಿಯುವ ಸಾಮರ್ಥ್ಯ ಎಂಡೋಸ್ಕೋಪಿಕ್ ವಿಧಾನಕ್ಕಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಡಾ. (ಕರ್ನಲ್) ಎಂ. ದಯಾನಂದ, ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿಗಳು