ಕಾಂಕ್ರೀಟಿಕರಣದ ಹೆಸರಿನಲ್ಲಿ ಕಿರಿದಾಗುತ್ತಿರುವ ರಸ್ತೆಗಳು – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಕಾಂಕ್ರೀಟಿಕರಣ ಮಾಡುವುದು ಉತ್ತಮ ಕೆಲಸ ಹಾಗೂ ಇದು ಶಾಶ್ವತ ಕಾಮಗಾರಿ ಕೂಡ ಹೌದು. ಆದರೆ ಹೆಚ್ಚಿನ ಕಡೆ ರಸ್ತೆ ಕಾಂಕ್ರೀಟಿಕರಣ ಆಗುವಾಗ ಅಗಲವಾದ ರಸ್ತೆಗಳು ಕಿರಿದಾಗಿ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಪಾಯಕಾರಿ ಆಗುತ್ತಿವೆ ಎಂದು ಕುಂದಾಪುರದ ನ್ಯಾಯವಾದಿ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ
ಅಗಲವಾದ ರಸ್ತೆಗೆ ಕಿರಿದಾಗಿ ಕಾಂಕ್ರೀಟ್ ಹಾಕಿ ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಸಮರ್ಪಕ ಕೆಲಸ ಮಾಡದೆ ಅಪಾಯಕಾರಿಯಾಗಿ ಬಿಟ್ಟಿರುವುದು ಹೆಚ್ಚಿನ ರಸ್ತೆಗಳಲ್ಲಿ ನೋಡಬಹುದು. ಇದು ಪುರಸಭೆಯ ಕಟಾಚಾರದ ಕಾಮಗಾರಿ ನಿರ್ವಹಣೆಯಾಗಿದೆ. ಇನ್ನು ಮುಂದಾದರೂ ಪುರಸಭೆ ರಸ್ತೆ ಕಾಂಕ್ರೀಟಿಕರಣ ಮಾಡುವಾಗ ಅಗಲವಾದ ರಸ್ತೆಗಳನ್ನು ಕಿರಿದು ಮಾಡದೆ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಬೇಕು ಹಾಗೂ ಇದರ ಬಗ್ಗೆ ಪುರಸಭೆ ಆಡಳಿತ ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಆಗ್ರಹಿಸಿದ್ದಾರೆ