ಕಾಂಗ್ರೆಸಿನ ಪಾದಯಾತ್ರೆ ಬಳಿಕ ಸಂಸದ ನಳಿನ್ ಗಡ್ಕರಿಗೆ ಮನವಿ ನೀಡಿದ್ದಾರೆ – ರಮಾನಾಥ ರೈ

Spread the love

ಕಾಂಗ್ರೆಸಿನ ಪಾದಯಾತ್ರೆ ಬಳಿಕ ಸಂಸದ ನಳಿನ್ ಗಡ್ಕರಿಗೆ ಮನವಿ ನೀಡಿದ್ದಾರೆ – ರಮಾನಾಥ ರೈ

ಮಂಗಳೂರು: ರಸ್ತೆ ಕಾಮಗಾರಿ ಪುನರ್ ಪ್ರಾರಂಭ ಮಾಡಬೇಕೆಂದು ಕಾಂಗ್ರೆಸ್ನಿಂದ ಪಾದಯಾತ್ರೆ ಮಾಡಲಾಗಿದೆ. ಸಂಸದ ನಳಿನ್ ಅವರಿಗೆ ಈ ಕಾಮಗಾರಿ ಸ್ಥಗಿತಗೊಂಡಿದ್ದು ಯಾವಾಗ ಎನ್ನುವುದೂ ತಿಳಿದಿಲ್ಲ. ಕಾಂಗ್ರೆಸ್ ಪಾದಯಾತ್ರೆ ಮಾಡಿದ ನಂತರ ಸಂಸದರು ಎಚ್ಚೆತ್ತುಕೊಂಡರು. ಸ್ಥಗಿತ ಆಗಿದ್ದಂತಹ ಹೆದ್ದಾರಿ ಕಾಮಗಾರಿಯನ್ನು ಮತ್ತೆ ಕೈಗೊಳ್ಳಲು ಗಡ್ಕರಿಗೆ ಮನವಿ ಕೊಟ್ಟಿದ್ದಾರೆ. ಸಂಸದರ ಸ್ಥಿತಿ ಮನವಿ ಕೊಡುವಲ್ಲಿಗೆ ಬಂದಿದೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಚುನಾವಣೆಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಎಂಟು ತಿಂಗಳ ಹಿಂದೆಯೇ ಕಾಮಗಾರಿ ನಿಂತಿದೆ ಎಂದು ಅವರು ಹೇಳುತ್ತಾರೆ. ಆದರೆ ಕೇವಲ ಮೂರು ತಿಂಗಳ ಹಿಂದೆ ಈ ಕಾಮಗಾರಿ ಸ್ಥಗಿತಗೊಂಡಿದ್ದು, ನಾವು ಸಾರ್ವಜನಿಕ ಬದುಕಿನಲ್ಲಿರುವಾಗ ಸತ್ಯವನ್ನೇ ಹೇಳಬೇಕು. ಹಾಗಾಗಿ ಈಗ ಪಾದಯಾತ್ರೆ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಇದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ ಕೆಲಸ ಮಾಡಲು ಯಾವುದೇ ಸಮಸ್ಯೆ ಇಲ್ಲ. 30 ಹೆಕ್ಟೇರ್ ಅರಣ್ಯ ಭೂಮಿ ಭೂಸ್ವಾಧೀನಕ್ಕೆ ತಾನು ಮಂತ್ರಿಯಾಗಿದ್ದಾಗಲೇ ಒಪ್ಪಿಗೆ ಕೊಟ್ಟಿದ್ದೇನೆ. ಇದು ತಮ್ಮ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾಡುವಂತಹ ಪ್ರಯತ್ನವಾಗಿದೆ. ಈ ರಸ್ತೆ ಕಾಮಗಾರಿ ಸ್ಥಗಿತಗೊಳ್ಳಲು ಸಂಸದರೇ ಕಾರಣ ಎಂದು ಸಚಿವ ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಮನಪಾ ಸದಸ್ಯರಾದ ಪ್ರದೀಪ್ ಡಿಸೋಜ, ಕವಿತಾ ಸನೀಲ್, ಇಬ್ರಾಹೀಂ ಕೋಡಿಜಾಲ್, ಮಮತಾ ಗಟ್ಟಿ, ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.


Spread the love