Home Mangalorean News Kannada News ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಸುದ್ದಿ: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಸುದ್ದಿ: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

Spread the love

ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಸುದ್ದಿ: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

ಬೆಂಗಳೂರು: ತಿಂಗಳ ಹಿಂದಷ್ಟೇ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ  ಇದೀಗ ಕಾರ್ಯಕರ್ತರಿಗೂ ಶುಭ ಸುದ್ದಿ ನೀಡಿದೆ. ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ ಮಂಡಳಿ  ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಬಹಳಷ್ಟು ಸಮಯದಿಂದ ನನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ನೇಮಕ ಪ್ರಹಸನಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ. ಶಾಸಕರಿಗೆ ಹಾಗೂ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ಎದುರಿಸಿತ್ತು.

ಯಾರಿಗೆ ಯಾವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ?

ಕಾಂತಾ ನಾಯ್ಕ- ಅಧ್ಯಕ್ಷರು, ಕೌಶಲ್ಯಾಭಿವೃದ್ಧಿ ನಿಗಮ

ಮುಂಡರಗಿ ನಾಗರಾಜ್- ಅಧ್ಯಕ್ಷರು, ಬಾಬು ಜಗಜೀವನ್ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

ವಿನೋದ್ ಅಸೂಟಿ- ಕ್ರೀಡಾ ಪ್ರಾಧಿಕಾರ

ಬಿ.ಹೆಚ್.ಹರೀಶ್- ಕೃಷಿ ಉತ್ಪನ್ನ ರಫ್ತು ನಿಗಮ

ಅಂಶುಮನ್- ಭದ್ರಾ ಕಾಡಾ ಅಭಿವೃದ್ಧಿ ನಿಗಮ

ಆಂಜನೇಯಲು- ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ

ಯೋಗೇಶ್ ಬಾಬು- ದ್ರಾಕ್ಷಾರಸ ಮಂಡಳಿ

ಮರಿಗೌಡ-ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ

ಎಸ್.ಮನೋಹರ್- ಎಂಇಐ

ದೇವೇಂದ್ರಪ್ಪ- ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

ರಾಜಶೇಖರ್- ಜೈವಿಕ ಇಂಧನ ಮಂಡಳಿ

ಅಯೂಬ್ ಖಾನ್- ಬಣ್ಣ ಮತ್ತು ಅರಗು ಕಾರ್ಖಾನೆ

ಮಮತಾ ಗಟ್ಟಿ- ಗೇರು ಅಭಿವೃದ್ಧಿ ನಿಗಮ

ಪಲ್ಲವಿ ಜಿ- ಸಾಂಬಾರು ಅಭಿವೃದ್ಧಿ ನಿಗಮ

ಹೆಚ್.ಸಿ.ಸುಧೀಂದ್ರ-ತೆಂಗು ಅಭಿವೃದ್ಧಿ ಮಂಡಳಿ

ಡಾ.ನಾಗಲಕ್ಷ್ಮಿ‌ಚೌದರಿ- ರಾಜ್ಯ‌ಮಹಿಳಾ ಆಯೋಗ

ಹೆಚ್.ಎಸ್.ಸುಂದರೇಶ್- ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ

ಜಯಸಿಂಹ-ಬ್ರಾಹ್ಮಣ ಅಭಿವೃದ್ಧಿ ನಿಗಮ

ವಿಜಯ್ ಮುಳುಗುಂದ-ಉಪನಗರ ವರ್ತುಲ ಯೋಜನಾ ಪ್ರಾಧಿಕಾರ

ಮರಿಸ್ವಾಮಿ-ಕಾಡಾ ಮೈಸೂರು

ಸದಾಶಿವ ಉಲ್ಲಾಳ್-ಮಂಗಳೂರು‌ನಗರಾಭಿವೃದ್ಧಿ ಪ್ರಾಧಿಕಾರ

ರಘುನಂದನ್ ರಾಮಣ್ಣ-ಬೆಂ.ಮೈಸೂರ್ ಕಾರಿಡಾರ್

ಬಸವರಾಜ ಜಾಬಶೆಟ್ಟಿ-ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ

ಸಾಧು ಕೋಕಿಲ-ಕರ್ನಾಟಕ ಚಲನಚಿತ್ರ ಅಕಾಡೆಮಿ

ಆರ್.ಎಂ.ಮಂಜುನಾಥ್-ಮಲೆನಾಡು ಪ್ರದೇಶ ಅಭಿವೃದ್ಧಿ

ಜಯಣ್ಣ-ಅನುಸೂಚಿನ ಬುಡಕಟ್ಟು ಆಯೋಗ

ಆರ್.ಸಂಪತ್ ರಾಜ್-ಅಂಬೇಡ್ಕರ್ ಅಭಿವೃದ್ಧಿ ನಿಗಮ

ಪದ್ಮಾವತಿ-ಮಹಿಳಾ ಅಭಿವೃದ್ಧಿ ನಿಗಮ

ಶ್ರೀನಿವಾಸ್-ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ

ಶಾಕಿರ್ ಸನದಿ-ಹು- ಧಾ ನಗರಾಭಿವೃದ್ಧಿ

ಸೋಮಣ್ಣ ಬೇವಿನಮರದ-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ

ಮೆಹಬೂಬ್ ಪಾಷಾ-ಕಂಠೀರವ ಸ್ಟುಡಿಯೋ

ಕೀರ್ತಿ‌ಗಣೇಶ್-ದೇವರಾಜ ಅರಸು ಅಭಿವೃದ್ಧಿ ನಿಗಮ

ಮಜರ್ ಖಾನ್- ಅರಸು ಟ್ರಕ್ ಟರ್ಮಿನಲ್

ಸವಿತಾ ರಘು- ಸಫಾಯಿ‌ಕರ್ಮಚಾರಿ

ಜಿ.ಎಸ್.ಮಂಜುನಾಥ್-ರಾಜ್ಯ ಕಾರ್ಮಿಕ ಕಲ್ಯಾಣ

ಮಾಲಾ ನಾರಾಯಣರಾವ್-ಮೀನುಗಾರಿಕೆ ಅಭಿವೃದ್ಧಿ ನಿಗಮ

ರಿಜ್ವಾನ್-ಮಾವು ಅಭಿವೃದ್ಧಿ ನಿಗಮ

ಕೇಶವ ರೆಡ್ಡಿ-ಚಿಕ್ಕಬಳ್ಳಾಪುರ ನಗರಾಭಿವೃದ್ಧಿ

ತಾಜ್ ಫೀರ್-ಚಿತ್ರದುರ್ಗ ನಗರಾಭಿವೃದ್ಧಿ

ಗಂಗಾಧರ್-ಮೈಸೂರು ಸಕ್ಕರೆ ಕಾರ್ಖಾನೆ

ಅಲ್ತಾಫ್- ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ


Spread the love

Exit mobile version