Home Mangalorean News Kannada News ಕಾಂಗ್ರೆಸ್ ಪ್ರತಿಭಟನೆಯಿಂದಾರೂ ಮೋದಿ ವಾಣಿಜ್ಯ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಲಿ: ಸೊರಕೆ

ಕಾಂಗ್ರೆಸ್ ಪ್ರತಿಭಟನೆಯಿಂದಾರೂ ಮೋದಿ ವಾಣಿಜ್ಯ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಲಿ: ಸೊರಕೆ

Spread the love

ಕಾಂಗ್ರೆಸ್ ಪ್ರತಿಭಟನೆಯಿಂದಾರೂ ಮೋದಿ ವಾಣಿಜ್ಯ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಲಿ: ಸೊರಕೆ

ಉಡುಪಿ: ಕೇಂದ್ರ ಸರಕಾರದ ರೈತವಿರೋಧಿ, ಜನವಿರೋಧಿ ನಿಲುವು ಖಂಡಿಸಿ, ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರಿಂದಾದರೂ ಕೇಂದ್ರ ಸರಕಾರ ಕಣ್ಣು ತೆರೆಯಲಿ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಸೋಮವಾರ ಕಾಪು ಪೇಟೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಕೇಂದ್ರ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರಕಾರ ವಿನಂತಿಸಿದರೂ ವಾಣಿಜ್ಯ ಬ್ಯಾಂಕ್‍ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ಆ ದರೂ ವಾಣಿಜ್ಯ ಬ್ಯಾಂಕ್‍ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ದೇಶಕ್ಕೆ ಅನ್ನ ಕೊಡುವ ರೈತರು ನಾನಾ ಕಾರಣಗಳಿಂದ ಸಾಲ ಕಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೇಸ್ ಸರಕಾರವು 50 ಸಾವಿರ ತನಕದ ಸಾಲವನ್ನು ಮನ್ನಾ ಮಾಡಿದ್ದು, 22 ಲಕ್ಷ ರೈತರಿಗೆ ಲಾಭವಾಗಿದೆ. ಇದರಿಂದ ರೂ.8,165 ಕೋಟಿ ಹೆಚ್ಚವರಿ ಹೊರೆ ರಾಜ್ಯ ಬೊಕ್ಕಸಕ್ಕೆ ಬೀಳಲಿದೆ. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರ ವಿನಂತಿಸಿದರೂ ವಾಣಿಜ್ಯ ಬ್ಯಾಂಕ್‍ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. 3 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಯಾವುದೇ ಬೇಡಿಕೆಯನ್ನು ಪೂರೈಸುತ್ತಿಲ್ಲ. ಇದು ಖಂಡನೀಯ ಎಂದೂ ಸೊರಕೆ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದು, ತೀವ್ರ ಬರಗಾಲ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ರೈತರು ಗದ್ದೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದು, ಬಿಜೆಪಿ ಮುಖಂಡ ಯಡಿಯೂರಪ್ಪ ಅವರು ಹೆದ್ದಾರಿಯಲ್ಲಿ ಬರಪರಿಶೀಲನೆ ನಡೆಸುತ್ತಿದ್ದಾರೆ. 5 ಸ್ಟಾರ್ ಹೋಟೇಲು ಅಂಬಡೆ, ಇಡ್ಲಿ ತಿನ್ನುವ ಮೂಲಕ ದಲಿತರ ಮನೆಯ ಊಟ ಎಂಬ ನಾಟಕವನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಅದಾನಿ, ಅಂಬಾನಿ ಮತ್ತು ಶೋಬಕ್ಕನವರಿಗೆ ಮಾತ್ರ ಅಚ್ಚೇ ದಿನ್ ಬಂದಿದೆ ಹೊರತು ಜನಸಾಮಾನ್ಯರಿಗೆ ಅಲ್ಲ ಎಂದು ಲೇವಡಿ ಮಾಡಿದರು.

ಎಲ್ಲಿಯಾದರೂ ಹೆಣ ಬಿದ್ದಾಗ ಹೋಗಿ ನೋಡಿ ರಾಜಕೀಯದ ನಾಟಕವಾಡುವ ಸಾಂಸದೆ ಶೋಭಾ ಕರಂದ್ಲಾಜೆ ಅವರು ನಡೆಸಿದ ಸಾಧನೆ ಏನು. 3 ವರ್ಷಗಳಲ್ಲಿ ಕೇಂದ್ರ ಸರಕಾರದ ಜನಪರ ಕಾಳಜಿ ಎಲ್ಲಿದೆ. ಗುಂಪು ಘರ್ಷಣೆ ನಾಟಕಗಳು ಬೇಕಿಲ್ಲ. ಕೇವಲ ಜನಮರುಳು ಮಾತುಗಳಿಂದ ಜನಸಾಮಾನ್ಯರನ್ನು ಇನ್ನು ವಂಚಿಸಲು ಸಾಧ್ಯವಿಲ್ಲ. 150 ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲು ಅಸಮರ್ಥರಾಗುತ್ತಿರುವ ಬಿಜೆಪಿ ಗೆಲ್ಲುವುದು ಬಿಡಿ ಇಡುಗಂಟು ಪಡಕೊಳ್ಳುವುದನ್ನು ಯೋಚಿಸಲಿ. ಅಂತಹ ಬಿಜೆಪಿಗೆ ಇನ್ನೆಲ್ಲಿಯ 150+ ಸೀಟು ?. 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಣಾಳಿಕೆಯ 165 ಯೋಜನೆಗಳಲ್ಲಿ 160 ಭರವಸೆ ಈಡೇರಿಸಿದ ಕಾಂಗ್ರೇಸ್ ಪರ ನಿಂತ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕಾಪು ವಿದ್ಯಾನಿಕೇತಕ ಶಾಲಾ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಸರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಾದ್ಲಾಜೆ ವಿರುದ್ಧ ಘೋಷಣೆ ಕೂಗಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಯು.ಆರ್.ಸಭಾಪತಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎ.ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್‍ಚಂದ್ರ ಜೆ. ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ, ಅಮೃತ್ ಶೆಣೈ, ಹರೀಶ್ ಕಿಣಿ, ವಿಶ್ವಾಸ್ ಅಮೀನ್, ಅಶೋಕ್ ಕುಮಾರ್ ಕೊಡವೂರು ಮತ್ತಿತರ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

ಸಂಜೆ ಹಿರಿಯಡ್ಕ ಪೇಟೆಯಲ್ಲೂ ಕೇಂದ್ರ ಸರಕಾರದ ವಿರುದ್ದ ಕಾಪು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಮಾಜಿ ಶಾಸಕ ಯು. ಆರ್. ಸಭಾಪತಿ, ಅಮೃತ್ ಶೆಣೈ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು.


Spread the love

Exit mobile version