Home Mangalorean News Kannada News ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಅಸಾಧ್ಯದ ಮಾತು – ಪ್ರಮೋದ್ ಮಧ್ವರಾಜ್

ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಅಸಾಧ್ಯದ ಮಾತು – ಪ್ರಮೋದ್ ಮಧ್ವರಾಜ್

Spread the love

ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಅಸಾಧ್ಯದ ಮಾತು – ಪ್ರಮೋದ್ ಮಧ್ವರಾಜ್

ಉಡುಪಿ; ಕಾಂಗ್ರೆಸ್ ಪಕ್ಷ ಆನೆ ಇದ್ದ ಹಾಗೆ ಎಷ್ಟು ಚಿಕ್ಕ ಚಿತ್ರ ಬರೆದರೂ ಅದು ಆನೆಯೇ ಅದೇ ರೀತಿ ಸೂರ್ಯಚಂದ್ರ ಇರುವ ತನಕ ಕಾಂಗ್ರೆಸ್ ಇರುತ್ತದೆ. ಒಂದು ವೇಳೆ ನಾನೂ ಪಕ್ಷ ಬಿಟ್ಟರೂ ಕೂಡ ಕಾಂಗ್ರೆಸ್ ಪಕ್ಷ ಉಳಿಯುತ್ತೆ ಹಾಗಾಂತ ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್ಬಿನ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಬಹಳ ಪ್ರಾಚೀನವಾದ ಪಕ್ಷವಾಗಿದ್ದು ಅದನ್ನು ಯಾರಿಂದಲೂ ಅಳಿಸಲು ಸಾಧ್ಯವೇ ಇಲ್ಲ. ಯಾರು ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡಲು ಅಸಾಧ್ಯ ಎಂದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಅಗಸ್ಟ್ 31ರಂದು ಚುನಾವಣೆ ನಡೆಯಲ್ಲಿದ್ದು, 5 ವರ್ಷಗಳ ಹಿಂದೆ ಉಡುಪಿ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು, ಭೃಷ್ಟಾಚಾರ ರಹಿತ ಆಡಳಿತವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರ ಮೇಲೆ ಯಾವುದೇ ರೀತಿಯ ಗುರುತರವಾದ ಭೃಷ್ಟಾಚಾರದ ಆರೋಪಗಳು ಬಂದಿಲ್ಲ. 5 ವರ್ಷಗಳ ಹಿಂದೆ ಉಡುಪಿ ನಗರಸಭೇಯಲ್ಲಿ ಬಿಜೆಪಿಯ ಆಡಳಿತದ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ವಿಫಲರಾದಾಗ ನಾನು ನನ್ನ ಸ್ವಂತ ಹಣದಿಂದ ಟ್ಯಾಂಕರ್ ಮೂಲಕ ಜನರಿಗೆ ನೀರನ್ನು ಪೊರೈಸುವ ಕೆಲಸ ಮಾಡಿದ್ದೆ. ಬಳಿಕ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸತತ 5 ವರ್ಷ ಯಾವುದೇ ರೀತಿಯ ನೀರಿನ ಸಮಸ್ಯೆಗೆ ಸಂಬಂಧಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಅಂದು 8500 ಮನೆಗಳೀಗೆ ನೀರಿನ ಕನೆಕ್ಷನ್ ಇದ್ದರೆ ಈಗ ಅದು 15800ಕ್ಕೆ ಏರಿದೆ ಆದರೂ ಕೂಡ ಸಮರ್ಪಕವಾದ ಕುಡಿಯುವ ನೀರನ್ನು ಪೋರೈಸಲಾಗಿದೆ ಎಂದರು.

ಕಳೆದ 5 ವರ್ಷದ ಅವಧಿಯಲ್ಲಿ ಕುಡಿಯುವ ನೀರಿಗಾಗಿ ನಗರಸಭೆಯ ಎದುರು ಯಾವುದೇ ಸಾರ್ವಜನಿಕರೂ ಕೂಡ ಪ್ರತಿಭಟನೆ ಮಾಡುವ ಪರಿಸ್ಥಿತಿ ಉಂಟಾಗಿಲ್ಲ. ಆದರೆ ಬಿಜೆಪಿಯ ಈಗಿನ ಶಾಸಕ ರಘುಪತಿ ಭಟ್ ಅವರ ಹೋಟೆಲಿನ 6 ಮಹಡಿಗೆ ಪರವಾನಿಗೆ ನೀಡಿಲ್ಲ ಎಂದು ರಾಜಕೀಯ ಪ್ರತಿಭಟನೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರತಿಭಟನೆ ನಗರಸಭೆಯ ವಿರುದ್ದ ನಡೆದಿಲ್ಲ ಎಂದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಉಡುಪಿ ನಗರಸಭೆಗೆ 503 ಕೋಟಿ ಅನುದಾನ ನೀಡಿದ್ದು ಅದರಲ್ಲಿ ಈಗಾಗಲೇ 353 ಕೋಟಿ ರೂಗಳ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಎಲ್ಲಾ ಅನುದಾನ ಸಮರ್ಪಕ ಬಳಕೆಯಾಗಬೇಕಾದರೆ ಮತ್ತೊಮ್ಮೆ ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳೀತ ಬರಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಪಪ್ರಚಾರದಿಂದ ಸೋಲಾಗಿದೆ ಆದರೆ ನಗರಸಭಾ ಚುನಾವಣಾ ವಾತಾವರಣ ಕಾಂಗ್ರೆಸ್ ಪರವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಕೇವಲ ಒಮ್ಮೆ ಮಾತ್ರ ಉಡುಪಿಗೆ ಬಂದು ಪ್ರಚಾರದಲ್ಲಿ ಭಾಗವಹಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಒಮ್ಮೆ ಬಂದು ಉಡುಪಿಯಲ್ಲಿ ಹವಾ ಕ್ರಿಯೆಟ್ ಮಾಡಿ ಹೋಗಿದ್ದಾರೆ. ಅವರು ಗ್ಲಾಮರ್ ಇರುವ ಸಚಿವೆ ಆಗಿದ್ದು ಅವರ ಒಂದು ಭೇಟಿ ಕಾಂಗ್ರೆಸ್ ಗೆಲ್ಲಲು ತುಂಬಾ ಸಹಕಾರಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕಾಂಗ್ರೆಸ್ ನಾಯಕರಾದ ಸತೀಶ್ ಅಮೀನ್ ಪಡುಕೆರೆ, ದಿವಾಕರ ಕುಂದರ್, ಹರೀಶ್ ಕಿಣಿ, ದಿನೇಶ್ ಪುತ್ರನ್, ಜನಾರ್ದನ್ ಭಂಡಾರ್ಕರ್, ಕಿಶನ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version