ಕಾಂಗ್ರೆಸ್ ಸಾಧನೆಯನ್ನು ಮತದಾರನಿಗೆ ತಿಳಿಸಿ: ಮೊಯ್ದಿನ್ ಬಾವಾ

Spread the love

ಕಾಂಗ್ರೆಸ್ ಸಾಧನೆಯನ್ನು ಮತದಾರನಿಗೆ ತಿಳಿಸಿ: ಮೊಯ್ದಿನ್ ಬಾವಾ

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಸಕನಾಗಿ ಕಳೆದ ಐದು ವರ್ಷದಲ್ಲಿ ಆರೋಗ್ಯ ನಿಧಿಯಿಂದ ಹಿಡಿದು ರಸ್ತೆಯವರೆಗೆ ಜನ ಸಾಮಾನ್ಯನಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಹೇಳಿದರು.ಕಾಟಿಪಳ್ಳ 3ನೇ ವಾಡ್ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಬಡವರಿಗೆ ಉಚಿತ ಅಕ್ಕಿ ನೀಡಿದರು. ಗ್ಯಾಸ್ ಒದಗಿಸಿದರು. ನೆಮ್ಮದಿಯಿಂದ ಇರಲು ಸೂರು ಒದಗಿಸಿದರು. ಬುದ್ದಿವಂತ ಮತದಾರರು ಕಾಂಗ್ರೆಸ್ ಏನು ಮಾಡಿದೆ, ಬಿಜೆಪಿ ಆಡಳಿತದಲ್ಲಿರುವಾಗ ಏನು ಮಾಡಿದೆ ಎಂಬುದನ್ನು ತಿಳಿದಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಏನು ಮಾಡುತ್ತಿದೆ ಎಂಬುದನ್ನು ಮೊದಲು ಅವರು ಅರಿತುಕೊಳ್ಳಲಿ .ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಟ್ಟ ನಿಲುವು ಪ್ರದರ್ಶಿಸಿ 50 ಸಾ.ರೂ ವರೆಗಿನ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಿಜೆಪಿ ಹೇಳುತ್ತಿದೆ ಕೇಂದ್ರದ ಅನುದಾನದಿಂದ ಕೊಡುತ್ತಿದ್ದಾರೆ .ಕಾಂಗ್ರೆಸ್ಸಿಗರದು ಬಿಟ್ಟಿ ಪ್ರಚಾರ ಎಂಬುದು. ಆದರೆ ಬಿಜೆಪಿ ಆಡಳಿತವಿರುವ ಗುಜರಾತ್, ರಾಜಸ್ಥಾನ ಮತ್ತಿತರೆಡೆ ಇಂತಹ ಯೋಜನೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದರು. ಪ್ರಧಾನಿಮೋದಿ ಅವರು ಅಧಿಕಾರಕ್ಕೆ ಬಂದಾಗ ತಲಾ 15 ಲ.ರೂ ಹಾಕುವುದಾಗಿ ಭರವಸೆ ನೀಡಿದ್ದರೂ ಒಂದೂ ರೂ.ಯಾರ ಖಾತೆಗೂ ಬೀಳಲಿಲ್ಲ.ಮತ್ತೆ ಬ್ಯಾಂಕು ವ್ಯವಹಾರಗಳು ಶ್ರೀಮಂತರ ಪಾಲಾಗುತ್ತಿವೆ ಎಂದು ದೂರಿದರು. ಕಾರ್ಯಕರ್ತರು ಸರಕಾರದ ಹಾಗೂ ಶಾಸಕರ ಜನತೆಗೆ ಮುಟ್ಟಿಸುವ ಕೆಲಸ ಮಾಡಿ ಪ್ರಚಂಡ ಬಹುಮತದಿಂದ ಗೆಲ್ಲಿಸ ಬೇಕಾಗಿದೆ ಎಂದು ಕಾರ್ಪೊರೇಟರ್ ಬಶೀರ್ ಅಹ್ಮದ್ ಹೇಳಿದರು.

ಮುಖಂಡರಾದ ಕೆ.ಸದಾಶಿವ ಶೆಟ್ಟಿ, ಶಶಿಧರ ಹೆಗ್ಡೆ, ದೀಪಕ್ ಪೂಜಾರಿ, ಮುಹಮ್ಮದ್,ನವೀನ್ ಡಿಸೋಜ, ಹುಸೈನ್ ಕಾಟಿಪಳ್ಳ, ಶಕುಂತಳಾ ಕಾಮತ್,ಮಮತಾ ಶೆಟ್ಟಿ, ರೇಶ್ಮಾ ಕಾಟಿಪಳ್ಳ,ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.


Spread the love