ಕಾಂತಾರ ನೃತ್ಯ ಕಲಾವಿದರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ!

Spread the love

ಕಾಂತಾರ ನೃತ್ಯ ಕಲಾವಿದರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ!

ಮೊಬೈಲ್ ಬಳಕೆ ಆರೋಪ. ಚಾಲಕನಿಗೆ ಕಲಾವಿದರಿಂದ ಥಳಿತ. ನೃತ್ಯ ಕಲಾವಿದರ ನಡೆಗೆ ಚಾಲಕರ ಸಂಘ ಆಕ್ರೋಶ

ಕುಂದಾಪುರ: ಕಾಂತಾರ ಸಿನೆಮಾ ಚಿತ್ರೀಕರಣ ಮುಗಿಸಿ ಕೊಲ್ಲೂರು ವಸತಿಗೃಹಕ್ಕೆ ವಾಪಾಸಾಗುತ್ತಿದ್ದ ವೇಳೆ ಬಸ್ ಪಲ್ಟಿಯಾಗಿ ಹಲವು ಕಲಾವಿದರು ಗಾಯಗೊಂಡಿರುವ ಘಟನೆ ಕೊಲ್ಲೂರು ಸಮೀಪದ ಆನೆಜರಿ ಎದುರು ಭಾನುವಾರ ರಾತ್ರಿ ಸಂಭವಿಸಿದೆ.

ಮುದೂರಿನಲ್ಲಿ ಕಾಂತಾರ ಸಿನೆಮಾ ನೃತ್ಯ ಚಿತ್ರೀಕರಣ ಮುಗಿಸಿ ಸುಮಾರು 20ಕ್ಕೂ ಮಿಕ್ಕಿ ಕಿರಿಯ ನೃತ್ಯ ಕಲಾವಿದರು ತಮ್ಮ ವಸತಿಗೃಹಕ್ಕೆ 407 ಬಸ್‌ನಲ್ಲಿ ವಾಪಾಸಾಗಿತ್ತಿದ್ದ ವೇಳೆ ಚಾಲಕ ಎದುರಿಗೆ ಬಂದ ಬೈಕ್ ಅನ್ನು ತಪ್ಪಿಸುವ ಭರದಲ್ಲಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ‌. ಗಾಯಗೊಂಡ ಹಲವು ಕಲಾವಿದರಿಗೆ ಜಡ್ಕಲ್ ಮಹಾಲಕ್ಷ್ಮೀ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನಿಗೆ ಥಳಿತ: ಆಕ್ರೋಶ
ಚಾಲಕ ಮೊಬೈಲ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಬಸ್ ಪಲ್ಟಿಯಾದ ಬಳಿಕ ಉಪ್ಪುಂದ ಮೂಲದ ಟೂರಿಸ್ಟ್ ಬಸ್ ಚಾಲಕನಿಗೆ ಕಲಾವಿದರು ಥಳಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಟೂರಿಸ್ಟ್ ಚಾಲಕ ಸಂಘದ ಸದಸ್ಯರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.


Spread the love