ಕಾಪ್ಪಡಿ ಶಾಲೆ ದುರಸ್ತಿಗೆ ಒತ್ತಾಯಿಸಿ ಕಾರ್ಮಿಕ ವೇದಿಕೆ ಜಿಲ್ಲಾಧಿಕಾರಿಗೆ ಮನವಿ

Spread the love

ಕಾಪ್ಪಡಿ ಶಾಲೆ ದುರಸ್ತಿಗೆ ಒತ್ತಾಯಿಸಿ ಕಾರ್ಮಿಕ ವೇದಿಕೆ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಬೈಂದೂರು ಕ್ಷೇತ್ರದ ಕಾಲ್ತೋಡು ಗ್ರಾಮದ ಮೂರೂರು ಕಾಪ್ಪಡಿ ಸರಕಾರಿ ಶಾಲೆಯು ಏರಡು ಹಳೆಯ ಕಟ್ಟಡವನ್ನು ಹೋಂದಿದ್ದು ಅದು ಸಂಫೂರ್ಣ ದುರ್ಬಲಗೊಂಡಿದ್ದು ಅಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವುದು ಕಷ್ಟಕರವಾಗಿದ್ದು ಶಾಲೆಗೆ ಇನ್ನೆರಡು ಹೊಸ ಕಟ್ಟಡ ಮತ್ತು ಹಳೆಯ ಕಟ್ಟಡದ ದುರಸ್ತೀ ಮಾಡಿಸುವಂತೆ ಕರ್ನಾಟಕ ಕಾರ್ಮಿಕರ ವೇದಿಕೆ ನೇತ್ರತ್ವದಲ್ಲಿ ಸಾರ್ವಜನಿಕರು ಮತ್ತು ಶಿಕ್ಷರಕರನ್ನೊಳಗೊಂಡು ಜಿಲ್ಲಾ ಶಿಕ್ಷಣಾಧಿಕರಿಗಳು ಮತ್ತು ಜಿಲ್ಲಾಧಿಕಾರಿಯವರಿಗೇ ಮನವಿ ನೀಡಲಾಗಿತ್ತು, ಇಲ್ಲಿಯವೆರೆಗೂ ಯಾವುದೇ ಕೆಲಸ ಶುರು ಆಗದ ಕರಣ ಮುಂದಿನ ಸಾಲಿನ ಶಾಲೆ ಪ್ರಾರಂಭಆಗುತ್ತಿದ್ದು ಶಾಲೆ ಕಟ್ಟಡ ದುರಸ್ತಿ ಆಗದೆ ಮಕ್ಕಳನ್ನು ಶಾಲೆಗೆ ಕಳುಹೀಸಲು ಪೋಷಕರು ಹೆದರುತ್ತಿದ್ದು. ಬೇರೆ ಶಾಲೆಯು ಹತ್ತಿರದಲ್ಲಿ ಇಲ್ಲದಿರುವುದು ಮತ್ತಷ್ಟು ಧೃತಿಗೇಡಿಸಿದೆ, ಶಿಕ್ಷಕರು ಸರಿಯದ ನಿರ್ದೇಶನವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದು . ಜಿಲ್ಲಾಡಳಿತ ತಕ್ಷಣ ಸಂಭಂದಪಟ್ಟವರಿಗೇ ಕಟ್ಟಡ ದುರಸ್ತೀಮಾಡಿಸುವಂತೆ ಆದೇಶನೀಡಿ ಎಂದು ಒತ್ತಾಯಿಸಿ ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ಮನವಿ ನೀಡಲಾಯಿತು.

ಈ ಸಂದರ್ಬದಲ್ಲಿ ಜಿಲ್ಲಾಧಿಕಾರಿಯವರೋಂದಿಗೇ ಚರ್ಚಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಪ್ರಸಕ್ತಸಾಲಿನಲ್ಲಿ ಶಾಲೆ ಪ್ರಾರಂಭ ಆಗಲಿದ್ದು ಅಲ್ಲಿಯ ಶಿಕ್ಷಕರು ಕಟ್ಟಡ ಸರಿ ಇಲ್ಲದ ಕಾರಣ ಮಕ್ಕಳನ್ನು ಸೇರಿಸಿಕೊಳ್ಳಬೇಕೇ ಬೇಡವೇ ಏಂಬ ಗೋಂದಲದಲ್ಲಿದ್ದು ಈ ಗೋಂದಲ ನಿವಾರಿಸುವಲ್ಲಿ ಶಾಲೆಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ನಿವೇದಿಸಿಕೊಂಡರು .

ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡಿ ಎರಡು ದಿನಗಳಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲು ತಿಳಿಸಿದರು.

ಶಾಲಾ ಹೊಸ ಕಟ್ಟಡ, ಹಳೆ ಕಟ್ಟಡ ದುರಸ್ತಿ ಆಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವೆಂದು ವೇದಿಕೆಯ ನಿಯೋಗ ಹೇಳಿದ ಮಾತಿಗೆ ಶಾಲಾ ಕಟ್ಟಡ ದುರಸ್ತಿಗೆ ತಕ್ಷಣ ಕ್ರಮ ಕೈಗೋಳ್ಳುತೇವೆ ಅಗತ್ಯ ಬಿದ್ದರೆ ಪರಿಶೀಲನೆಗೆ ಸ್ವತ ತಾವೇ ಬರುವುದಾಗಿ ಜಿಲ್ಲಾಧಿಕಾರಿಗಳು ಭರವಾಸೆ ನೀಡಿದರು ಈ ಸಂದರ್ಬದಲ್ಲಿ ಕಾರ್ಯದರ್ಶಿ ಸಂದೀಪ್ ಕೋಡಂಕೂರು, ಬೈಂದೂರು ವಲಯ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ, ರಾಜೇಶ್ ಕಿಣಿ ಮಂಜುನಾಥ ವಡ್ಡರ್ಸೆ. ಜಿಯಾ. ಮತ್ತಿತರರೂ ಉಪಸ್ತಿತರಿದ್ದರು


Spread the love