Home Mangalorean News Kannada News ಕಾರ್ಕಳದಲ್ಲಿ ಅಕ್ರಮ ಸ್ಪೋಟಕ ವಸ್ತುಗಳ ಸಾಗಾಟ – ಇಬ್ಬರ ಬಂಧನ

ಕಾರ್ಕಳದಲ್ಲಿ ಅಕ್ರಮ ಸ್ಪೋಟಕ ವಸ್ತುಗಳ ಸಾಗಾಟ – ಇಬ್ಬರ ಬಂಧನ

Spread the love

ಕಾರ್ಕಳದಲ್ಲಿ ಅಕ್ರಮ ಸ್ಪೋಟಕ ವಸ್ತುಗಳ ಸಾಗಾಟ – ಇಬ್ಬರ ಬಂಧನ

ಕಾರ್ಕಳ: ಕಾರೊಂದರಲ್ಲಿ ಪರವಾನಿಗೆ ಹೊಂದದೆ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ನಗರ ಪೋಲಿಸರು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ಕಡಿಗನಹಳ್ಳಿ ಉತ್ತರ ತಾಲೂಕು, ಜಾಲಹೋಬ್ಲಿ ಬೆತ್ತಹಲಸೂರು ನಿವಾಸಿ ಗೋಪಿ. ಬಿ (48), ಕಾರ್ಕಳ ತಾಲೂಕು ಕರಿಯಕಲ್ಲು ನಿವಾಸಿ ತ್ರಿಮೂರ್ತಿ (48) ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ಆರೋಪಿಗಳು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಎಂಬಲ್ಲಿ ಕಾರೊಂದರಲ್ಲಿ ಪರವಾನಿಗೆ ಹೊಂದದೆ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸಂಜೀವ ಎಮ್ ಪಾಟೀಲ್ ಐಪಿಎಸ್ ಇವರ ಮಾರ್ಗದರ್ಶನದಂತೆ ಕಾರ್ಕಳ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರು   ರಿಷೀಕೇಶ್ ಸೋನವಾನೆ ಐಪಿಎಸ್ ಇವರ ನಿರ್ದೇಶನದಂತೆ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ   ಜಾಯ್ ಅಂತೋನಿ.ಎ ಇವರ ನೇತೃತ್ವದಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿಯವರು ಬಂಧಿಸಿದ್ದಾರೆ. ಬಂಧಿತರಿಂದ 25,000 ರೂಪಾಯಿ ಮೌಲ್ಯದ ಸ್ಪೋಟಕ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

 ಕಾರ್ಯಾಚರಣೆಯಲ್ಲಿ ಕಾರ್ಕಳ ನಗರ ಠಾಣಾ ಪಿ.ಎಸ್.ಐ ಸಂಕಪ್ಪಯ್ಯ.ಎ.ಕೆ, ಎ.ಎಸ್.ಐ ದಿನಕರ್, ಅಪರಾಧ ಪತ್ತೆ ಸಿಬ್ಬಂದಿ ರಾಜೇಶ್ ಕುಂಪಲ, ಪ್ರಶಾಂತ್ ಮಣಿಯಾಣಿ, ಪ್ರಶಾಂತ್ ಮಿಯಾರು, ಗಿರೀಶ್ ಉಳಿಯ ಇವರು ಭಾಗವಹಿಸಿರುತ್ತಾರೆ.


Spread the love

Exit mobile version