ಕಾರ್ಕಳ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಐದನೇ ಧರ್ಮಗುರುವಾಗಿ ವಿಜಯ್ ಜೋಯ್ಸ್ನ್ ಡಿ’ಸೋಜಾ ಅವರು ಕಾರ್ಕಳ ತಾಲೂಕಿನ ಬೊಳ ಕೆಲ್ಬೆಂಟ್ ಸಂತ ಜೋನ್ ಬೋಸ್ಕೊ ಚರ್ಚಿನಲ್ಲಿ ಮಂಗಳವಾರ ಗುರುದೀಕ್ಷೆಯನ್ನು ಪಡೆದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಸಂಭ್ರಮದ ಬಲಿಪೂಜೆ ನೆರವೇರಿಸಿ ಧರ್ಮಪ್ರಾಂತ್ಯದ ಧರ್ಮಗುರು ಅಭ್ಯರ್ಥಿ ಬೊಳದ ಜೋಸೆಫ್ ಮತ್ತು ನತಾಲಿಯ ದಂಪತಿಗಳ ಪುತ್ರ ವಿಜಯ್ ಜೋಯ್ಸ್ನ್ ಡಿ’ಸೋಜಾರಿಗೆ ಗುರುದೀಕ್ಷೆಯನ್ನು ನೀಡಿದರು.
ಗುರುದೀಕ್ಷೆಯನ್ನು ನೀಡಿ ಆಶೀರ್ವಚನ ನೀಡಿದ ಧರ್ಮಾಧ್ಯಕ್ಷರು ಕ್ರೈಸ್ತ ಧರ್ಮಗುರು ಸದಾ ತನ್ನ ಜೀವನವನ್ನು ಪ್ರಾರ್ಥನೆ ಹಾಗೂ ಸೇವೆಯ ಜೀವನದೊಂದಿಗೆ ಇತರರಿಗೆ ಮಾರ್ಗದರ್ಶಕರಾಗಿರಬೇಕು ಅಲ್ಲದೆ ನವ ಸಮಾಜದ ಉನ್ನತಿಗೆ ಪಣತೊಡಬೇಕು ಎಂದರು. ಉಡುಪಿ ಧರ್ಮಪ್ರಾಂತ್ಯಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿ ಧರ್ಮಪ್ರಾಂತ್ಯದ ವತಿಯಿಂದ ಸನ್ಮಾನಿಸಿದರು.
ಗುರುದೀಕ್ಷೆಯ ಪ್ರಮುಖ ವಿಧಿಗಳಾದ ನವ ಧರ್ಮಗುರುವಿನ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸುವುದರೊಂದಿಗೆ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜತೆ ನೆರೆದ ಎಲ್ಲಾ ಧರ್ಮಗುರುಗಳೂ ತಮ್ಮ ಕರಗಳನ್ನು ಹೊಸ ಧರ್ಮಗುರು ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ಬಳಿಕ ಹೊಸ ಧರ್ಮಗುರುಗಳು ಧರ್ಮಾಧ್ಯಕ್ಷರೊಡಗೂಡಿ ಪ್ರಥಮ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಬ್ಯಾಪ್ಟಿಸ್ಟ್ ಮಿನೇಜಸ್, ಲಕ್ನೋ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ರೋನಾಲ್ಡ್ ಡಿ’ಸೋಜಾ, ವಂ ಪಾವ್ಲ್ ಡಿ’ಸೋಜಾ, ಬೊಳ ಕೆಲ್ಬೆಂಟ್ ಸಂತ ಜೋನ್ ಬೋಸ್ಕೊ ಚಚರ್ಿನ ಧರ್ಮಗುರು ವಂ ರೇಮಂಡ್ ಲೋಪಿಸ್, ಜೆಪ್ಪು ಸಂತ ಜೋಸೇಫರ ಗುರುಮಠದ ಪ್ರಾಧ್ಯಾಪಕ ವಂ ಬ್ಯಾಪ್ಟಿಸ್ಟ್ ಮಿನೇಜಸ್, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಧರ್ಮಗುರು ವಂ ಆಲ್ಬನ್ ಡಿ’ಸೋಜಾ, ವಂ ರೆಜಿನಾಲ್ಡ್ ಪಿಂಟೊ ಸೇರಿದಂತೆ ಸೇರಿದಂತೆ 40 ಕ್ಕೂ ಅಧಿಕ ಧರ್ಮಗುರುಗಳು ಬಲಿಪೂಜೆಗೆ ಸಾಕ್ಷಿಯಾದರು. ಈ ವೇಳೆ ಧರ್ಮಗುರುವಿನ ತಂದೆ ತಾಯಿ ಹಾಗೂ ಸಹೋದರ, ಸಹೋದರಿಯರು, ಅಪಾರ ಬಂಧು ಮಿತ್ರರು ಕೂಡ ಉಪಸ್ಥಿತರಿದ್ದರು
ಬಲಿಪೂಜೆಯ ನಂತರ ನೂತನ ಧರ್ಮಗುರುವಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು. ನೂತನ ಧರ್ಮಗುರುಗಳು ಧಾಮರ್ಿಕ ತರಬೇತಿಯನ್ನು ಮಂಗಳೂರಿನ ಸಂತ ಜೋಸೇಫರ ಗುರು ಮಠದಲ್ಲಿ ಪಡೆದಿದ್ದು ಶಿರ್ವ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದು, ಧಾರ್ಮಿಕ ಜೀವನದ ತರಬೇತಿಯ ಅವಧಿಯಲ್ಲಿ ಇವರು ಉಜಿರೆ ಹಾಗೂ ಕಲ್ಮಾಡಿ ಚರ್ಚಿನಲ್ಲಿ ತಮ್ಮ ಸೇವೆಯನ್ನು ನೀಡಿದ್ದಾರೆ, ನಾನಾ ಕೌಶಲ್ಯಗಳನ್ನು ಹೊಂದಿರುವ ನೂತನ ಧರ್ಮಗುರು ವಂ ರೋಯ್ಸನ್ ಮುಂದಿನ ದಿನಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ ಏಳಿಗೆಗೆ ತಮ್ಮನ್ನು ಅರ್ಪಿಸಿಕೊಳ್ಳಲಿದ್ದಾರೆ.
ನೂತನ ಉಡುಪಿ ಧರ್ಮಪ್ರಾಂತ್ಯವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಥಮ ಧರ್ಮಗುರುವಾಗಿ ವಂ ಮಹೇಶ್ ಡಿ’ಸೋಜಾ ಮೂಡುಬೆಳ್ಳೆಯಲ್ಲಿ 2013 ರಲ್ಲಿ ಗುರುದೀಕ್ಷೆಯನ್ನು ಪಡೆದಿದ್ದು, ಎರಡನೇ ವರ್ಶ ವಂ ರೊಲ್ವಿನ್ ಆರಾನ್ಹಾ ಮತ್ತು ಜೆರಾಲ್ಡ್ ಡಿಮೆಲ್ಲೊ ಇವರುಗಳಿಗೆ 2014 ರಲ್ಲಿ ಶಿರ್ವದಲ್ಲಿ ಗುರುದೀಕ್ಷೆಯನ್ನು ಪಡೆದಿದ್ದರು. ಮೂರನೇ ವರ್ಶದ ಗುರುದೀಕ್ಷೆ ಹಿರ್ಗಾನದಲ್ಲಿ ಎಪ್ರಿಲ್ 27 ರಂದು ವಂ ರೋಯ್ಸ್ನ ಫೆನರ್ಾಂಡಿಸ್ಗೆ ನೀಡಿದರೆ, ವಿಜಯ್ ಜೋಯ್ಸನ್ ಧರ್ಮಪ್ರಾಂತ್ಯದ ಐದನೇ ಧರ್ಮಗುರುವಾಗಿ ದೀಕ್ಷೆಯನ್ನು ಪಡೆದಿದ್ದಾರೆ. ಧರ್ಮಪ್ರಾಂತ್ಯದ ಪ್ರಸ್ತುತ ವರುಷದ ಕೊನೆಯ ಗುರುದೀಕ್ಷೆ ಇದಾಗಿದೆ.