ಕಾರ್ಮಿಕರನ್ನು ತಮ್ಮ ಜಿಲ್ಲೆಗೆ ಕಳುಹಿಸಿಕೊಡುವ ವ್ಯವಸ್ಥೆ ಅವ್ಯಸ್ಥೆಯಿಂದ ಕೂಡಿದೆ – ಐವನ್ ಡಿ’ಸೋಜಾ
ಮಂಗಳೂರು: ಅಂತರ ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರನ್ನು ತಮ್ಮ ತವರು ಜಿಲ್ಲೆಗಳಿಗೆ ಕಳುಹಿಸಿಕೊಡಲು ಮಾಡಿದ ವ್ಯವಸ್ಥೆ ತೀರಾ ಅವ್ಯವಸ್ಥೆಯಿಂದ ಕೂಡಿದ್ದು, ಇದರಿಂದ ಕೂಲಿ ಕಾರ್ಮಿಕರನ್ನು ನಡು ರಸ್ತೆಯಲ್ಲಿ ಬಿಟ್ಟಂತಾಗಿದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ಟೀಕಿಸಿದ್ದಾರೆ.
ವ್ಯವಸ್ಥೆಗಳನ್ನು ಮಾಡದೇ ಕೂಲಿ ಕಾರ್ಮಿಕರಿಗೆ ನೀರು, ಊಟ ನೀಡದೇ ಗಂಟೆಗಟ್ಟಲೆ ದೂಳಿನಲ್ಲಿ ಬಿಡಲಾಗಿದೆ. ಮಾಸ್ಕ್ ಒದಗಿಸಿಲ್ಲ. ಊಟದ ಕಿಟ್ ನ್ನು ನೀಡಿಲ್ಲ , ಸಾರಿಗೆ ವ್ಯವಸ್ಥೆಗಾಗಿ ಅಲೆದಾಡುವ ಪರಿಸ್ಥಿತಿಗಳಿದೆ. ಸರ್ಕಾರ ತಮ್ಮ ಖಚಿ೯ನಿಂದ ಕಳುಹಿಸಲು ವ್ಯವಸ್ಥೆ ಮಾಡುದಾಗಿ ಹೇಳಿದ ಮೇಲೆ ಅದರಲ್ಲಿ ಅಂಜಿಕೆ ಯಾಕೆ? ಎಲ್ಲರನ್ನು ಸಮಾನವಾಗಿ ಕಾಣಲು ಯಾಕೆಸಾಧ್ಯವಾಗುತ್ತಿಲ್ಲ. ಅಮೇರಿಕ, ಇಂಗ್ಲೆಂಡ್ ನಿಂದ ತರುವ ಒಳ್ಳೆಯ ವ್ಯವಸ್ಥೆ ಮಾಡಲು ಆಗುತ್ತದೆ. ಅಂತರ್ ರಾಜ್ಯದ ಪ್ರಯಾಣಿಕರಿಗೆ ಯಾಕೆ ಸಾಧ್ಯವಾಗುವುದಿಲ್ಲ. ರೇಶನ್ ಕಾಡ್೯ ಇದ್ದವರಿಗೆ ಇಲ್ಲದವರಿಗೆ ಇಲ್ಲ, ಪಾಸ್ ಪೋರ್ಟ್ ಇದ್ದವರಿಗೆ ಇದೇ? ಇದೇನಾ ಬಿಜೆಪಿ ನೀತಿ ಎಂದು ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರು ಟೀಕಿಸಿದ್ದಾರೆ.
ಇಂದು ಜೊಕಟ್ಟೆಯಲ್ಲಿ ಅಂತರ್ ರಾಜ್ಯ ತೆರಳುವ ಕಾಮಿ೯ಕರೊಂದಿಗೆ ಮಾತನಾಡಿದರು, ಅಲ್ಲದೇ ಅಂತರ್ ಜಿಲ್ಲೆಯ ಕಾಮಿ೯ಕರೊಂದಿಗೆ ಗೋಲ್ಡ್ ಪಿಂಚ್ ಸಿಟಿಯಲ್ಲಿ ಅವರ ಜೊತೆ ಸಮಾಲೋಚನೆ ನಡೆಸಿದರು. ಸರ್ಕಾರ ಕೂಡಲೇ ಅಂತರ್ ರಾಜ್ಯಕ್ಕೆ ತೆರಳಲು ರೈಲು ವ್ಯವಸ್ಥೆ ಮಾಡಬೇಕು ಸುಮಾರು 4000ಕ್ಕೂ ಅಧಿಕ ಮಂದಿ ನೋಂದಾಯಿಸಲು ಮುಂದೆ ಬಂದಿದ್ದು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಮುಖ್ಯಕಾಯ೯ದಶಿ೯ ವಿಜಯ ಭಾಸ್ಕರ್ ರವರಿಗೆ ವಿನಂತಿಸಿದ್ದಾರೆ. ಇಲ್ಲದೇ ಇದ್ದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ರವರು ಎಚ್ಚರಿಕೆ ನೀಡಿದ್ದಾರೆ.