Home Mangalorean News Kannada News ಕಾರ್ಮಿಕ ವರ್ಗದ ಬದುಕನ್ನು ನಾಶಗೈದ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಕಾರ್ಮಿಕ ವರ್ಗ...

ಕಾರ್ಮಿಕ ವರ್ಗದ ಬದುಕನ್ನು ನಾಶಗೈದ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಕಾರ್ಮಿಕ ವರ್ಗ ಪಣ

Spread the love

ಕಾರ್ಮಿಕ ವರ್ಗದ ಬದುಕನ್ನು ನಾಶಗೈದ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಕಾರ್ಮಿಕ ವರ್ಗ ಪಣ

ಕಳೆದ 5 ವರ್ಷಗಳ ಹಿಂದೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಜನತೆಗೆ ನೀಡಿದಂತಹ ಘೋಷಣೆಗಳಾದ ಅಚ್ಚೇ ದಿನ್,ಸಬ್ಕಾ ಸಾಥ್ ಸಬ್ಕಾ ವಿಕಾಸ್,ಕಪ್ಪು ಹಣ,ಪ್ರತಿಯೊಬ್ಬರ ಖಾತೆಗೆ 15ಲಕ್ಷ ಹಣ,ಬೆಲೆಯೇರಿಕೆ ನಿಯಂತ್ರಣ ಮುಂತಾದ ಬಣ್ಣ ಬಣ್ಣದ ಘೋಷಣೆಗಳೆಲ್ಲಾ ಇಂದು ಹಸಿ ಹಸಿ ಸುಳ್ಳುಗಳೆಂದು ಸಾಬೀತಾಗಿದೆ.ಒಳ್ಳೆಯ ದಿನಗಳು ಬಂದಿರುವುದು ಟಾಟಾ,ಬಿರ್ಲಾ,ಅಂಬಾನಿ, ಅಧಾನಿಗಳಿಗೆ ಹೊರತು ಈ ದೇಶದ ಜನಸಾಮಾನ್ಯರಿಗಲ್ಲ. ಜೀವನಾವಶ್ಯಕ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದೆ.ಕಾರ್ಮಿಕರ ಪರವಾದ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡುವ ಮೂಲಕ ಕನಿಷ್ಠ ಕೂಲಿ,ಸಾಮಾಜಿಕ ಭದ್ರತೆ,ಪಿಂಚಣಿ ಮುಂತಾದ ಸವಲತ್ತುಗಳನ್ನು ಇನ್ನಿಲ್ಲವಾಗಿಸಲು ಪ್ರಯತ್ನಿಸುತ್ತಿದೆ.ಇಂತಹ ಕಾರ್ಮಿಕ ವಿರೋಧಿ ಸರಕಾರವನ್ನು ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಇಡೀ ದೇಶದ ಕಾರ್ಮಿಕ ವರ್ಗ ಒಂದಾಗಬೇಕೆಂದು* ಅIಖಿU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಕಾರ್ಮಿಕರಿಗೆ ಕರೆ ನೀಡಿದರು.

ಅವರು ಬಂದರು ಪ್ರದೇಶದ ಮಹಿಳಾ ಹಮಾಲಿ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅIಖಿU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, *ಕಳೆದ 25 ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಗೆದ್ದು ಬಂದಂತಹ ಃಎP ಸಂಸದರು,ಅದರಲ್ಲೂ ಕಳೆದ 10 ವರ್ಷಗಳಿಂದ ಇರುವ ನಳೀನ್ ಕುಮಾರ್ ಕಟೀಲ್ ರವರು ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಗಮನ ನೀಡಲಿಲ್ಲ,ಬದಲಾಗಿ ಜಿಲ್ಲೆಯ ಶಾಂತಿ ನೆಮ್ಮದಿಗೆ ಭಂಗ ಮಾಡುತ್ತಾ ಜಿಲ್ಲೆಗೆ ಬೆಂಕಿ ಕೊಡುವುದಾಗಿ ಬಹಿರಂಗ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ‌. ಯಾವುದೇ ಒಂದು ಗಮನ ಸೆಳೆಯುವಂತಹ,ಜಿಲ್ಲೆಯ ಯುವಜನರಿಗೆ ಉದ್ಯೋಗ ಸ್ರಷ್ಠಿಸುವಂತಹ ಒಂದೇ ಒಂದು ಯೋಜನೆಯನ್ನು ತರಲು ಅಸಾಧ್ಯವಾದ ನಾಲಾಯಕ್ಕು ಸಂಸದರನ್ನು ಈ ಬಾರಿ ಮನೆಗೆ ಕಳುಹಿಸಲು ಕಾರ್ಮಿಕ ವರ್ಗ ಚಿಂತಿಸಬೇಕಾಗಿದೆ.ಹಾಗೂ ಜಾತ್ಯಾತೀತ ಶಕ್ತಿಗಳ ಗೆಲುವಿಗೆ ಶ್ರಮಿಸಬೇಕಾಗಿದೆ* ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಬಂದರು ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಅಹಮ್ಮದ್ ಭಾವರವರು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಮುಖಂಡರಾದ ಸುಲೋಚನಾ,ಕುಶಾಲಾಕ್ಷಿ, ಮುಕ್ತಾ,ಸುಶೀಲಾ,ಗಿರಿಜಾ ಮುಂತಾದವರು ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Karthik
5 years ago

we laborers are voting for MODI only.

wpDiscuz
Exit mobile version