Home Mangalorean News Kannada News ಕಾರ್ಮಿಕ ವರ್ಗ ಸಮಾಜದ ಮುಖ್ಯವಾಹಿನಿ ಬರಬೇಕಿದೆ. : ಯೋಗೀಶ್ ಶೆಟ್ಟಿ ಜೆಪ್ಪು

ಕಾರ್ಮಿಕ ವರ್ಗ ಸಮಾಜದ ಮುಖ್ಯವಾಹಿನಿ ಬರಬೇಕಿದೆ. : ಯೋಗೀಶ್ ಶೆಟ್ಟಿ ಜೆಪ್ಪು

Spread the love

ಕಾರ್ಮಿಕ ವರ್ಗ ಸಮಾಜದ ಮುಖ್ಯವಾಹಿನಿ ಬರಬೇಕಿದೆ. : ಯೋಗೀಶ್ ಶೆಟ್ಟಿ ಜೆಪ್ಪು

ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು, ಹಾಗೂ ಉತ್ತಮ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು “ ತುರವೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಕೆಲಸ ಮಾಡುತ್ತಿದೆ, ದೇಶದ ಅಭಿವೃದ್ದಿಗೆ ಕಾರ್ಮಿಕರ ಪಾತ್ರ ಅಪಾರ, ಇವತ್ತು ಹಲವಾರು ದೇಶಗಳು ತಮ್ಮ ಬಹುಮಹಡಿ ಕಟ್ಟಡಗಳ ಮೂಲಕ, ಖಾದ್ಯ ತಿನಿಸುಗಳ ಮೂಲಕ, ನೈರ್ಮಲ್ಯದ ಮೂಲಕ ವಿಶ್ವವನ್ನು ತನ್ನತ್ತ ಸೆಳೆದು ಅವರ ದೇಶಕ್ಕೆ ಆದಾಯವನ್ನು ತಂದುಕೊಡುತ್ತಿದ್ದಾರೆ ಆದರೆ ಇದರ ಮೂಲ ಕಾರ್ಮಿಕರೇ ಆಗಿರುತ್ತಾರೆ, ಭಾರತ ದೇಶದಲ್ಲಿ ಕಾರ್ಮಿಕ ಸೇವೆ ಅಗ್ರಘಣ್ಯ ಸರಕಾರ ಅವರನ್ನು ಗುರುತಿಸದೇ ಇರುವಂಥಹದ್ದು ಅಕ್ಷಮ್ಯ, ಇಂದು ಶಿಕ್ಷಕರ ದಿಣಾಚರಣೆ, ಮಕ್ಕಳ ದಿನಾಚರನೆ ಹಾಗೂ ಇನ್ನಿತರ ದಿನಾಚರಣೆಗಳಲ್ಲಿ ಆಯಾಯ ಕ್ಷೆತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸರಕಾರವೇ ಗೌರವಿಸುತ್ತಿದೆ ಇದು ಸ್ವಾಗತಾರ್ಹ ಆದರೆ ಸರಕಾರ ಶ್ರಮಿಕ ವರ್ಗವನ್ನು ಯಾಕೆ ಕೈಬಿಟ್ಟಿದೆ ಎಂದು ತಿಳಿಯುತ್ತಿಲ್ಲ, ಹಾಗಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬಂದು ಸಮಾಜ ಅವರನ್ನು ಗುರುತಿಸಬೇಕು, ಇಂದು ಹಲವಾರು ಕಾಮಿಕರಿಗೆ ಕೆಲಸ ಮಾಡಿಸುವ ಗುತ್ತಿಗೆದಾರರು, ಉದ್ಯಮಿಗಳು ಹಾಗೂ ಮಾಲಕರು ಸರಿಯಾಗಿ ವೇತನವನ್ನು ಕೊಡದೇ ಸತಾಯಿಸುತ್ತಿರುವುದು ತುರವೇ ಗಮನಕ್ಕೆ ಬಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರ್ಮಿಕರು ಕೆಲಸ ಮಾಡುವ ಸ್ಥಲದಲ್ಲಿ ಮರಣ ಹೊಂದಿದ್ದು ಹಾಗೂ ಅಸ್ವಸ್ಥಗೊಂಡಿರುವ ಪ್ರಕರಣಗಳು ನಡೆದಿದ್ದು, ಅಂಥಹ ಕಾರ್ಮಿಕರಿಗೆ ಸಂಭಂದಪ್ಪಟ್ಟ ಮಾಲಿಕರು / ಗುತ್ತಿಗೆದಾರರು ಅವರಿಗೆ ನ್ಯಾಯಯುತವಾದ ಪರಿಹಾರವನ್ನು ಕೊಡದಿರುವುದು ನಮ್ಮ ಗಮನಕ್ಕೆ ಬಂದಿದೆ, ಕೆಲವು ಕಡೆಗಳಲ್ಲಿ ಪಿ.ಎಫ್ ಹಾಗೂ ಇ.ಎಸ್.ಐ, ಕನಿಷ್ಟ ವೇತನ ಜಾರಿಮಾಡದಿರುವುದು ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಅವರಿಗೆ ಕೊಡಿಸದೇ ಸರಕಾರಕ್ಕೆ ಮೋಸ ಮಾಡುವುದರೊಂದಿಗೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ, ಹಾಗಾಗಿ ಅಂಥಹ ವ್ಯಕ್ತಿಗಳ ವಿರುಧ್ಧವಾಗಿ ಮುಂದಿನ ದಿನಗಳಲ್ಲಿ ತುರವೇ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು,

ಕಾರ್ಯಕ್ರಮದಲ್ಲಿ ತುರವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಟ್ ಕಡಬ , ತುರವೇ ಕೇಂದ್ರೀಯ ಮಂಡಳಿ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಕೇಂದ್ರೀಯ ಮಂಡಳಿ ಉಪಾಧ್ಯಕ್ಷರಾದ ಜೆ. ಇಬ್ರಾಹಿಂ ಜೆಪ್ಪು, ತುರವೇ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್, ಉಡುಪಿ ಜಿಲ್ಲಾದ್ಯಕ್ಷರಾದ ರಮೇಶ್ ಪೂಜಾರಿ ಶೀರೂರು, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಧ ಹರೀಶ್ ಶೆಟ್ಟಿ ಶಕ್ತಿನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕೆ ಬಂಗೇರ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಧ ಎಂ. ಸಿರಾಜ್ ಅಡ್ಕರೆ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುತ್ತಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಪಾದ್ಯಕ್ಯಕ್ಷರಾದ ರಹೀಂ ಕುತ್ತಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾದ ಅರುಣ್ ಡಿಸೋಜ ಅಸೈಗೋಳಿ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷರಾದ ವಿಧ್ಯಾ ಯು . ಜೋಗಿ, ಗಂಗಾದರ್ ಅತ್ತಾವರ್, ನೇಮು ಕೊಟ್ಟಾರಿ, ಉಮೇಶ್ ಮುಂತಾದ ತುರವೇ ಮುಖಂಡರು ಉಪಸ್ಥಿತರಿದ್ದರು. ಸಿರಾಜ್ ಅಡ್ಕರೆ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version