ಮಲ್ಪೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಉಚಿತ ಆರೋಗ್ಯ ಶಿಬಿರ
ಉಡುಪಿ: ಬಿಡುವಿಲ್ಲದ ಈ ಒತ್ತಡದ ಜೀವನದಲ್ಲಿ ಆರೋಗ್ಯ ಕಪಾಡಿಕೊಳ್ಳುವುದು ಕಷ್ಟದ ಕೆಲಸ, ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಅನಾರೋಗ್ಯವನ್ನು ದೂರ ಇಡಬಹುದು ಎಂದು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಅಭಿಪ್ರಾಯ ಪಟ್ಟರು.
ಬಾನುವಾರ ಮಲ್ಪೆ ಬೀಚ್ ನಲ್ಲಿ ನಡೆದ ಕರ್ನಾಟಕ ಕಾರ್ಮಿಕ ವೇದಿಕೆ ಆದರ್ಶ ಆಸ್ಪತ್ರೆ ಸಹಕಾರದೊಂದಿಗೆ ಬೃಹತ್ ಆರೋಗ್ಯ ಶಿಬಿರ ಮತ್ತು ಉಚಿತ ಔಷಧಿ, ಕಾರ್ಮಿಕರ ವಿಮಾ ಕಾರ್ಡ್ ವಿತರಣೆ, ಮಲ್ಪೆ ಬೀಚ್ ಘಟಕ ಉದ್ಘಾಟನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ದೂರದ ಊರಿಂದ ಬಂದಂತಹ ವಲಸೆ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದೂ ಹವಮಾನ, ಅಹಾರ ವ್ಯತ್ಯಾಸಗಳಿಂದಾಗಿ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಇಂತಹ ಶಿಬಿರಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಗುಣಮಟ್ಟದಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವೇದಿಕೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಆರೋಗ್ಯ ವಿಮೇ ಅಗತ್ಯ: ಮನುಷ್ಯನಿಗೆ ಆರೋಗ್ಯದಲ್ಲಿ ಯವಾಗ ಯಾವ ರೀತಿಯ ಸಮಸ್ಯೆಯಾದರು ಬರಬಹುದು, ಉತ್ತಮ ಆರೋಗ್ಯ ಸೇವೆ ಪಡೆಯಲು ಹಣಕಾಸು ಸಮಸ್ಯೆ ಎದುರಾಗಬಹದು. ಆಗಾಗಿ ಪ್ರತಿಯೊಬ್ಬರು ಆರೋಗ್ಯ ವಿಮೇ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರóï ಹೇಳಿದರು. ಆರೋಗ್ಯ ವಿಮೇ ಒದಗಿಸುವಲ್ಲಿ ಸಮುದಾಯ ಸಂಘ ಸಂಸ್ಥೆಗಳು, ಕಾರ್ಮಿಕ ವೇದಿಕೆಯಂತಹ ಸಂಘಟನೆಗಳು ಸಹಕಾರ ಒದಗಿಸುತ್ತಿದ್ದೂ, ಇದರಿಂದ ಆರ್ಥಿಕವಾಗಿ ಹಿಂದುಳಿದವರು ವೈದ್ಯಕೀಯ ಸೇವೆಯನ್ನು ಯಾವುದೆ ಸಮಸ್ಯೆ ಇಲ್ಲದೇ ಪಡೆದುಕೊಳ್ಳಬಹುದು ಎಂದು ಹೇಳಿದರು.
ಹಿರಿಯ ವಕೀಲ ಆನಂದ್ ರಾವ್, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಮಿಕ ವೇದಿಕೆ ರಾಜ್ಯಧ್ಯಕ್ಷ ಎಚ್.ಬಿ ನಾಗೇಶ್, ಮೀನುಗಾರಿಕ ಫೆಡರೇಶನ್ ನಿಗಮದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಲ್ಪೆ, ಕೊಡವೂರು ರೋಟರಿ ಅಧ್ಯಕ್ಷ ಪ್ರಭಾತ್ ಕೊಟ್ಯಾನ್, ಉದ್ಯಮಿಗಳಾದ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ, ಶೇಖರರ್ಜಿ ಅಮೀನ್ ಮಲ್ಪೆ ಮತ್ತು ಕಾರ್ಮಿಕ ವೇದಿಕೆ ಉಪಾಧ್ಯಕ್ಷ ಸುರೇಶ್ ಶೇರಿಗಾರ್, ಕಾರ್ಯದರ್ಶಿ ರವಿಶಾಸ್ತ್ರಿ, ಮಹಿಳಾಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಉಪಸ್ಥಿತರಿದ್ದರು.