ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ –  ಕೊಂಕೋಡಿ

Spread the love

ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ –  ಕೊಂಕೋಡಿ

ಕಾಳು ಮೆಣಸಿನ ಆಮದು ಮೇಲೆ ಕೆಜಿ. ಒಂದರ ರೂ.500 ಕನಿಷ್ಟ ಆಮದು ಬೆಲೆ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳದಾರಿಯನ್ನು ಕಂಡು ಹಿಡಿದುವಿಯೆಟ್ನಾಂದೇಶದಕಳಪೆ ಕಾಳು ಮೆಣಸನ್ನುಕೆಜಿ.ಗೆ ರೂ.130/- ರ ಆಸುಪಾಸಿನಲ್ಲಿ ಖರೀದಿಸಿ ಶ್ರೀಲಂಕಾಕ್ಕೆ ತಂದುಅಲ್ಲಿಂದ ಭಾರತಕ್ಕೆಆಮದು ಮಾಡಿ ಸರಕಾರಕ್ಕೆಕೋಟ್ಯಾಂತರ ರೂಪಾಯಿಗಳತೆರಿಗೆ ವಂಚನೆ ಮಾಡುತ್ತಾಕಡಿಮೆದರದಲ್ಲಿಮಾರುಕಟೆಗೆ ಬಿಡುತ್ತಿರುವುದುಭಾರತದಲ್ಲಿದರ ಕುಸಿತಕ್ಕೆ ಕಾರಣವಾಗಿದೆಎಂದು ಶ್ರೀ ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.

ಈ ಬಗ್ಗೆ ಮತ್ತೆ ದೆಹಲಿಯಲ್ಲಿಕೇಂದ್ರ ವಾಣಿಜ್ಯ ಸಚಿವ  ಸುರೇಶ್ ಪ್ರಭುರವರನ್ನು ಕಾಳು ಮೆಣಸು ಬೆಳೆಗಾರ ಸಮನ್ವಯ ಸಮಿತಿ ಭೇಟಿ ಮಾಡಿದೆ.

ಈ ನಿಯೋಗದಲ್ಲಿ  ಕೊಂಕೋಡಿ ಪದ್ಮನಾಭ, ಮಂಜುನಾಥ,  ಪ್ರದೀಪ್ ಪೂವಯ್ಯ, ಜಯರಾಂ, ಎಡಗೆರೆ ಸುಬ್ರಹ್ಮಣ್ಯ, ದಯಾನಂದ ಹೆಗ್ಡೆ, ಪ್ರಮೋದ, ಶ್ರೀ.ಜಿ.ಎಂ.ಹೆಗಡೆ, ಯಂ.ಆರ್.ಹೆಗಡೆ ಮೊದಲಾದವರಿದ್ದರು. ಈ ಕೆಳಗಿನ ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಾಗಿದೆ.

1. ವಿಯೆಟ್ನಾನಿಂದಆಮದು ಆಗುವ ಕಾಳು ಮೆಣಸಿನಲ್ಲಿ ವಿಷಕಾರಕಅಂಶಗಳಿರುವುದರಿಂದ ಅದನ್ನುಕಡ್ಡಾಯವಾಗಿರಾಸಾಯನಿಕ ಪರೀಕ್ಷೆಗೊಳಪಡಿಸಬೇಕು.

2. ಶ್ರೀಲಂಕಾದಿಂದ ಅಮದಾಗುವ ಕಾಳು ಮೆಣಸು, ಅದು ವಿಯೆಟ್ನಾಂ ಕಾಳು ಮೆಣಸುಆಗಿದ್ದು, ಅದರ ಮೂಲವನ್ನು ಪರಿಶೋಧಿಸಬೇಕು.

3. ಶ್ರೀಲಂಕಾ ಬೆಳೆಯುವ ಕಾಳು ಮೆಣಸಿಗಿಂತ ಹೆಚ್ಚಗೆ ಪ್ರಮಾಣದ ಕಾಳು ಮೆಣಸನ್ನುರಫ್ತುಮಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

4. ಬಾಂಗ್ಲಾ ಮತ್ತು ಮಯನ್ಮಾರಿನಿಂದ ಕಾನೂನು ಬಾಹಿರವಾಗಿ ವಿಯೆಟ್ನಾಂ ಕಾಳು ಮೆಣಸನ್ನು ಭಾರತಕ್ಕೆ ನುಗ್ಗಿಸುತ್ತಿದ್ದುಅದನ್ನುತಡೆಯುವಕ್ರಮ ಕೈಗೊಳ್ಳಬೇಕು.

5. ಶ್ರೀಲಂಕಾದಿಂದ ಆಮದಾಗುವ ಕಾಳು ಮೆಣಸು ವ್ಯವಹಾರದಲ್ಲಿಕೋಟ್ಯಾಂತರರೂಪಾಯಿಯತೆರಿಗೆ ವಂಚನೆ ಆಗುತ್ತಿದ್ದು ಈ ಬಗ್ಗೆ ತಕ್ಷಣಕ್ರಮ ಕೈಗೊಳ್ಳಬೇಕು.

6. ಕಾಳು ಮೆಣಸನ್ನು ಕಾಳು ಮೆಣಸು ಬೆಳೆಯದೇ ಇರುವ ದೇಶಗಳಾದ ಜರ್ಮನಿ, ಸ್ಮೈನ್, ಇಟಲಿ ಮೊದಲಾದ ದೇಶಗಳ ಹೆಸರಿನಲ್ಲಿಆಮದಾಗುತ್ತಿದ್ದುಇದರಲ್ಲಿ ಭಾರೀಅವ್ಯವಹಾರಆಗುತ್ತಿರುವಗುಮಾನಿ ಇದೆ.  ಈ ಬಗ್ಗೆ ಕ್ರಮ ಕೈಗೊಳ್ಳುವುದು.

ಮೊದಲಾದ ಬೇಡಿಕೆಗಳನ್ನು ಸರಕಾರಕ್ಕೆ ಮತ್ತೆ ಸಲ್ಲಿಸಿದೆ.  ಸಚಿವರು, ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ವಿಷಯವನ್ನುಗಂಭೀರವಾಗಿ ಪರಿಗಣಿಸಿ ತಕ್ಷಣಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಆದುದರಿಂದ ಮುಂದಿನ ಕೆಲವೇ ಸಮಯದಲ್ಲಿ ಕಾಳು ಮೆಣಸುದರ ಕನಿಷ್ಟ ರೂ.450/- ನ್ನುದಾಟಬಹುದು.  ರೈತರು ಈ ಬಗ್ಗೆ ಭಯ ಪಡುವುದು ಬೇಡಎಂದು ಕಾಳು ಮೆಣಸು ಸಮನ್ವಯ ಸಮಿತಿಯ ಸಂಚಾಲಕ-ಅಡಿಕೆ ಮಾರಾಟಫೆಡರೇಶನ್‍ನಅಧ್ಯಕ್ಷ ಶ್ರೀ.ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.


Spread the love