ಕಾವ್ಯ ಸಾವು; ನಿಷ್ಪಕ್ಷಪಾತ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

Spread the love

ಕಾವ್ಯ ಸಾವು; ನಿಷ್ಪಕ್ಷಪಾತ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

ಮಂಗಳೂರು: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಳ ನಿಗೂಢ ಸಾವಿನ ಕುರಿತಾಗಿ ನಿಸ್ಪಕ್ಷಪಾತವಾದ ತನಿಖೆಯನ್ನು ನಡೆಸಿ ಯಾರಾದರೂ ತಪ್ಪಿತಸ್ಥರಿದ್ದಲ್ಲಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರು ಪೋಲಿಸ್ ಆಯುಕ್ತರಾದ ಟಿ.ಆರ್.ಸುರೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ. ಉಪಾಧ್ಯಕ್ಷ ಶೌವಾದ್ ಗೂನಡ್ಕ ನೇತೃತ್ವದ ನಿಯೋಗವು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತು. ಮನವಿಯನ್ನು ಸ್ವೀಕರಿಸಿದ ಪೋಲಿಸ್ ಆಯುಕ್ತರು ಈ ಕುರಿತಾಗಿ ವಿಶೇಷ ತನಿಖೆಯನ್ನು ನಡೆಸುವುದಾಗಿ ಭರವಸೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಶೌವಾದ್ ಗೂನಡ್ಕರವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಕಾವ್ಯಾಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುಡುಕಿನ ನಿರ್ಧಾರಕ್ಕೆ ಬರಲಾರಳು ಇದರ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದ್ದು ಇದು ಸೂಕ್ತ ತನಿಖೆಯ ಮೂಲಕವೇ ಹೊರಬರಬೇಕಾಗಿದೆ ಎಂದು ಅವರು ತಿಳಿಸಿದರು

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ.ಮುಖಂಡರಾದ ಸ್ವಸ್ತಿಕ್ ಸುವರ್ಣ, ಶಾಝ್, ದೀಕ್ಷಿತ್ ಅತ್ತಾವರ, ರಶ್ಮಿತಾ, ಜೊವಿಟ ಡಿ’ಸೋಜ, ಶಾಂತಿ ಪ್ರಸಾದ್, ಲೂಕ್ ಡಿ’ಸೋಜ, ಹನೀಸ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.


Spread the love