ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ : ಎನ್.ಎಸ್.ಯು.ಐ ವತಿಯಿಂದ ಗೌರವಾರ್ಪಣೆ

Spread the love

ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ : ಎನ್.ಎಸ್.ಯು.ಐ ವತಿಯಿಂದ ಗೌರವಾರ್ಪಣೆ

ಕೊಣಾಜೆ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಎನ್.ಎಸ್.ಯು.ಐ ವತಿಯಿಂದ ಗೌರವಾರ್ಪಣೆ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮೊಂಬತ್ತಿ ನಡಿಗೆ, ಮೌನ ಪ್ರಾರ್ಥನೆ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವಿನಲ್ಲಿ ಗುರುವಾರ ನಡೆಯಿತು.

ಉಳ್ಳಾಲ ತಾಲೂಕು ಎನ್.ಎಸ್.ಯು.ಐ ಅಧ್ಯಕ್ಷ ಶಾಹಿಲ್ ಮಂಚಿಲ ಮಾತನಾಡಿ, ಭಯೋತ್ಪಾದಕರ ದಾಳಿ ಸಹಿಸಲಾಗದು. ಕೇಂದ್ರ ಸರಕಾರ ಭಾರತೀಯ ಪ್ರವಾಸಿಗರನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮಾತನಾಡಿ, ಕಾಶ್ಮೀರದಲ್ಲಿ ನಡೆದಿರುವ ಪೈಶಾಚಿಕ ಮತ್ತು ಹೀನ ಕೃತ್ಯ ಖಂಡನೀಯ. ಭಯೋತ್ಪಾದಕರು ರಾಕ್ಷಸ ಪ್ರವೃತಿಯವರು. ಅವರ ಮೇಲೆ ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಪಾವೂರು, ಬಾಳೆಪುಣಿ ಗ್ರಾಪಂ ಉಪಾಧ್ಯಕ್ಷ ಸಿ.ಎಂ. ಶರೀಫ್ ಪಟ್ಟೋರಿ, ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಇಫಿಕಾರ್ ಫರೀದ್, ಎನ್.ಎಸ್.ಯು.ಐ ಉಪಾಧ್ಯಕ್ಷ ದರ್ಶನ್ ಕುಂದರ್, ಅಭಿಷೇಕ್ ವಾಲ್ಮೀಕಿ, ಎನ್.ಎಸ್.ಯು.ಐ. ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಅಶ್ವಿನ್ ಮತ್ತು ಮಿಹಾನ್ ಹುಸೇನ್, ಕೋಟೆಕಾರ್ ವಲಯ ಎನ್.ಎಸ್.ಯು.ಐ. ಅಧ್ಯಕ್ಷ ಫಹೀಂ, ಅಶ್ರಫ್ ಉಲ್ಲಾಳ್, ಉಳ್ಳಾಲ ತಾಲೂಕು ಎನ್.ಎಸ್.ಯು.ಐ.ಉಪಾಧ್ಯಕ್ಷ ವಿಶಾಲ್ ಲೋಬೋ, ಸಾಮಾಜಿಕ ಜಾಲತಾಣದ ಉಸ್ತುವಾರಿ ಫಾಝಿಲ್, ಶಾಫಿ ನಡುಪದವು, ಶಹಲ್ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments