Home Mangalorean News Kannada News ಕಾಸರಗೋಡು ಚಿನ್ನಾ 60ರ ತಾರಾಲೋಕ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು ಚಿನ್ನಾ 60ರ ತಾರಾಲೋಕ ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಕಾಸರಗೋಡು ಚಿನ್ನಾ 60ರ ತಾರಾಲೋಕ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ರಂಗಕರ್ಮಿ, ಸಿನಿಮಾ ನಟ, ಸಂಘಟಕ ಕಾಸರಗೋಡು ಚಿನ್ನಾ ಅವರ 6೦ರ ಹರೆಯದಲ್ಲಿದ್ದು, ಅವರ ಅಭಿನಂದನಾ ಕಾರ್ಯಕ್ರಮ ಡಿಸೆಂಬರ್ 24ರಂದು ಮಂಗಳೂರಿನ ಪುರಭವನದಲ್ಲಿ ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಸಾಹಿತಿ ಡಾ.ನಾ.ದಾಮೋದರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಕಾಸರಗೋಡು ಚಿನ್ನಾರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಯಿಸಿದ ಸಿನಿಮಾಗಳ ಪ್ರದರ್ಶನ, ವಿಚಾರಗೋಷ್ಠಿ, ಸಂವಾದ, ಗೀತ ಝೇಂಕಾರ, ಚಿನ್ನಾ ಜೊತೆ ಲಘು ನಿಮಿಷ, ಅಭಿನಂದನಾ ಕಾರ್ಯಕ್ರಮ ಹೀಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿನೆಮಾ ನಿರ್ಮಾಪಕ ಟಿಎ ಶ್ರೀನಿವಾಸ್, ಶಶಿರಾಜ್ ಕಾವೂರು, ಕುಂಬ್ಲೆ ನರಸಿಂಹ ಪ್ರಭು, ಗೀತಾಕಿಣಿ, ಪುಷ್ಪಲತಾ ಭಟ್, ಸತ್ಯನಾರಾಯಣ, ವಿಠಲಕುಡ್ವ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ವೇಣು ಶರ್ಮಾ, ಸ್ಮಿತಾ ಶೆಣೈ, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಲಕ್ಷ್ಮಣ್ ಕುಮಾರ್ ಮಲ್ಲೂರು ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version