Home Mangalorean News Kannada News ಕಿಂಡಿ ಅಣೆಕಟ್ಟು ಹಾಗೂ ಕೆರೆಗಳ ಅಭಿವೃದ್ಧಿಗೆ ರೂ. 5.00 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್

ಕಿಂಡಿ ಅಣೆಕಟ್ಟು ಹಾಗೂ ಕೆರೆಗಳ ಅಭಿವೃದ್ಧಿಗೆ ರೂ. 5.00 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್

Spread the love

ಕಿಂಡಿ ಅಣೆಕಟ್ಟು ಹಾಗೂ ಕೆರೆಗಳ ಅಭಿವೃದ್ಧಿಗೆ ರೂ. 5.00 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಹೊಸ ಕಿಂಡಿ ಅಣೆಕಟ್ಟು ಹಾಗೂ ಕೆರೆಗಳ ಅಭಿವೃದ್ಧಿಗೆ ರೂ. 5.00 ಕೋಟಿ ಅನುದಾನ ಈ ಕೆಳಗಿನಂತೆ ಬಿಡುಗಡೆಯಾಗಿದ್ದು ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಲಾಗುವುದು ಈ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮತ್ತು ಕೆರಗಳ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಿ ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಿಂಡಿ ಅಣೆಕಟ್ಟುಗಳಿಗೆ : ರೂ. 3.40 ಕೋಟಿ
1. ನಾಲ್ಕೂರು ಗ್ರಾಮದ ಮರಾಳಿ ಉಬ್ಬೇರ್‍ಕಟ್ಟು ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಾಣ.- ರೂ.40.00 ಲಕ್ಷ
2. ಕುಂಬ್ರಗೋಡು ಗ್ರಾಮದ ತಿಮ್ಮ ತಿಲಿಸ್ ಮನೆ ಬಳಿ ಕಿಂಡಿಅಣೆಕಟ್ಟು ನಿರ್ಮಾಣ. – ರೂ.15.00 ಲಕ್ಷ
3. ಹಾರಾಡಿ ಗ್ರಾಮದ ಕಲ್ಲುಸಂಕ ಎಂಬಲ್ಲಿ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ. ರೂ.15.00 ಲಕ್ಷ
4. ಹಾರಾಡಿ ಪಂಚಾಯತ್ ಬೈಕಾಡಿ ಹೊಳೆ ಬದಿ ಹತ್ತಿರ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ. ರೂ.15.00 ಲಕ್ಷ
5. ಹಂದಾಡಿ ಪಂಚಾಯತ್ ಕುಮ್ರುಗೋಡು ಗ್ರಾಮದಲ್ಲಿ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ. ರೂ.20.00 ಲಕ್ಷ
6. ಬಡಾನಿಡಿಯೂರು ತೋಡು ಬಳಿ ಕಿಂಡಿಅಣೆಕಟ್ಟು ಸಮೇತ ಸೇತುವೆ ನಿರ್ಮಾಣ ಕಾಮಗಾರಿ. ರೂ.45.00 ಲಕ್ಷ
7. ಕಡೇಕಾರ್ ಗ್ರಾಮಪಂಚಾಯತ್ ಕಡೇಕಾರು ಕೊಳ ಹಾಗೂ ಇಂದಿರಾ ಮೆಂಡನ್‍ರವರ ಮನೆ ಬಳಿ ಕಿಂಡಿಅಣೆಕಟ್ಟು ನಿರ್ಮಾಣ ರೂ.150.00 ಲಕ್ಷ
8. ಚಾಂತರು ಗ್ರಾಮದ ಇಡ್ಲಿ ಪ್ಯಾಟ್ಕರಿ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ ರೂ.15.00 ಲಕ್ಷ
9. ಕೊಕ್ಕರ್ಣೆ ಗ್ರಾಮ ಪಂಚಾಯತ್ ಸೂರಾಲು ಗ್ರಾಮದ ಸೂರಾಲು ಉಜಿರೆಗುಳಿ ಹತ್ತಿರ ಕಿಂಡಿ ಅಣೆಕಟ್ಟು ನಿರ್ಮಾಣ ರೂ.25.00 ಲಕ್ಷ

ಕೆರೆ ಅಭಿವೃದ್ಧಿಗೆ : ರೂ. 1.60 ಕೋಟಿ

1. ಹಾವಂಜೆ ಗ್ರಾಮಪಂಚಾಯತಿಯ ಕಿಳಿಂಜೆ ಗ್ರಾಮದ ಮದ್ಮಲ್ ಕೆರೆ ಅಭಿವೃದ್ಧಿ. ರೂ.40.00 ಲಕ್ಷ
2. ಕುಂಜಾಲು ಆರೂರು ಗ್ರಾಮದ ಬೆಳ್ಮಾರು ಪಡುಬೈಲು ಇರುವ ಸರ್ಕಾರಿ ಕೆರೆ ಅಭಿವೃದ್ಧಿ. ರೂ.30.00 ಲಕ್ಷ
3. ಪರ್ಕಳ ಗ್ರಾಮದ ಶ್ರ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಕೆರೆ ಅಭಿವೃದ್ಧಿ. ರೂ.60.00 ಲಕ್ಷ
4. ಹಂದಾಡಿ ಗ್ರಾಮದ ಬೆಣ್ಣೆಕುದ್ರುವಿನ ತಾವರೆಕೆರೆ ಅಭಿವೃದ್ಧಿ. ರೂ.30.00 ಲಕ್ಷ


Spread the love

Exit mobile version